ಮುಂದಿನ ವಾರದಲ್ಲಿ ನಾವೆಲ್ಲರೂ ಕಾಯುತ್ತಿರುವ ಗೌರಿ ಗಣೇಶ ಹಬ್ಬ ಬರುತ್ತಿದೆ ಎಲ್ಲೆಲ್ಲೂ ಸಡಗರ ಸಂಭ್ರಮ ಕಂಡುಬರುತ್ತದೆ. ಗೌರಿ ಗಣೇಶ ಹಬ್ಬಕ್ಕೆ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಪೂಜೆಯ ಫಲಗಳೇನು ಮುಂತಾದ ಅನೇಕ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಸಾಮಾನ್ಯವಾಗಿ ಭಾದ್ರಪದ ಶುಕ್ಲದ ತದಿಗೆಯ ದಿನ ಗೌರಿ ಹಬ್ಬ ಭಾದ್ರಪದ ಶುಕ್ಲ ಚತುರ್ಥಿ ದಿನ ಗಣೇಶ ಹಬ್ಬ ಇರುತ್ತದೆ. ಗೌರಿ ಹಬ್ಬದ ವಿಶೇಷತೆ ಎಂದರೆ ಪಾರ್ವತಿ ದೇವಿಯ ತವರು ಮನೆ ಭೂಮಿಯಾಗಿದ್ದರಿಂದ ಗೌರಿ ಭೂಮಿಗೆ ಬಂದು ಪ್ರತಿಯೊಬ್ಬರ ಮನೆಗೆ ಬಂದು ಬಾಗಿನವನ್ನು ಸ್ವೀಕರಿಸಿ ಭೋಜನ ಮಾಡಿ ಅನುಗ್ರಹಿಸುತ್ತಾಳೆ ಎಂಬ ಪ್ರತೀತಿಯಿದೆ. ಗೌರಿ ಹಬ್ಬದ ಮರುದಿನ ಗಣೇಶ ಬಂದು ಪೂಜೆಯನ್ನು ನೆರವೇರಿಸಿ ತನ್ನ ತಾಯಿಯನ್ನು ಕರೆದುಕೊಂಡು ಕೈಲಾಸಕ್ಕೆ ಹೋಗುತ್ತಾನೆ ಎಂಬುದು ಪೌರಾಣಿಕ ಹಿನ್ನೆಲೆಯಾಗಿದೆ.
ಈ ವರ್ಷ ಗೌರಿ ಗಣೇಶ ಹಬ್ಬದ ಬಗ್ಗೆ ಒಂದು ಸಣ್ಣ ಗೊಂದಲವಿದೆ ಸೆಪ್ಟೆಂಬರ್ 18 ಸೋಮವಾರದಂದು ಗೌರಿ ಹಬ್ಬವಿದೆ ಅದೆ ದಿನ ಗಣೇಶ ಚತುರ್ಥಿಯು ಕೂಡ ಇದೆ ಸೋಮವಾರದಂದೆ ಬೆಳಿಗ್ಗೆ 9 ಗಂಟೆ 13 ನಿಮಿಷದಿಂದ ಚತುರ್ಥಿ ಪ್ರಾರಂಭವಾಗುತ್ತದೆ ಅಂದರೆ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಬೇಕು ಬೆಳಗ್ಗೆ 9 ಗಂಟೆಯ ಮೊದಲು ಗೌರಿ ಹಬ್ಬವನ್ನು ಆಚರಿಸಬೇಕು. ಚತುರ್ಥಿ 18 ನೆ ತಾರೀಖು ಸೋಮವಾರ 9 ಗಂಟೆ 13 ನಿಮಿಷದಿಂದ ಮರುದಿನ ಮಂಗಳವಾರ 9 ಗಂಟೆಯವರೆಗೂ ಇರುತ್ತದೆ.
ನಾವು ಚಾಂದ್ರಮಾನ ಪದ್ಧತಿಯನ್ನು ಅನುಸರಿಸುತ್ತಿರುವುದರಿಂದ ಸೋಮವಾರದಂದೆ ಗಣೇಶ ಹಬ್ಬವನ್ನು ಆಚರಿಸಬೇಕಾಗುತ್ತದೆ ಸೌರಮಾನ ಪದ್ದತಿಯಾಗಿದ್ದರೆ ಮಂಗಳವಾರ ಗಣೇಶ ಚತುರ್ಥಿಯನ್ನು ಆಚರಿಸಬಹುದು. ರವಿವಾರ ಮಧ್ಯಾಹ್ನದ ನಂತರ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ತೆಗೆದುಕೊಂಡು ಮಣ್ಣಿನಿಂದ ಮಾಡಿದ ಗೌರಿ ಗಣೇಶನ ಮೂರ್ತಿಯನ್ನು ತಟ್ಟೆಯಲ್ಲಿ ಇಟ್ಟುಕೊಂಡು ಮನೆಗೆ ತರಬೇಕಾಗುತ್ತದೆ ಈಗಿನ ದಿನಮಾನಗಳಲ್ಲಿ ಅಂಗಡಿಯಲ್ಲಿ ಮೂರ್ತಿಯನ್ನು ಮಾರುತ್ತಾರೆ ಅಂಗಡಿಗೆ ಹೋಗಿ ಮೂರ್ತಿಯನ್ನು ಕೈಯಲ್ಲಿ ತೆಗೆದುಕೊಳ್ಳಬಾರದು ಒಂದು ತಟ್ಟೆಯಲ್ಲಿ ಬ್ಲೌಸ್ ಪೀಸ್ ಇಟ್ಟು ಅದರ ಮೇಲೆ ಅಕ್ಕಿ ಹಾಕಿರಬೇಕು ಮನೆಯ ಎಲ್ಲಾ ಸದಸ್ಯರು ಅಂಗಡಿಗೆ ಹೋಗಬೇಕು ಗಂಡುಮಕ್ಕಳು ಘಂಟೆ ಬಾರಿಸಬೇಕು ಪಾದರಕ್ಷೆ ಹಾಕಿಕೊಳ್ಳದೆ ಸಣ್ಣದಾದ ಗೌರಿ ಹಾಗೂ ದೊಡ್ಡದಾದ ಗಣೇಶನ ವಿಗ್ರಹವನ್ನು ಘಂಟೆಯ ಶಬ್ಧ ಮಾಡುತ್ತಾ ಮನೆಗೆ ತೆಗೆದುಕೊಂಡು ಬರಬೇಕು ರವಿವಾರ ತಂದು ದೇವರ ಮನೆಯ ಒಂದು ಕಡೆ ಇಡಬೇಕು
ಗೌರಿ ಗಣೇಶನನ್ನು ಮನೆಗೆ ತಂದಾಗ ಬಾಗಿಲಲ್ಲಿ ಕೆಂಪು ನೀರಿನ ಆರತಿಯನ್ನು ಮಾಡಬೇಕು. ಅದೆ ದಿನ ಗಣಪತಿಗೆ ಪ್ರಿಯವಾದ ಪುಷ್ಪಗಳು ಮಾವಿನ ತೋರಣ, ಬಾಳೆ ಎಲೆ ಬಾಳೆ ಕಂಬ ಅಡುಗೆಗೆ ಬೇಕಾದ ವಸ್ತುಗಳನ್ನು ತಂದಿಟ್ಟುಕೊಳ್ಳಬೇಕು. ಸೋಮವಾರದಂದು ಬೆಳಗ್ಗೆ ಬೇಗ ಎದ್ದು ಮನೆಯನ್ನು ಸಾರಿಸಿ ಗುಡಿಸಿ ಮನೆಯ ಎದುರಿಗೆ ರಂಗೋಲಿ ಹಾಕಿ ಮಾವಿನ ಎಲೆ ತೋರಣ ಕಟ್ಟಿ ಹೂವನ್ನೆಲ್ಲಾ ಹಾಕಿ ನಂತರ ನೈವೇದ್ಯಕ್ಕೆ ತಯಾರಿ ಮಾಡಿಕೊಳ್ಳಬೇಕು. ಯಾವುದೆ ಕಾರಣಕ್ಕೂ ಮನೆಯ ಬಾಗಿಲಿಗೆ ಪ್ಲಾಸ್ಟಿಕ್ ತೋರಣ ಪ್ಲಾಸ್ಟಿಕ್ ಹೂಗಳಿಂದ ಅಲಂಕರಿಸಬಾರದು. ಮನೆಯ ಹೆಣ್ಣು ಮಕ್ಕಳು ಬಾಗಿನವನ್ನು ಇಡಬೇಕಾಗುತ್ತದೆ ಬಾಗಿನಕ್ಕೆ ಎರಡು ಮರದ ಬಾಗಿನ ಒಂದರ ಕೆಳಗೆ ಒಂದನ್ನು ಇಡಬೇಕು, ಅದರ ಮೇಲೆ ಬ್ಲೌಸ್ ಪೀಸ್ ಅನ್ನು ಹಾಸಿ ಅಕ್ಕಿ ಅಥವಾ ಗೋಧಿಯನ್ನು ಹಾಕಬೇಕು ವಿಶೇಷವಾಗಿ ಕುಂಕುಮ ಅರಿಶಿಣ ಬಳೆ ಕಾಡಿಗೆ ಓಲೆ ವೀಳ್ಯದೆಲೆ ಅಡಿಕೆ ಬೇಳೆ ದಕ್ಷಿಣೆ ತೆಂಗಿನಕಾಯಿ ಸೀರೆ ಅಥವಾ ಬ್ಲೌಸ್ ಪೀಸ್ ಬೆಲ್ಲ ಹಣ್ಣು ಅಕ್ಕಿಯ ಸಣ್ಣ ಪ್ಯಾಕೆಟ್ ಶಕ್ತ್ಯಾನುಸಾರ ಒಂದು ಬೆಳ್ಳಿಯ ನಾಣ್ಯ ಇಟ್ಟು ಬಾಗಿನಕ್ಕೆ ಗೆಜ್ಜೆ ವಸ್ತ್ರ ಹಾಕಿ ಸಿದ್ಧತೆ ಮಾಡಿಟ್ಟುಕೊಳ್ಳಬೇಕು.
ಪೂಜೆ ಮುಗಿದ ನಂತರ ಮರದ ಬಾಗಿನಕ್ಕೆ ಪೂಜೆ ಮಾಡಿ ಸುಮಂಗಲಿಯರಿಗೆ ಕೊಡಬೇಕಾಗುತ್ತದೆ ಶಕ್ತ್ಯಾನುಸಾರ ಒಂದು ಮೂರು ಐದು ಅಥವಾ ಒಂಭತ್ತು ಬಾಗಿನಗಳನ್ನು ಕೊಡಬಹುದು ಒಂದು ಬಾಗಿನವನ್ನು ಗೌರಿಗೆ ಸಮರ್ಪಣೆ ಮಾಡಿ ಉಳಿದ ಬಾಗಿನಗಳನ್ನು ಸುಮಂಗಲಿಯರಿಗೆ ಕೊಡಬೇಕು. ಕಲಶ ಇಡುವುದಾದರೆ ಎರಡು ಕಲಶ ಇಡಬೇಕು ಕಲಶಕ್ಕೆ ಲಾವಂಚ, ಗಂಗಾಜಲ, ಬೆಳ್ಳಿ ನಾಣ್ಯ, ಕರ್ಪೂರ, ಚಿಲ್ಲರೆ, ದ್ರಾಕ್ಷಿ ಗೋಡಂಬಿ, ಖರ್ಜೂರ ಬೇಕಾಗುತ್ತದೆ ಕಲಶಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆ ಇಟ್ಟು ತೆಂಗಿನಕಾಯಿ ಇಟ್ಟು ಗೌರಿ ಮುಖ ಹಾಗೂ ಗಣೇಶನ ಮುಖ ಇಟ್ಟು ಗಣಪತಿ ಕಲಶಕ್ಕೆ ಪಂಚೆ ಮತ್ತು ಶಲ್ಯ ಗೌರಿಕಲಶಕ್ಕೆ ಸೀರೆ ರವಿಕೆ ಕಣ ಇಟ್ಟು ಹೂವನ್ನು ಹಾಕಿ ಅಲಂಕರಿಸಿ ಆರಾಧನೆ ಮಾಡಬೇಕು. ಈ ಹಬ್ಬದಲ್ಲಿ ಪೂಜೆ ವ್ರತ ಮುಗಿಯುವವರೆಗೂ ಏನನ್ನು ತಿನ್ನದೆ ಪೂಜೆ ಮುಗಿದ ನಂತರ ವಿಶೇಷ ಭೋಜನವನ್ನು ಸ್ವೀಕರಿಸಬೇಕು. ಗೌರಿಗೆ ಹೋಳಿಗೆ ಸಿಹಿತಿನಿಸು ಸಿಹಿ ಪೊಂಗಲ್ ಗಣೇಶನಿಗೆ ಸಿಹಿ ಕಡಬು ಕಬ್ಬು ಬೆಲ್ಲ ಪಂಚಫಲ ಮುಂತಾದವುಗಳು ಇವುಗಳಲ್ಲಿ ಎಷ್ಟು ಸಾಧ್ಯವೊ ಅಷ್ಟು ನೈವೇದ್ಯ ಮಾಡಬೇಕು. ಅಲಂಕಾರ ಮಾಡಿದ ಗೌರಿ ಗಣೇಶನ ವಿಗ್ರಹಕ್ಕೆ ಪೂಜೆ ಮಾಡಬೇಕು
ಒಂದು ತಟ್ಟೆಯಲ್ಲಿ ಅರಿಶಿಣ, ಕುಂಕುಮ, ಗಂಧ, ಅಕ್ಷತೆ, ಬಿಡಿಹೂಗಳನ್ನು , ಅಡಿಕೆ, ಚಿಲ್ಲರೆ ಇಟ್ಟುಕೊಂಡು ಇನ್ನೊಂದು ತಟ್ಟೆಯಲ್ಲಿ 3 ಅಥವಾ 5 ರೀತಿಯ ಬಿಡಿ ಹೂವು ಇನ್ನೊಂದು ತಟ್ಟೆಯಲ್ಲಿ ಪಾತ್ರೆಗಳು ಗಣಪತಿಗೆ ಪ್ರಿಯವಾದ ಗರಿಕೆ ಇಟ್ಟುಕೊಳ್ಳಬೇಕು. ಮನೆಯಲ್ಲಿ ಗಣಪತಿಯ ವಿಗ್ರಹ ಇದ್ದರೆ ಅದನ್ನು ಒಂದು ತಟ್ಟೆಯಲ್ಲಿ ಇಟ್ಟುಕೊಂಡು ಹಾಲು ಮೊಸರು ಜೇನುತುಪ್ಪ ಸಕ್ಕರೆ ಒಂದೆರಡು ಬಾಳೆಹಣ್ಣನ್ನು ಕಟ್ ಮಾಡಿ ಪಂಚಾಮೃತವನ್ನು ಸಿದ್ಧಪಡಿಸಿಕೊಳ್ಳಬೇಕು. ಪೂಜೆ ಮಾಡುವಾಗ ಮೊದಲು ದೀಪವನ್ನು ಹಚ್ಚಬೇಕು ತುಪ್ಪದ ದೀಪ ಹಚ್ಚಿದರೆ ಒಳ್ಳೆಯದು ಇಲ್ಲ ಎಳ್ಳೆಣ್ಣೆ ದೀಪ ಹಚ್ಚಬಹುದು. ದೇವರಮನೆ ಅಲಂಕಾರವಾಗಿರಬೇಕು, ದೇವರಿಗೆ ಜನಿವಾರವನ್ನು ಸಮರ್ಪಣೆ ಮಾಡಬೇಕು.
ಗೆಜ್ಜೆ ವಸ್ತ್ರವನ್ನು ಗಣಪತಿ ಹಾಗೂ ಗೌರಿಗೆ ಹಾಕಬೇಕು ನಂತರ ಘಂಟೆಯನಾದ ಮಾಡಿ ಸಂಕಲ್ಪ ಮಾಡಬೇಕು ನಂತರ ಗಂಗೆಯನ್ನು ಪ್ರಾರ್ಥನೆ ಮಾಡಬೇಕು ನೀರನ್ನು ಪ್ರೋಕ್ಷಣೆ ಮಾಡಬೇಕು. ನಂತರ ಪುರೋಹಿತರನ್ನು ಕರೆದು ಪೂಜೆ ಮಾಡಿಸಿದರೆ ಒಳ್ಳೆಯದು ಇಲ್ಲವೆಂದರೆ ಗಣಪತಿ ಗೌರಿಯನ್ನು ಆವಾಹನೆ ಮಾಡಿ ಮಾಡಿ ಸ್ಥಾಪನೆ ಮಾಡಿ ಹಾಲು ತುಪ್ಪ ಮೊಸರು ಜೇನುತುಪ್ಪ ಇತ್ಯಾದಿಗಳನ್ನು ದೇವರಿಗೆ ಸಮರ್ಪಣೆ ಮಾಡಬೇಕು ಮಂಗಳಾರತಿಯನ್ನು ಮಾಡಬೇಕು ನಂತರ ವಿಗ್ರಹವನ್ನು ತೆಗೆದು ತೊಳೆದು ಕುಂಕುಮ ಗಂಧವನ್ನು ಹಚ್ಚಿ ಗಣಪತಿಗೆ ಕೆಂಪು ಹೂವಿನಿಂದ ಅರ್ಚನೆ ಮಾಡಿ ದೂಪ ದೀಪವನ್ನು ಬೆಳಗಬೇಕು ವೃತದ ಕಥೆಯನ್ನು ಹೇಳಿದ ನಂತರ ಕೆಂಪು ನೀರಿನ ಆರತಿ ಮಾಡಿ ಹೆಣ್ಣು ಮಕ್ಕಳು ಹಾಡನ್ನು ಹಾಡಬಹುದು ನೈವೇದ್ಯ ಮಾಡಬೇಕು.
ಪೂಜೆ ಮುಗಿದ ನಂತರ 16 ಎಳೆ ದಾರವನ್ನು 16 ಗಂಟು ಹಾಕಿ ಒಂದು ಬಾಗಿನದ ಗಂಟನ್ನು ತಯಾರಿ ಮಾಡಿರಬೇಕು ಅದಕ್ಕೆ ಹಾಗೂ ಗೌರಿ ವಿಗ್ರಹಕ್ಕೆ ಮುಟ್ಟಿಸಿ ಬೆಳ್ಳಿಯ ಬಟ್ಟಲಿನಲ್ಲಿ ಅಥವಾ ತಟ್ಟೆಯಲ್ಲಿ ಇಡಬೇಕು ದಾರಕ್ಕೆ ಅರಿಶಿಣ ಹಾಕಿ ಪೂಜೆಯ ನಂತರ ಮನೆಯವರೆಲ್ಲರೂ ಕೈಗೆ ಕಟ್ಟಿಕೊಳ್ಳಬೇಕು. ಗೌರಿ ಗಣೇಶ ಹಬ್ಬದ ಪೂಜೆಯನ್ನು ಮಾಡುವುದರಿಂದ ಯಾವೆಲ್ಲಾ ಫಲ ಸಿಗಲಿದೆ ಎಂದು ನೋಡುವುದಾದರೆ ಮದುವೆಯಾಗಿರುವ ದಂಪತಿಗಳು ಸುಖದಿಂದ ಇರುತ್ತಾರೆ. ಮದುವೆಯಾಗದ ಹೆಣ್ಣು ಮಕ್ಕಳು ಪೂಜೆ ಮಾಡುವುದರಿಂದ ವಿವಾಹಕ್ಕೆ ಇರುವ ಅಡ್ಡಿ ಆತಂಕಗಳು ದೂರವಾಗಿ ಕಂಕಣ ಬಲ ಕೂಡಿಬರುತ್ತದೆ.
ರಕ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ದೂರವಾಗುತ್ತದೆ, ಋಣಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ಮನೆ ತುಂಬಾ ತುಂಬುತ್ತದೆ, ಹೆಣ್ಣು ಮಕ್ಕಳಿಗೆ ಕುಜ ದೋಷವಿದ್ದಲ್ಲಿ ನಿವಾರಣೆಯಾಗುತ್ತದೆ. ಹೆಣ್ಣು ಮಕ್ಕಳು ಗೌರಿ ಪೂಜೆಯನ್ನು ಮಾಡಬೇಕು ಗಂಡು ಮಕ್ಕಳು ಗಣಪತಿ ಪೂಜೆಯನ್ನು ಮಾಡಬೇಕು ಗಣಪತಿ ಪೂಜೆ ಮಾಡುವುದರಿಂದ ಗಂಡು ಮಕ್ಕಳಿಗೆ ಕೈಗೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ. ಹೊಟ್ಟೆಗೆ ಸಂಬಂಧಿತ ರೋಗಗಳು ನಿವಾರಣೆಯಾಗುತ್ತವೆ, ಗಂಡುಮಕ್ಕಳಿಗೆ ವಿವಾಹಕ್ಕೆ ಬೇಕಾದ ಆಶೀರ್ವಾದ ದೊರೆಯುತ್ತದೆ, ವಿದ್ಯಾರ್ಥಿಗಳಿಗೆ ಆಶಿರ್ವಾದ ಸಿಗಲಿದೆ.
ಪೂಜೆಯ ನಂತರ ಮನೆಯವರೆಲ್ಲರೂ ಕುಳಿತುಕೊಂಡು ಭೋಜನವನ್ನು ಸ್ವೀಕರಿಸಬೇಕು. ಮದುವೆ ಮಾಡಿಕೊಟ್ಟ ಮಗಳ ಮನೆಗೆ ಹೋಗಿ ಸಹೋದರ ಅಥವಾ ತಂದೆ ತಾಯಿ ಮಗಳನ್ನು ಗೌರಿ ಹಬ್ಬಕ್ಕೆ ವಿಶೇಷವಾಗಿ ಕರೆಯುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿದೆ. ಗೌರಿ ಹಬ್ಬದ ದಿನ ಹೆಣ್ಣು ಮಕ್ಕಳನ್ನು ನೋಯಿಸಬಾರದು ಒಟ್ಟಿನಲ್ಲಿ ಗೌರಿ ಗಣೇಶ ಹಬ್ಬದಲ್ಲಿ ಭಕ್ತಿ ಭಾವನೆಯಿಂದ ಪೂಜೆ ಮಾಡಿದ್ದಲ್ಲಿ ಬೇಡಿಕೆ ಈಡೇರುತ್ತದೆ ನಿಮಗೆಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು