7 ದಿನಗಳಲ್ಲಿ ಒಂದೊಂದು ದಿನದ ವೈಶಿಷ್ಟ್ಯ ಒಂದೊಂದು ರೀತಿ ಇರುತ್ತದೆ. ಯಾವ ದಿನ ಜನಿಸಿದ ವ್ಯಕ್ತಿಯ ಗುಣ ಲಕ್ಷಣಗಳು ಏನು ಎನ್ನುವುದನ್ನು ನಾವು ಈ ದಿನ ತಿಳಿಯೋಣ. ಜನ್ಮ ಕುಂಡಲಿ, ನಕ್ಷತ್ರ, ತಿಥಿ ನೋಡಿ ವ್ಯಕ್ತಿಯ ಬಗ್ಗೆ ಹೇಳಬಹುದು. ಅದೇ ರೀತಿ ಯಾವ ವಾರ ಹುಟ್ಟಿರುವರು ಎನ್ನುವುದರ ಮೇಲೆ ಕೂಡ ಅದನ್ನು ತಿಳಿಯಬಹುದು. ಜೋತಿಷ್ಯ ಶಾಸ್ತ್ರದ ಪ್ರಕಾರ ಅವರು ಜನಿಸುವ ವಾರದ ಗ್ರಹಗಳ ವಿಶೇಷತೆ ಅವರ ದೇಹ ಸೇರುತ್ತದೆ.
ಆದ್ದರಿಂದ ಅದೇ ರೀತಿಯ ಸ್ವಭಾವಗಳು ವ್ಯಕ್ತಿಯ ಒಳಗೆ ಹುಟ್ಟುತ್ತದೆ. ವಾರದ ಎಲ್ಲಾ ದಿನ ವಿಶೇಷತೆ ಬಗ್ಗೆ ನೋಡೋಣ
ಸೋಮವಾರ :- ಈ ದಿನ ಹುಟ್ಟಿದ ಜನರು ಹೆಚ್ಚು ಬುದ್ದಿವಂತರು ಮತ್ತು ಶಾಂತ ಸ್ವಭಾವದ ಗುಣ ಹೊಂದಿರುತ್ತಾರೆ. ಇವರ ಧ್ವನಿ ಆಕರ್ಷಕ ಮತ್ತು ಮಧುರವಾಗಿ ಇರುತ್ತದೆ. ಇವರ ಸ್ವಭಾವ ಸ್ಥಿರವಾಗಿ ಇರುತ್ತದೆ. ಸುಖ ಮತ್ತು ದುಃಖವನ್ನು ಸಮಾನವಾಗಿ ಸ್ವೀಕಾರ ಮಾಡುವರು. ಭವಿಷ್ಯದಲ್ಲಿ ಇವರಿಗೆ ಸಮಾಜ ಮತ್ತು ಸರ್ಕಾರದಿಂದ ಗೌರವ ಸಿಗುತ್ತದೆ.
ಮಂಗಳವಾರ :-ಈ ದಿನ ಜನಿಸಿದ ವ್ಯಕ್ತಿಗಳು ಹೆಚ್ಚು ಶಕ್ತಿಶಾಲಿ ಮತ್ತು ಬಹದ್ದೂರ್ ಆಗಿರುವರು. ಯುದ್ದ ಪ್ರೇಮಿ ಮತ್ತು ಪರಕ್ರಮಿಗಳು ಕೂಡ ಆಗಿರುವರು. ಕೊಟ್ಟ ಮಾತಿಗೆ ಬದ್ದವಾಗಿ ಅವರ ಮಾತಿನಂತೆ ನಡೆದುಕೊಳ್ಳುವುದು ಇವರ ಗುಣದಲ್ಲಿ ಒಂದು.ಎಷ್ಟೇ ಕಷ್ಟ ಎದುರಾದರು ಅದನ್ನು ಎದುರಿಸುವರೂ. ಇವರು ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವರು.
ಬುಧವಾರ :- ಈ ವಾರ ಜನಿಸಿದ ವ್ಯಕ್ತಿಗಳು ಮಧುರವಾಗಿ ಮಾತನಾಡುವರು. ಇವರು ವ್ಯಾಸಂಗದಲ್ಲಿ ಹೆಚ್ಚು ಕುತೂಹಲ ಹೊಂದಿರುವರು. ಹೆಚ್ಚು ಜ್ಞಾನ ಸಂಪತ್ತನ್ನು ಹೊಂದಿರುವರು. ಬರೆಯುವುದರಲ್ಲಿ ಆಸಕ್ತಿ ಇರುತ್ತದೆ. ಈ ಜನರ ಬಳಿ ಎಲ್ಲಾ ರೀತಿಯ ವಿಚಾರದ ಬಗ್ಗೆ ಮಾಹಿತಿ ಇರುತ್ತದೆ. ಇವರ ಬಳಿ ಸಂಪತ್ತಿನ ಯಾವ ಕೊರತೆ ಇರುವುದಿಲ್ಲ. ಬೇರೆಯವರನ್ನು ಬಹುಬೇಗ ಮೂರ್ಖ ಮಾಡುವ ಗುಣ ಇರುತ್ತದೆ ಇವರ ಬಳಿ.
ಗುರುವಾರ :- ಈ ವಾರ ಜನಿಸಿದ ವ್ಯಕ್ತಿಗಳ ಮೇಲೆ ಗುರು ಗ್ರಹದ ಪ್ರಭಾವ ಹೆಚ್ಚಾಗಿ ಇರುತ್ತದೆ. ಇವರಿಗೆ ಧಾರ್ಮಿಕ ಮತ್ತು ಗಂಭೀರ ಸ್ವಭಾವ ಇರುತ್ತದೆ. ಎಲ್ಲರ ಜೊತೆ ಸ್ನೇಹದ ಸಂಬಂಧವನ್ನು ಹೊಂದಿರುವರು. ಎಲ್ಲರಿಗು ಒಳ್ಳೆಯದನ್ನೇ ಬಯಸುವರು. ಗುರು ಬಲ ಇಲ್ಲದ ಜನರು ಮೂರ್ಖರು ಕೂಡ ಆಗುವ ಸಾಧ್ಯತೆ ಇರುತ್ತದೆ.
ಶುಕ್ರವಾರ :-ಈ ವಾರ ಜನಿಸಿದ ವ್ಯಕ್ತಿಗಳು ತುಂಬ ಸುಂದರವಾಗಿ ಇರುವರು ಮತ್ತು ಪ್ರತಿಭಾವಂತರು. ವಾದ ಮಾಡುವುದರಲ್ಲಿ ನಿಪುಣರು ಮತ್ತು ವಿದ್ಯಾಭ್ಯಾಸದಲ್ಲಿ ಮುಂದೆ ಇರುವರು. ಇವರು ಶ್ರೀಮಂತ ವ್ಯಕ್ತಿಗಳು ಆಗಿರುವರು. ಈ ವಾರ ಜನಿಸಿದ ವ್ಯಕ್ತಿಗಳ ಬುದ್ದಿ ತುಂಬಾ ತೀಕ್ಷ್ಣವಾಗಿ ಇರುತ್ತದೆ.
ಶನಿವಾರ :-ಈ ವಾರ ಜನಿಸಿದ ವ್ಯಕ್ತಿಗಳು ಅವರ ಇಷ್ಟದಂತೆ ಜೀವನ ನಡೆಸಲು ಇಷ್ಟ ಪಡುವರು. ಕಠೋರ ವ್ಯಕ್ತಿತ್ವವನ್ನು ಹೊಂದಿರುವರು. ದುಃಖವನ್ನು ಸುಲಭವಾಗಿ ಸಹಿಸುವರು.ಇವರು ಗಂಭೀರ ಸ್ವಭಾವದ ವ್ಯಕ್ತಿಗಳು. ಸೇವೆ ಮಾಡುವ ಗುಣ ಹೆಚ್ಚಾಗಿ ಇರುತ್ತದೆ.
ಭಾನುವಾರ :-ಈ ವಾರ ಜನಿಸಿದ ವ್ಯಕ್ತಿಗಳ ಮೇಲೆ ಸಿಂಹ ರಾಶಿ ಮತ್ತು ಸೂರ್ಯ ದೇವನ ಪ್ರಭಾವ ಇರುತ್ತದೆ. ಈ ವ್ಯಕ್ತಿಗಳಲ್ಲಿ ತೇಜಸ್ಸು ಹೆಚ್ಚಾಗಿ ಇರುತ್ತದೆ. ಸ್ವಲ್ಪ ಕ್ರೋಧದ ಗುಣ ಇರುತ್ತದೆ. ಇವರು ಚತುರರು ಮತ್ತು ಗುಣವಂತರು ಹೌದು. ಈ ಜನರಲ್ಲಿ ಸಾಹಸ ಮತ್ತು ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ. ಹೆಚ್ಚು ಸಕಾರಾತ್ಮಕವಾಗಿ ಯೋಚನೆ ಮಾಡುವ ಜನರು ಇವರು. ಪ್ರಯಾಣ ಮಾಡುವುದರಲ್ಲಿ ಇವರು ಹೆಚ್ಚು ಆಸಕ್ತಿ ಹೊಂದಿರುವರು.