Dhruva Sarja 2nd Baby: ಸ್ನೇಹಿತರೆ ಕಳೆದ ಕೆಲವು ತಿಂಗಳು ತಮ್ಮ ಮನೆಗೆ ಮೊದಲ ಮಗುವಿನ ಆಗಮನವಾದಂತಹ ಸಿಹಿ ಸುದ್ದಿಯನ್ನು ಹಂಚಿಕೊಂಡು ಬಹಳ ಸಂತೋಷ ಪಟ್ಟಿದ್ದಂತಹ ಧ್ರುವ ಸರ್ಜಾ ಇದೀಗ ಮತ್ತೋರ್ವ ಅತಿಥಿಯನ್ನು ಬರಮಾಡಿಕೊಳ್ಳಲು ಬಹಳ ಉತ್ಸುಕರಾಗಿ ಕಾಯುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವಂತಹ ಧ್ರುವ ಸರ್ಜಾ ತಮ್ಮ ಮನೆಗೆ ಆಗಮಿಸಲಿರುವ ಅತಿಥಿಯ ಕುರಿತು ಮಾಹಿತಿ ನೀಡಿದ್ದಾರೆ.
ಕಾಲೇಜು ದಿನಗಳಲ್ಲೇ ಪ್ರೀತಿಸಿ ಮನೆಯವರಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ದ್ರುವ ಸರ್ಜಾ ಮತ್ತು ಪ್ರೇರಣ ದಂಪತಿಗಳು ಇತರರಿಗೆ ಆದರ್ಶವಾಗುವಂತೆ ಬದುಕುತ್ತಾ ಒಬ್ಬರ ಬದುಕಿಗೆ ಮತ್ತೊಬ್ಬರು ಸಪೋರ್ಟ್ ಮಾಡಿಕೊಂಡು ಎಲ್ಲೆಡೆ ಬಹಳ ಅನ್ಯೋನ್ಯವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ದಂಪತಿಗಳು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ತಮ್ಮ ಮನೆಗೆ ಹೆಣ್ಣು ಮಗುವನ್ನು ಬರಮಾಡಿಕೊಂಡರು. ಇದೀಗ ಮತ್ತೊಮ್ಮೆ ಪ್ರೇರಣಾ ತಾಯ್ತನದ ಸಂಭ್ರಮದಲ್ಲಿದ್ದಾರೆ.
ಹೌದು ಗೆಳೆಯರೇ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗಳು ತಮ್ಮ ಮಗಳ ಲಾಲನೆ ಪಾಲನೆಯಲ್ಲಿ ಬಿಸಿಯಾಗಿರುವಾಗಲೇ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವುದು ಅಭಿಮಾನಿಗಳಿಗೆ ಸಂತಸವನ್ನು ಹುಟ್ಟಿಸಿದೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಧ್ರುವ ಸರ್ಜಾ ಪ್ರಕೃತಿದತ್ತವಾದ ಕಾಡಿನ ಗ್ರಾಫಿಕ್ಸ್ ಅನ್ನು ಸೃಷ್ಟಿಸಿ ಮನೆಗೆ ಮತ್ತೊಂದು ಪ್ರೀತಿ, ಮತ್ತೊಂದು ಖುಷಿ ಬರಲಿದೆ ಎಂಬ ಸಂತಸದ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ.
ಹೌದು ಗೆಳೆಯರೇ ಪ್ಯಾರಾಶೂಟ್ ಒಳಗೆ ಧ್ರುವ ಸರ್ಜಾ ತಮ್ಮ ಮುದ್ದು ಮಗಳನ್ನು ಮುದ್ದಾಡುತ್ತಿರುವಾಗ ಹೆಂಡತಿ ಪ್ರೇರಣಾ ಅವರು ಬಿಳಿ ಬಣ್ಣದ ಗೌನ್ ಧರಿಸಿ ತಮ್ಮ ಪತಿಗೆ ಸಹಿ ಸುದ್ದಿ ಒಂದನ್ನು ಹೇಳುವ ರೀತಿ ವಿಡಿಯೋ ಮಾಡಿಸಿದ್ದಾರೆ. ಈ ವಿಡಿಯೋ ಕುರಿತಾದ ಸಾಕಷ್ಟ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸುದ್ದಿಗೊಳಗಾಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ನಮ್ಮ ಕನ್ನಡದ ಹೀರೋಗಳು ಈ ಪರಿ ಪಾಸ್ಟ್ ಇದ್ದಾರೆ ಎಂದು ಗೊತ್ತೇ ಇರಲಿಲ್ಲ ಎಂದೆಲ್ಲ ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತಾ ಧ್ರುವ ಸರ್ಜಾ ಮತ್ತು ಪ್ರೇರಣರ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಮತ್ತು ಪಲ್ಲವಿ ತಮ್ಮ ಮನೆಯವರೊಂದಿಗೆ ಫೋಟೋ ತಗೆಸಿಕೊಂಡ ಸುಂದರ ಕ್ಷಣ