Dunia Vijay and wife Kirthi: ಸ್ನೇಹಿತರೆ, ಖಳನಟನ ಪಾತ್ರರಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಹ ದುನಿಯಾ ವಿಜಯ್(Duniya Vijay) ಸದ್ಯ ಚಂದನವನದಲ್ಲಿ ತಮ್ಮದೇ ಆದ ಬ್ರಾಂಡ್ ಅನ್ನು ಸೃಷ್ಟಿ ಮಾಡಿದ್ದಾರೆ. ಹೌದು ಗೆಳೆಯರೇ ನಿರ್ದೇಶಕ ಸೂರಿ(Suri)ಯವರ ಡೈರೆಕ್ಷನ್ನಲ್ಲಿ ತಯಾರಾದ ದುನಿಯಾ(Duniya) ಸಿನಿಮಾದ ಮೂಲಕ ನಾಯಕನಟನಾಗಿ ಬಡ್ತಿ ಪಡೆದ ವಿಜಯ್ ನಿರೀಕ್ಷಿಸದ ಯಶಸ್ಸನ್ನು ಕಂಡರು.
ಹೀಗೆ ಸಿಕ್ಕಂತಹ ಗೆಲುವು ಹಾಗೂ ಅವಕಾಶಗಳನ್ನು ಸದ್ದುಪಯೋಗಪಡಿಸಿಕೊಳ್ಳುತ್ತಿರುವ ದುನಿಯಾ ವಿಜಯ್ ಅವರು ಇಂದಿಗೂ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಮಾಸ್ ನಟನೆಯಿಂದಲೇ ಹೆಚ್ಚಿನ ಜನಪ್ರಿಯತೆ ಪಡೆದಿರುವ ದುನಿಯಾ ವಿಜಯವರಿಗೆ ತಮ್ಮದೇ ಆದ ವಿಶೇಷ ಅಭಿಮಾನಿ ಬೆಳಗವಿದೆ.
ಸಿನಿಮಾದ ಹೊರತಾಗಿ ವೈಯಕ್ತಿಕ ವಿಚಾರದಿಂದಲೂ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ವಿಜಯ್ ಅವರು 1999 ಮನೆಯವರು ನೋಡಿದ ನಾಗರತ್ನ ಎಂಬ ಹುಡುಗಿಯನ್ನು ಮದುವೆಯಾಗಿದ್ದರು, ಆದರೆ ಇವರಿಬ್ಬರ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಎದುರಾಗುತ್ತಿದ್ದ ಕಿರಿಕಿರಿ, ಜಗಳಗಳು, ಮನಸ್ತಾಪಗಳಿಂದಾಗಿ 2013ರಲ್ಲಿ ವಿಚ್ಛೇದನ ಪಡೆದು ದೂರಾದರು.
ಅನಂತರ ಕೀರ್ತಿ ಪಟ್ಟಾಡಿ ಎಂಬ ಮಾಡೆಲ್ ಕಮ್ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ದುನಿಯಾ ವಿಜಯ್ ಆಕೆಯನ್ನೇ ಮದುವೆಯಾಗಬೇಕೆಂದು ನಿರ್ಧರಿಸಿ 2016ರಲ್ಲಿ ತಮ್ಮ ಪ್ರಿಯ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೀರ್ತಿ ಪಠಾಡಿ ಕೂಡ ಮಾಡ್ಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿದ್ದು ಮಿಸ್ಸಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತಮ್ಮ ಮುಡಿಯೇರಿಸಿಕೊಂಡಿದ್ದರು
ಕೆಲಸ ಮಾಡುತ್ತಿದ್ದ ಕೀರ್ತಿ ಪಟ್ಟಾಡಿ ಕಿಚ್ಚ ಸುದೀಪ್ ಹಾಗೂ ರಮ್ಯಾ ಅವರ ಕಾಂಬಿನೇಷನ್(combination) ನಲ್ಲಿ ತಯಾರಾದ ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಕೇವಲ ನಟಿಯಾಗಿ ಮಾತ್ರವಲ್ಲದೇ ಗಾಯಕಿಯಾಗಿ ಗುರುತಿಸಿಕೊಂಡಿರುವ ಇವರು ಹಲವಾರು ಜನಪದ ಕಾರ್ಯಕ್ರಮಗಳಲ್ಲಿ ಇಂದಿಗೂ ಭಾಗವಹಿಸಿ ತಮ್ಮ ಕಲೆಯನ್ನು ತೋರಪಡಿಸುತ್ತಿರುತ್ತಾರೆ.
ಆಗಾಗ ತಮ್ಮ ಗಂಡ ಹಾಗೂ ಮಕ್ಕಳೊಂದಿಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಕೀರ್ತಿಯವರು ಸದಾ ನೆಟ್ಟಿಗರೊಂದಿಗೆ ಒಡನಾಟದಲ್ಲಿರುತ್ತಾರೆ. ಹೀಗೆ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಸಪೋರ್ಟ್ ಮಾಡುತ್ತಾ ವೈಯಕ್ತಿಕ ಜೀವನದಲ್ಲಿಯೂ ಬಹಳ ಸಂತೋಷದಿಂದಿರುವ ದುನಿಯಾ ವಿಜಯ್(Duniya Vijay) ಹಾಗೂ ಕೀರ್ತಿಯವರ ನಡುವೆ ಬರೋಬ್ಬರಿ ಎಂಟು ವರ್ಷಗಳ ವಯಸ್ಸಿನ ಅಂತರವಿದೆ. Actor Bhavya: ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಗಳನ್ನು ಕೊಟ್ಟಂತ ಹಿರಿಯ ನಟಿ ಭವ್ಯ ಅವರ ಸುಂದರ ಕುಟುಂಬ ಹೇಗಿದೆ ನೋಡಿ