ತುಳಸಿ ಗಿಡಕ್ಕೆ ಇದನ್ನು ಹಾಕಿ ವನದಂತೆ ಬೆಳೆಯುತ್ತೆ

0

ತುಳಸಿ ಗಿಡ ಪೂಜೆ ಮಾಡಿದರೆ ಬೇಡಿದ ವರ ಕೊಡುವ ಸಸಿ ಮಾತ್ರ ಅಲ್ಲ. ಅದನ್ನು ಮನೆಯಲ್ಲಿ ಇರಿಸುವ ಕಾರಣ ಆರೋಗ್ಯ ಕೂಡ ವೃದ್ಧಿ ಆಗುತ್ತದೆ. ಮಾನವನಿಗೆ ಅಗತ್ಯ ಇರುವ ಆಮ್ಲಜನಕ ಪೂರೈಕೆ ಮಾಡುತ್ತದೆ. ಕೆಮ್ಮು, ಕಫ, ಶೀತದಂತಹ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಈ ಸಸ್ಯ.

ತುಳಸಿ ಗಿಡ ಕೆಲವು ಮನೆಗಳಲ್ಲಿ ಬೇಗ ಒಣಗಿ ಹೋಗುತ್ತದೆ ಇಲ್ಲ ಬೆಳೆಯುವುದೇ ಇಲ್ಲ ಇದಕ್ಕೆ ಒಂದು ಕಾರಣ ಮನೆಯ ಮೇಲೆ ಬಿದ್ದಿರುವ ದುಷ್ಟ ಇಲ್ಲ ಋಣಾತ್ಮಕ ಶಕ್ತಿಗಳ ಪ್ರಭಾವ ಕೂಡ ಆಗಿರಬಹುದು ಇನ್ನು ಕೆಲವು ಸಮಯ ಅನಿರೀಕ್ಷಿತ ವಾತಾವರಣದ ಬದಲಾವಣೆಯಿಂದ ಕೂಡ ತುಳಸಿ ಗಿಡ ಒಣಗುವ ಸಾಧ್ಯತೆ ಇರುತ್ತದೆ. ಹೆಚ್ಚು ಮಳೆ, ಬಿಸಿಲು, ಕೆಮಿಕಲ್ ಗೊಬ್ಬರ ಈ ರೀತಿಯ ವಿಷಯ ಸಸ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ತುಳಸಿ ಗಿಡ ನಮ್ಮ ಹಿಂದೂ ಪುರಾಣಗಳ ಪ್ರಕಾರ ಹೆಚ್ಚು ಪವಿತ್ರವಾದ ಸಸಿ ಎನ್ನುವರು, ಇದರಲ್ಲಿ ವಿಷ್ಣು ಮತ್ತು ಲಕ್ಷ್ಮಿ ದೇವಿ ನೆಲೆಸಿರುವರು. ಮಾತೇ ಲಕ್ಷ್ಮಿ ದೇವಿ ಶ್ರೀಮಾನ್ ನಾರಾಯಣರ ಸಮೇತ ತುಳಸಿ ಗಿಡ ಇರುವ ಮನೆಗೆ ಆಗಮನ ಮಾಡುವರು ಎನ್ನುವ ನಂಬಿಕೆ ಸಹ ಇದೆ. ತುಳಸಿ ಗಿಡ ಮನೆಯ ಮುಂದೆ ಒಣಗಿ ಹೋಗುತ್ತಿದ್ದರೆ ಅದು, ಮನೆಗೆ ಅಶುಭ ಫಲಗಳನ್ನು ಕೊಡುತ್ತದೆ. ಒಣಗಿದ ಗಿಡ ತೆಗೆದು ಹೊಸ ಗಿಡ ನೆಡಬೇಕು. ಹೆಚ್ಚು ಬಿಸಿಲು ನೇರ ಬಿಸಿಲು ಬೀಳುವ ಜಾಗದಲ್ಲಿ ತುಳಸಿ  ಗಿಡವನ್ನು ಇಡುವುದು ತಪ್ಪು.

ಅದನ್ನು ನೆರಳಿನಲ್ಲಿ ಇಡಬೇಕು. ಇನ್ನು ದೂಪ, ಅಗರಬತ್ತಿ ಎಲ್ಲವನ್ನು ಗಿಡದಿಂದ ದೂರ ಇಡಬೇಕು. ಇದರಿಂದ ಗಿಡ ಅದರಿಂದ ಬರುವ ಬಿಸಿ ಶಾಖದಿಂದ ಸುಟ್ಟು ಹೋಗುತ್ತದೆ. ಇನ್ನು ಇಬ್ಬನಿ ಮತ್ತು ಮಂಜು ಬೀಳುವ ಕಾರಣ ತುಳಸಿ ಗಿಡ ಒಣಗುವ ಸಾಧ್ಯತೆ ಇರುತ್ತದೆ. ತುಳಸಿ ಗಿಡದಲ್ಲಿ ಬರುವ ಹೂವು ಮತ್ತು ಬೀಜಗಳನ್ನು ಅವಾಗವಾಗ ತೆಗೆದು ಸ್ವಚ್ಚ ಮಾಡಬೇಕು ಇಲ್ಲದೆ ಹೋದರೆ ತುಳಸಿ ಗಿಡಕ್ಕೆ ರೋಗ ಬರುವ ಸಂಭವ ಇರುತ್ತದೆ. ಈ ಮಂಜರಿ ಬೀಜಗಳು ತುಳಸಿ ಗಿಡದ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅದನ್ನು ನೀರಿಗೆ ಹಾಕಿ ಇಟ್ಟರೆ ಹೊಸ ಗಿಡಗಳನ್ನು ಬೆಳೆಸಬಹುದು.

ಭಾನುವಾರ ಮತ್ತು ಏಕಾದಶಿ ದಿನದಂದು ತುಳಸಿ ಗಿಡದ ಎಲೆ ಅಥವಾ ಯಾವುದೇ ಭಾಗವನ್ನು ಕತ್ತರಿಸಬಾರದು. ಹಾಗೆ ಬೇರೆ ದಿನ ಅದನ್ನು ಕತ್ತರಿಸುವ ಮುನ್ನ ತುಳಸಿ ಮಾತೆಯ ಅನುಮತಿ ಕೇಳಿ ಮುಂದುವರೆಯಬೇಕು. ತುಳಸಿಯನ್ನು ಉಗುರಿನಿಂದ ಜಿಗುಟ ಬಾರದು. ತುಳಸಿ ಗಿಡ ಎಲ್ಲಿ ಒಣಗಿದೆಯೋ ಆ ಭಾಗವನ್ನು ಮಾತ್ರ ಕತ್ತರಿಸಬೇಕು. ತುಳಸಿ ಗಿಡಕ್ಕೆ ಒಂದು ದಿನ ಬಿಟ್ಟು ಒಂದು ದಿನ ನೀರು ಪೂರೈಕೆ ಮಾಡಬೇಕು.

ಮಳೆಗಾಲದ ಸಮಯದಲ್ಲಿ ವಾರಕ್ಕೆ ಎರಡು ಬಾರಿ ನೀರು ಹಾಕಿದರು ಸಾಕು. ತುಳಸಿ ಗಿಡ ಕತ್ತರಿಸಿದ ಜಾಗದಲ್ಲಿ ಅರಿಶಿಣದ ಲೇಪನ ಮಾಡಿ, ಪಾಲಿಥಿನ್ ಚೀಲದಿಂದ ಮುಚ್ಚಿದರೆ ಸೂರ್ಯ ದೇವನ ನೇರ ಕಿರಣಗಳು ಗಿಡದ ಮೇಲೆ ಬೀಳುವುದಿಲ್ಲ. ತುಳಸಿ ಗಿಡದಲ್ಲಿ ಕಸ, ಹುಲ್ಲು, ಮತ್ತೆ ಉದುರಿದ ತುಳಸಿ ಎಲೆಗಳನ್ನು ಸ್ವಚ್ಚ ಮಾಡಬೇಕು ಇಲ್ಲದೆ ಹೋದರೆ ಗಿಡಕ್ಕೆ ಫಂಗಸ್ ಹರಡುವ ಸಾಧ್ಯತೆ ಇರುತ್ತದೆ. ಗಿಡಕ್ಕೆ ಗೊಬ್ಬರ ಹಾಕುವ ಮೊದಲು ಮಣನ್ನು ಸಡಿಲ ಮಾಡಬೇಕು. ಈ ರೀತಿ ಮಾಡಿದರೆ ತುಳಸಿ ಸಸಿ ಚೆನ್ನಾಗಿ ಬೆಳೆಯುತ್ತದೆ.

ಕೆಮಿಕಲ್ ಗೊಬ್ಬರದ ಬದಲಿಗೆ ನೈಸರ್ಗಿಕವಾಗಿ ಸಿಗುವ ಸಗಣಿಯ ಗೊಬ್ಬರ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪ್ರಮಾಣದಲ್ಲಿ ಹಾಕಿದರೆ ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಕಾಲು ಕೆಜಿಯಷ್ಟು ಗೊಬ್ಬರ ಮತ್ತು ಒಂದು ಚಮಚ ಅರಿಶಿಣದ ಪುಡಿಯನ್ನು ಮಿಶ್ರಣ ಮಾಡಿ ಅದನ್ನು ತುಳಸಿ ಗಿಡಕ್ಕೆ ಹಾಕಬೇಕು ಇದರಿಂದ ತುಳಸಿ ಗಿಡ  ಸದಾಕಾಲ ಹಚ್ಚ ಹಸಿರು ಬಣ್ಣದಿಂದ ಇರುತ್ತದೆ.

ಈ ಪ್ರಯೋಗವನ್ನು 3-4 ತಿಂಗಳಿಗೆ ಒಂದು ಬಾರಿ ಮಾಡ್ಬೇಕು ಇದರಿಂದ 4-5 ದಿನಕ್ಕೆ ಹೊಸ ತುಳಸಿ ಗಿಡ ಚಿಗುರು ಹೊಡೆಯುತ್ತದೆ. ಮಣ್ಣಿನಲ್ಲಿ ಗಿಡ ನೆಡುವ ಮುನ್ನ ಬೇವಿನ ಪುಡಿಯನ್ನು ಬೆರೆಸಿದರೆ ತುಳಸಿ ಗಿಡ ಬೇಗ ಮತ್ತು ದಟ್ಟವಾಗಿ ಬೆಳೆಯುತ್ತದೆ ಹಾಗೂ ಹಸಿರು ಬಣ್ಣದಿಂದ ಇರುತ್ತದೆ. ಅಂಗಡಿಯಿಂದ ಸ್ವಚ್ಚ ಮತ್ತು ಕಪ್ಪು ಮಣ್ಣು ತಂದು ಅದಕ್ಕೆ ಹಸುವಿನ ಸಗಣಿ ಸೇರಿಸಬೇಕು ಇದು ತುಳಸಿ ಗಿಡವನ್ನು ಆರೋಗ್ಯವಾಗಿ ಬೆಳೆಯುವಂತೆ ಮಾಡುತ್ತದೆ.  ತುಳಸಿ ಗಿಡ ಸೊಳ್ಳೆಗಳನ್ನು ಮತ್ತು ಕೀಟಗಳನ್ನು ದೂರ ಇಡುತ್ತದೆ ಆದ್ದರಿಂದ ಅದು ನೈಸರ್ಗಿಕ ಕೀಟ ನಿವಾರಕ.

ಅಪಾಯಕಾರಿ ಅಂಶಗಳು ಇರುವ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಕ್ಸೈಡ್ ಈ ರೀತಿಯ ಪರಿಸರ ಹಾನಿ ಮಾಡುವ ಅಂಶಗಳನ್ನು ಗಾಳಿಯಿಂದ ದೂರ ಮಾಡಿ ಗಾಳಿಯನ್ನು ಶುದ್ಧ ಮಾಡುತ್ತದೆ. ಜೊತೆಗೆ ಗಳಿಗೆ ಹೆಚ್ಚು ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ. ಒಂದು ಬಕೆಟ್’ನಲ್ಲಿ 3 ಲೀಟರ್ ನೀರು ತೆಗೆದುಕೊಂಡು, ಕ್ಯಾಲ್ಸಿಯಂ ಇರುವ ಉತ್ಪನ್ನಗಳು ಎಂದರೆ ಹಾಲು ಇಲ್ಲ ಮಜ್ಜಿಗೆ ಮಿಶ್ರಣ ಮಾಡಿ ಒಂದು ಕಡೆ ಇಡಬೇಕು. ನಂತರ ಕಾಂಪೋಸ್ಟ್ ಗೊಬ್ಬರ ತಯಾರಿ ಮಾಡಿಕೊಳ್ಳಬೇಕು.

1 ಲೀಟರ್ ನೀರಿಗೆ ವರ್ಮಿ ಕಾಂಪೋಸ್ಟ್ ಇಲ್ಲ ಗೊಬ್ಬರ ಹಾಕಿ ಒಂದು ವಾರ ಹಾಗೆ ಇಡಬೇಕು ಹಾಗೆ ಪ್ರತಿ ದಿನ ನೀರನ್ನು ತಿರುಗಿಸಬೇಕು. ಎರಡು ನೀರನ್ನು ಒಂದು ವಾರದ ನಂತರ ಬೆರಸಿ ಅದಕ್ಕೆ 1/2 ಸ್ಪೂನ್ ಎಪ್ಸಂ ಸಾಲ್ಟ್ ಸೇರಿಸಬೇಕು ಇದನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಗಿಡಕ್ಕೆ ಹಾಕಬಹುದು. ಇಲ್ಲ ಸ್ಪ್ರೇ ಬಾಟಲ್’ನಲ್ಲಿ ಹಾಕಿ ಅದನ್ನು ಬಳಕೆ ಮಾಡಬಹುದು ಇದರಿಂದ ತುಳಸಿ ಗಿಡ ಕೂಡ ಚೆನ್ನಾಗಿ ಮತ್ತು ಹಸಿರಿನ ಸಿರಿ ತುಂಬಿಕೊಂಡು ಬೆಳೆಯುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: