WhatsApp Group Join Now
Telegram Group Join Now

ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯಿಂದ ಆಹಾರ ಧಾನ್ಯವನ್ನು ಪಡೆಯುತ್ತಿರುವ ದೇಶದ ಹಾಗೂ ಕರ್ನಾಟಕದ ಎಲ್ಲಾ ಬಿಪಿಎಲ್ ಪಡಿತರ ಚೀಟಿ ದಾರರಿಗೆ ಕೇಂದ್ರದ ವಿತ್ತ ಸಚಿವರಾದಂತಹ ನಿರ್ಮಲಾ ಸೀತಾರಾಮನ್ ಅವರು ಒಂದು ಸಿಹಿಸುದ್ದಿಯನ್ನು ನೀಡಿದ್ದಾರೆ. ಗರಿಬ್ ಕಲ್ಯಾಣ ಅನ್ನ ಯೋಜನೆಯಡಿ ಈ ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಿರುವ ನೀವು ತಿಳಿದುಕೊಳ್ಳಬೇಕಾದ ಅಂತಹ ಮುಖ್ಯ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಕೇಂದ್ರ ಸರ್ಕಾರ ತನ್ನ ಬಜೆಟ್ ಅನ್ನು ಮಂಡಿಸಿದ ಸಮಯದಲ್ಲಿ ವಿತ್ತಸಚಿವೆಯಾದಂತಹ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆಯ ಅವಧಿ ವಿಸ್ತರಿಸುವ ಕುರಿತು ಯಾವುದೇ ಭರವಸೆಯನ್ನೂ ನೀಡಿಲ್ಲ. ಎಂಬತ್ತು ಕೋಟಿ ಜನರಿಗೆ ಉಚಿತ ಆಹಾರಧಾನ್ಯಸಿಗುತ್ತಿದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ವ್ಯಾಪ್ತಿಗೆ ಒಳಪಡುವ ಎಂಬತ್ತು ಕೋಟಿ ಜನರಿಗೆ ಉಚಿತ ಆಹಾರ ಪದಾರ್ಥವನ್ನು ನೀಡಲು ಕೇಂದ್ರ ಸರ್ಕಾರ ಮಾರ್ಚ್ ಎರಡು ಸಾವಿರದ ಇಪ್ಪತ್ತರಂದು ಯೋಜನೆಯನ್ನು ಆರಂಭಿಸಿತ್ತು. ಸಾಂಕ್ರಾಮಿಕ ಅವಧಿಯಲ್ಲಿ ಅಗತ್ಯವಿರುವ ಜನರ ಕಷ್ಟಗಳನ್ನು ನಿವಾರಿಸುವುದು ಇದರ ಉದ್ದೇಶವಾಗಿತ್ತು ಇದಲ್ಲದೆ ಕರೋನಾ ಸಂಕ್ರಾಮಿಕ ಕಾಯಿಲೆಯ ಸಮಯದಲ್ಲಿ ಜನರು ತಿನ್ನುವುದಕ್ಕೆ ಆಹಾರಪದಾರ್ಥಗಳನ್ನು ಒದಗಿಸಬೇಕಾಗಿತ್ತು.

ಸೀತಾರಾಮನ್ ಅವರು ಏನು ಹೇಳಿದ್ದಾರೆಂದರೆ ಗರಿಬ್ ಕಲ್ಯಾಣ ಅನ್ನ ಯೋಜನೆಯಡಿ ಸರ್ಕಾರವು ಪ್ರತಿ ವ್ಯಕ್ತಿಗೆ ಐದು ಕೆಜಿ ಹೆಚ್ಚುವರಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಿದೆ. ಇದು ಎನ್ ಎಡ್ ಎಸ್ ಎ ಅಡಿಯಲ್ಲಿ ಸಾಮಾನ್ಯ ಆಹಾರ ಧಾನ್ಯ ಹಂಚಿಕೆ ಹೆಚ್ಚುವರಿಯಾಗಿ ಪ್ರತಿ ಕೆಜಿಗೆ ಎರಡರಿಂದ ಮೂರು ರೂಪಾಯಿ. ಮಾರ್ಚ್ ಎರಡು ಸಾವಿರದ ಇಪ್ಪತ್ತೆರಡರ ನಂತರ ಪಿಎಂಜಿ ಕೆಎ ವಾಯ್ ಅನ್ನು ವಿಸ್ತರಿಸಲಾಗುತ್ತದೆಯೇ ಎಂದು ಅವರನ್ನು ಕೇಳಲಾಯಿತು. ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಹೇಳಿದ್ದನ್ನು ಬಿಟ್ಟು ಹೇಳುವುದಕ್ಕೆ ಬೇರೆ ಏನೂ ಇಲ್ಲ ಎಂದು ಹೇಳಿದರು. ಉಚಿತ ಆಹಾರ ಧಾನ್ಯಗಳು ಮಾರ್ಚ್ ಎರಡು ಸಾವಿರದ ಎಪ್ಪತ್ತೆರಡರ ವರೆಗೆ ಲಭ್ಯವಿರುತ್ತವೆ.

ಪಿಎಂಜಿ ಕೆಎವಾಯ್ ಯೋಜನೆಯನ್ನು ಮಾರ್ಚ್ ಎರಡು ಸಾವಿರದ ಇಪ್ಪತ್ತರಲ್ಲಿ ಕೇವಲ ಮೂರು ತಿಂಗಳಿಗೆ ಜಾರಿಗೆ ತರಲಾಗಿತ್ತು ನಂತರ ಸರ್ಕಾರ ಅದನ್ನು ಜುಲೈ ನವೆಂಬರ್ ವರೆಗೆ ವಿಸ್ತರಿಸಿತು. ಕೋವಿಡ್ ಬಿಕ್ಕಟ್ಟು ಮುಂದುವರೆದು ಮೇ ಮತ್ತು ಜೂನ್ ಎರಡು ಸಾವಿರದ ಇಪ್ಪತ್ತೊಂದರಲ್ಲಿ ಇದನ್ನು ಜಾರಿಗೊಳಿಸಬೇಕಾಯಿತು ಮತ್ತು ನಾಲ್ಕನೆ ಹಂತದ ಅಡಿಯಲ್ಲಿ ಜುಲೈನಿಂದ ನವೆಂಬರ್ ಎರಡು ಸಾವಿರದ ಇಪ್ಪತ್ತೊಂದರವರೆಗೆ ಐದು ತಿಂಗಳ ಕಾಲ ಇದನ್ನು ವಿಸ್ತರಿಸಲಾಯಿತು. ನಂತರ ಇದರ ಅವಧಿಯನ್ನು ಡಿಸೆಂಬರ್ ಎರಡು ಸಾವಿರದ ಇಪ್ಪತ್ತೊಂದರಿಂದ ಮಾರ್ಚ್ ಎರಡು ಸಾವಿರದ ಇಪ್ಪತ್ತೆರಡರವರೆಗೆ ವಿಸ್ತರಿಸಲಾಗಿದೆ.

ಹೆಚ್ಚುವರಿ ಆಹಾರ ಹಂಚಿಕೆಯನ್ನು ಮಾರ್ಚ್ ಎರಡು ಸಾವಿರದ ಇಪ್ಪತ್ತರಡರವರೆಗೆ ಸರ್ಕಾರ ಮಾಡುತ್ತದೆ. ಈ ಯೋಜನೆಯ ಮೂಲಕ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆಜಿ ಉಚಿತ ಪಡಿತರ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಪ್ರಧಾನಮಂತ್ರಿ ಪಡಿತರ ಸಬ್ಸಿಡಿ ಯೋಜನೆ ಎಂದು ಕರೆಯಲಾಗುತ್ತದೆ ಇದರ ಒಟ್ಟು ಫಲಾನುಭವಿಗಳು ದೇಶದ ಎಂಬತ್ತು ಕೋಟಿ ಜನರಾಗಿದ್ದು ಇದರಲ್ಲಿ ಬಡವರಿಗೆ ಪಡಿತರ ಮೇಲಿನ ಸಬ್ಸಿಡಿ ನೀಡಲಾಗುತ್ತಿದೆ. ಹೀಗಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಇದು ಒಂದು ಸಂತೋಷದ ವಿಷಯ ಎಂದು ಹೇಳಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: