Bengaluru Bhadrakali Temple: ದೈವ ಅನುಗ್ರಹ ಇಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ. ದೇವರ ಕೃಪೆ ಇದ್ದರೆ ನಮ್ಮ ಜೀವನದಲ್ಲಿ ಎಂಥಾ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ. ಕಷ್ಟ ಎನ್ನುವುದು ಯಾವಾಗ ಹೇಗೆ ಬರುತ್ತದೆ ಎಂದು ಹೇಳೋದಕ್ಕೆ ಆಗಲ್ಲ, ಆದರೆ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಸಾಕಷ್ಟು ದಾರಿಗಳು ಇದ್ದರು ಕೂಡ ಕೆಲವೊಮ್ಮೆ ಬೇರೆ ಯಾವುದೇ ಸಿಗದೆ ಇದ್ದಾಗ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಇರುವ ದಾರಿ ದೇವರು. ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಸಾಮಾನ್ಯವಾಗಿ ನಾವೆಲ್ಲರೂ ಕೂಡ ದೇವರ ಮೊರೆ ಹೋಗುತ್ತೇವೆ.
ನಮ್ಮ ಭಾರತ ದೇಶದಲ್ಲಿ ದೇವರ ಅನೇಕ ಸ್ವರೂಪಗಳಿವೆ, ಪುರಾಣ ಕಾಲದಿಂದ ಪ್ರಸಿದ್ಧಿ ಪಡೆದಿರುವ ಹಲವು ದೇವಸ್ಥಾನಗಳು ನಮ್ಮ ದೇಶದಲ್ಲಿದ್ದು, ಪ್ರತಿ ದೇವಸ್ಥಾನಕ್ಕೂ ಅದರದ್ದೇ ಆಚರಣೆಗಳು, ವಿಶೇಷತೆಗಳು ಇದೆ. ಆಯಾ ದೇವಸ್ಥಾನಗಳ ಆಚರಣೆಗಳು ಪ್ರತ್ಯೇಕವಾಗಿ ಇರುತ್ತದೆ, ಅವುಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿದರೆ ದೇವರ ಆಶೀರ್ವಾದದಿಂದ ಎಂಥದ್ದೇ ಕಷ್ಟವಿದ್ದರು ಬಗೆಹರಿಯುತ್ತದೆ. ಹೀಗೆ ಮನುಷ್ಯರ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡಿಸುವ ದೇವಸ್ಥಾನದ ಬಗ್ಗೆ ತಿಳಿಸುತ್ತೇವೆ..
ಈ ದೇವಸ್ಥಾನಕ್ಕೆ ಹೋದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ. ಈ ದೇವಸ್ಥಾನ ಇರುವುದು ಬೆಂಗಳೂರಿನ ಹೊರಗಿರುವ ತಾವರೇಕೆರೆಯ ಹತ್ತಿರ ಇರುವ ಕಾಳಪ್ಪನಹಳ್ಳಿಯಲ್ಲಿ. ಈ ಹಳ್ಳಿಯಲ್ಲಿರುವ ದೇವಸ್ಥಾನದ ಹೆಸರು ತಾಯಿ ಭದ್ರಕಾಳೇಶ್ವರಿ ದೇವಸ್ಥಾನ. ಇದು ಶಿವ ಮತ್ತು ಶಕ್ತಿ ಇಬ್ಬರು ಒಂದೇ ಲಿಂಗದ ಮೂಲ ಆಗಿರುವ ಒಂದೇ ದೇವಸ್ಥಾನ ಇದು ಎಂದು ಆ ಊರಿನ ಜನರು ಹೇಳುತ್ತಾರೆ.
ಈ ದೇವಸ್ಥಾನ ತಾಯಿ ಆದಿಶಕ್ತಿಯ ದೇವಸ್ಥಾನ ಆಗಿದ್ದು, ಈ ದೇವಿಯ ಹತ್ತಿರ ಕಷ್ಟ ಎಂದು ಹೇಳಿಕೊಂಡು ಯಾರೇ ಬಂದರು ಅವರ ಕಷ್ಟ ಪರಿಹಾರ ಆಗುತ್ತದೆ. ದೇವಿಯ ಮಹಿಮೆಯನ್ನು ಅರಿತ ಜನರಿಂದ ದೇವಿಯ ಆಶೀರ್ವಾದದ ಎಲ್ಲೆಡೆ ಪ್ರಚಾರ ಆಗಿದ್ದು, ರಾಜ್ಯದ ಹಲವೆಡೆ ಇಂದ ಜನರು ದೇವಿಯ ಆಶೀರ್ವಾದ ಪಡೆಯಲು ಈ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಈ ದೇವಿಯ ಶಕ್ತಿ ಎಷ್ಟಿದೆ ಎಂದರೆ, ಕ್ಯಾನ್ಸರ್ ಇರುವ ವ್ಯಕ್ತಿಗಳು ಇಲ್ಲಿಗೆ ಬಂದು ಕ್ಯಾನ್ಸರ್ ಇಂದ ಗುಣಮುಖರಾಗಿರುವ ಅನೇಕ ಪವಾಡಗಳು ಕೂಡ ಇಲ್ಲಿ ನಡೆದಿದೆ.
ಈ ದೇವಸ್ಥಾನದಲ್ಲಿ ನೀವು ಹರಕೆ ಮಾಡಿಕೊಳ್ಳುವುದು ಸುಲಭದ ವಿಧಾನ ಆಗಿದೆ. ಇಲ್ಲಿ ನೀವು ಕೇವಲ 3 ರೂಪಾಯಿಯನ್ನು ಬಳಸಿ ಹರಕೆ ಕಟ್ಟಿಕೊಳ್ಳಬಹುದು. ದೇವಿ ನಿಮ್ಮ ಹರಕೆಯನ್ನು ಈಡೇರಿಸಿದ ನಂತರ ಕುಂಬಳಕಾಯಿ ಬಳಸಿ ಅದರಿಂದ ಒಂದು ದೀಪ ಮಾಡಿ ದೇವಿಗೆ ಅರ್ಪಣೆ ಮಾಡಿದರೆ ಅಷ್ಟೇ ಸಾಕು, ತಾಯಿಗೆ ಸಂತೋಷವಾಗುತ್ತದೆ. ಈ ದೇವಿ ಮತ್ತು ಇಲ್ಲಿನ ಅರ್ಚಕರು ಹೆಚ್ಚಿನ ಕಾಣಿಕೆ, ದೊಡ್ಡ ದೊಡ್ಡ ಆಚರಣೆ ಇದ್ಯಾವುದನ್ನು ಕೇಳುವುದಿಲ್ಲ. ಆ ದೇವಿ ನೀಡಿರುವ ಆಜ್ಞೆಯನ್ನು ಪಾಲಿಸಬೇಕು ಎಲ್ಲಾ ಜನರಿಗೂ ಒಳ್ಳೆಯದಾಗಬೇಕು ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ.
ಈ ದೇವಸ್ಥಾನದಲ್ಲಿ ಮತ್ತೊಂದು ದೇವತೆಯ ವಿಗ್ರಹ ಕೂಡ ಇದೆ, ಅದು ಪ್ರತ್ಯಂಗಿನಿ ದೇವಿಯ ವಿಗ್ರಹ. ಹರಕೆ ಮಾಡಿಕೊಳ್ಳುವವರಿಗೆ ಅರಿಶಿನದ ನೀರು, ಅಥವ ವನಸಿರಿ ನೀರನ್ನು ಹಾಕಿ ಬಳಿಕ ದೇವಿಯ ವಿಗ್ರಹ ತಲೆಯ ಮೇಲೆ ಇಟ್ಟು, ಅವರ ಪ್ರಾರ್ಥನೆಯ ಜೊತೆಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಬೇಕು ಎಂದು ಸೂಚಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಯಾರೇ ಬಂದು, ತಮ್ಮ ಕಷ್ಟಗಳನ್ನು ಹೇಳಿಕೊಂಡು ಹರಕೆ ಕಟ್ಟಿಕೊಂಡರೆ, ಎಂಥ ದೊಡ್ಡ ಕಲ್ಲಿನಂಥ ಕಷ್ಟವೇ ಇದ್ದರು ಹೂವಿನ ಹಾಗೆ ಪರಿಹಾರ ಆಗುತ್ತದೆ.
ಇಷ್ಟು ಮಾತ್ರವಲ್ಲದೆ ಈ ದೇವಸ್ಥಾನದಲ್ಲಿ ಸಾಮೂಹಿಕ ಹೋಮವನ್ನು ಕೂಡ ನಡೆಸಲಾಗುತ್ತದೆ. ಇದರಿಂದಲು ಭಕ್ತರ ಕಷ್ಟಕ್ಕೆ ಪರಿಹಾರ ಸಿಗುತ್ತದೆ. ಈ ದೇವಸ್ಥಾನದಲ್ಲಿ ಅಮಾವಾಸ್ಯೆಯ ದಿನ, ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ವಿಶೇಷವಾದ ಪೂಜೆ ನಡೆಯುತ್ತದೆ ಹಾಗೆಯೇ ಹರಕೆ ಮಾಡಿಕೊಳ್ಳುವವರಿಗೆ 5 ವಾರ ಅಥವಾ 9 ವಾರ ಪೂಜೆ ಮಾಡಲು ಹೇಳುತ್ತಾರೆ. ಅರ್ಚಕರು ಹೇಳಿದ ಹಾಗೆ ಮಾಡಿದರೆ ಆ ವ್ಯಕ್ತಿಯ ಬದುಕು ಹಸನಾಗುತ್ತದೆ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ಪರಿಹಾರವಾಗುತ್ತದೆ. ಈ ದೇವಿಯನ್ನು ಆರೋಗ್ಯ ಕರುಣಿಸುವ ದೇವಿ ಎಂದೇ ಕರೆಯುತ್ತಾರೆ.