ನಿಮ್ಮ ಮನೆಯಲ್ಲಿ ದೇವರ ಫೋಟೋದಿಂದ ಪದೇ ಪದೇ ಹೂವು ಬೀಳುತ್ತಾ? ಇದು ಯಾವುದರ ಸೂಚನೆ ಗೊತ್ತಾ..

0

God Worship: ಸಾಮಾನ್ಯವಾಗಿ ಮನೆಯಲ್ಲಿ ದೇವರ ಪೂಜೆ ಮಾಡುವಾಗ ದೇವರಿಗೆ ಹಾಕಿದ ಹೂವು ಬೀಳುತ್ತದೆ ಕೆಲವೊಮ್ಮೆ ಪದೆ ಪದೆ ಬೀಳುತ್ತದೆ ಈ ರೀತಿ ಬೀಳುವುದು ಏಕೆ, ದೇವರಿಗೆ ಹಾಕಿದ ಹೂವು ಬೀಳುವುದು ದೇವರ ಸೂಚನೆಯೆ, ದೇವರ ಫೋಟೊ ಅಥವಾ ವಿಗ್ರಹದಿಂದ ಬಿದ್ದ ಹೂವನ್ನು ಏನು ಮಾಡಬೇಕು ಇಂತಹ ಹಲವು ಗೊಂದಲಗಳಿವೆ ಈ ಕೆಳಗಿನ ಲೇಖನದಲ್ಲಿ ಉತ್ತರವಿದೆ ಹಾಗಾದರೆ ಈ ಲೇಖನವನ್ನು ತಪ್ಪದೆ ಓದಲೇಬೇಕು.

ಬಹಳಷ್ಟು ಜನರಿಗೆ ಈ ಅನುಭವ ಆಗಿರುತ್ತದೆ ಮನೆಯಲ್ಲಿ ದೇವರ ಪೂಜೆ ಮಾಡುವಾಗ ದೇವರಿಗೆ ಮುಡಿಸಿದ ಹೂವು ಪದೆ ಪದೆ ಬಿಳುತ್ತಿರುತ್ತದೆ. ಈ ರೀತಿ ಹೂವು ಏಕೆ ಬೀಳುತ್ತಿದೆ ಎಂಬ ಪ್ರಶ್ನೆ ಬಹಳಷ್ಟು ಜನರ ಮನಸಿನಲ್ಲಿದೆ. ಅಷ್ಟೆ ಅಲ್ಲದೆ ದೇವರ ಪೂಜೆ ಮಾಡುವಾಗ ದೇವರಿಗೆ ಹೂವು ಮುಡಿಸುತ್ತಿದ್ದಂತೆ ಹೂವು ಬೀಳುತ್ತದೆ ಜೊತೆಗೆ ಇನ್ನೇನು ದೇವರ ಪೂಜೆ ಮುಗಿಯುತ್ತದೆ ಎನ್ನುವಾಗ ದೇವರಿಗೆ ಮುಡಿಸಿದ ಹೂವು ಬೀಳುತ್ತದೆ ಆಗ ದೇವರ ವಿಗ್ರಹ ಅಥವಾ ಫೋಟೊದಿಂದ ಬಿದ್ದ ಹೂವನ್ನು ಎತ್ತಿ ಮತ್ತೆ ದೇವರಿಗೆ ಮುಡಿಸಬೇಕಾ ನಮ್ಮ ಬಳಿ ಇಟ್ಟುಕೊಳ್ಳಬೇಕಾ ಅಥವಾ ಈ ರೀತಿ ದೇವರ ಪೂಜೆ ಮಾಡುವಾಗ ದೇವರಿಗೆ ಮುಡಿಸಿದ ಹೂವು ಕೆಳಗೆ ಬಿದ್ದರೆ ದೇವರು ನಮಗೆ ಏನನ್ನೊ ಸೂಚಿಸುತ್ತಿದ್ದೇವೆ ಎಂಬುದು ಅದರ ಅರ್ಥ ಆಗಿರಬಹುದಾ ಎನ್ನುವುದು ಹಲವರ ಗೊಂದಲವಾಗಿದೆ. ಹೀಗೆ ದೇವರಿಗೆ ಮುಡಿಸಿದ ಹೂವು ಬೀಳುವ ಬಗ್ಗೆ ಇರುವ ಹತ್ತು ಹಲವು ಗೊಂದಲಗಳಿಗೆ ಉತ್ತರವಿದೆ.

ದೇವರ ಪೂಜೆ ಮಾಡುವಾಗ ದೇವರಿಗೆ ಮುಡಿಸಿದ ಹೂವು ಕೆಳಗೆ ಬಿದ್ದರೆ ಆ ಹೂವನ್ನು ಮತ್ತೆ ದೇವರಿಗೆ ಮುಡಿಸಬಾರದು ಬದಲಿಗೆ ಆ ಹೂವನ್ನು ನಾವೆ ಇಟ್ಟುಕೊಳ್ಳಬೇಕು ನಾವು ಮಾಡಿದ ದೇವರ ಪೂಜೆಗೆ ದೇವರು ನಮಗೆ ವರ ಕೊಟ್ಟಿದ್ದಾನೆ ಎಂದು ತಿಳಿಯಬೇಕು ನಮ್ಮ ಪೂಜೆ ದೇವರಿಗೆ ಇಷ್ಟವಾಯಿತು ಎಂದು ತಿಳಿಯಬೇಕು. ನಾವು ದೇವಸ್ಥಾನಕ್ಕೆ ಹೋದರೆ ಅಲ್ಲಿ ದೇವರಿಗೆ ಮುಡಿಸಿದ ಹೂವನ್ನು ಪ್ರಸಾದವೆಂದು ಮನೆಗೆ ತರುತ್ತೇವೆ ಅದರಂತೆ ಮನೆಯಲ್ಲಿ ದೇವರ ಪೂಜೆ ಮಾಡುವಾಗ ದೇವರಿಗೆ ಮುಡಿಸಿದ ಹೂವು ಕೆಳಗೆ ಬಿದ್ದರೆ ಹೂವನ್ನು ದೇವರು ಕೊಟ್ಟ ಪ್ರಸಾದ ಎಂದು ತಿಳಿಯಬೇಕು.

ದೇವರ ಪೂಜೆಯಲ್ಲಿ ದೇವರಿಗೆ ಮುಡಿಸಿದ ಹೂವನ್ನು ಒಣಗಿ ಹೋಗುವವರೆಗೆ ನಮ್ಮ ಬಳಿ ಇಟ್ಟುಕೊಳ್ಳಬೇಕು ಆದರೆ ಒಣಗಿಹೋದ ಹೂವನ್ನು ಯಾವ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬಾರದು. ಒಣಗಿದ ಹೂವು ಮನೆಗೆ ಶ್ರೆಯಸ್ಸಲ್ಲ ಒಣಗಿದ ಹೂವನ್ನು ಗಿಡಕ್ಕೆ ಹಾಕಬೇಕು, ಹೂವನ್ನು ಯಾರೂ ತುಳಿಯಬಾರದು. ದೇವರು ಪದೆ ಪದೆ ಈ ರೀತಿ ದೇವರ ಪೂಜೆಗೆ ಮುಡಿಸಿದ ಹೂವನ್ನು ಕೊಟ್ಟರೆ ದೇವರು ನಮ್ಮ ಇಷ್ಟಾರ್ಥವನ್ನು ನೆರವೇರಿಸುತ್ತಾರೆ, ಅಂದುಕೊಂಡ ಕೆಲಸ ಕಾರ್ಯ ಯಶಸ್ಸಿನಿಂದ ನಡೆಯುತ್ತದೆ ಎಂಬ ಸೂಚನೆಯಾಗಿರುತ್ತದೆ. ಭಕ್ತಿಯಿಂದ ದೇವರ ಪೂಜೆ ಮಾಡುವಾಗ ದೇವರಿಂದ ಹೂವು ಬಿದ್ದರೆ ದೇವರಲ್ಲಿ ಬೇಡಿಕೊಂಡ ಬೇಡಿಕೆಯನ್ನು ದೇವರು ಈಡೇರಿಸುತ್ತಾನೆ ಎಂಬ ಅರ್ಥವಾಗುತ್ತದೆ.

ಮನೆಯಲ್ಲಿ ದೇವರ ಪೂಜೆ ಮಾಡುತ್ತಿರುವಾಗ ಅಥವಾ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುವಾಗ ದೇವರ ವಿಗ್ರಹ ಅಥವಾ ಫೋಟೊದಿಂದ ಹೂವು ದೇವರ ಬಲಭಾಗಕ್ಕೆ ಬಿದ್ದರೆ ಇಷ್ಟಾರ್ಥ ಈಡೇರುತ್ತದೆ ಎಂದು ಹಾಗೆಯೆ ಒಂದು ವೇಳೆ ದೇವರ ವಿಗ್ರಹ ಅಥವಾ ಫೋಟೊದಿಂದ ಹೂವು ಎಡಭಾಗಕ್ಕೆ ಬಿದ್ದರೆ ಕೇಳಿಕೊಂಡ ವರ ಈಡೇರುವುದಿಲ್ಲ ಎಂಬ ಅರ್ಥವಾಗಿರುತ್ತದೆ. ದೇವರಿಗೆ ಹೂವನ್ನು ಮುಡಿಸಲು ಕೆಲವು ನಿಯಮಗಳಿವೆ ಅವೆಂದರೆ ಮುಟ್ಟಾದ ಮಹಿಳೆಯರು ದೇವರಿಗೆ ಹೂವನ್ನು ಹಾಕಬಾರದು ಅಲ್ಲದೆ ಅವರು ಮುಟ್ಟಿದ ಹೂವನ್ನು ಸಹ ದೇವರಿಗೆ ಮುಡಿಸಬಾರದು.

ಸುಗಂಧಭರಿತವಾದ ಹೂವು ಅಂದರೆ ಮಲ್ಲಿಗೆ, ಸಂಪಿಗೆ, ಗುಲಾಬಿ ಹೂವುಗಳು ನಾವು ತೆಗೆದುಕೊಂಡು ಮೂಗಿನಿಂದ ಪರಿಮಳ ತೆಗೆದುಕೊಂಡರೆ ಅಂತಹ ಹೂವನ್ನು ದೇವರಿಗೆ ಹಾಕಬಾರದು, ಬಳಸಿದ ಹೂವನ್ನು ಹಾಕಬಾರದು, ಬಾಡಿಹೋದ, ನೆಲಕ್ಕೆ ಬಿದ್ದ ಹೂವು ದೇವರಿಗೆ ಹಾಕಲು ಯೋಗ್ಯವಾಗಿರುವುದಿಲ್ಲ. ದೇವರಿಗೆ ಮುಳ್ಳಿನ ಸಮೇತ ಹೂವನ್ನು ಹಾಕಿದರೆ ದೋಷ ಉಂಟಾಗುತ್ತದೆ ಅಂತಹ ಹೂವನ್ನು ಹಾಕಬಾರದು. ಹೀಗೆ ದೇವರ ಪೂಜೆ ಮಾಡುವಾಗ ನಿಮಗೂ ದೇವರಿಗೆ ಹಾಕಿದ ಹೂವು ಬಿದ್ದಿರುವ ಅನುಭವ ಆಗಿದೆಯಾ ಹಾಗಾದರೆ ನಿಮ್ಮ ಬೇಡಿಕೆಯನ್ನು ದೇವರು ಈಡೇರಿಸುತ್ತಾನೆ.

Leave A Reply

Your email address will not be published.

error: Content is protected !!