WhatsApp Group Join Now
Telegram Group Join Now

Actress Sudharani Family: ಸ್ನೇಹಿತರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆನಂದ್ ಸಿನಿಮಾದ ಮೂಲಕ ತಮ್ಮ 13ನೇ ವರ್ಷಕ್ಕೆ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದಂತಹ ಸುಧಾರಾಣಿ(Sudharani) ಅಮ್ಮನವರು ಇಂದಿಗೂ ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಾ ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಹೌದು ಗೆಳೆಯರೇ ಅದೊಂದು ಕಾಲದಲ್ಲಿ ಡಾಕ್ಟರ್ ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್ರವರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ತಮ್ಮದೇ ಆದ ಪರ್ವವನ್ನು ಸೃಷ್ಟಿಸಿಕೊಂಡಿದಂತಹ ಸುಧಾರಾಣಿ(Sudharani)

ಅವರು ತಮ್ಮ ಮನಮೋಹಕ ಅಭಿನಯ ಹಾಗೂ ಅದ್ಭುತ ಸೌಂದರ್ಯದ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ಮನದರಸಿಯಾಗಿ ಹೋಗಿದ್ದವರು. ಇಂತಹ ನಟಿ ಸಿನಿಮಾರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಅಮೆರಿಕ ಮೂಲದ ಡಾಕ್ಟರ್ ಒಬ್ಬರನ್ನು ಪ್ರೀತಿಸಿ ದಂಪತ್ಯ ಜೀವನಕ್ಕೆ ಕಾಲಿಡುತ್ತಾರೆ‌. ಮದುವೆಯಾದ ಆರಂಭಿಕ ದಿನಗಳಲ್ಲಿ ಬಹಳನೇ ಸುಗಮವಾಗಿದಂತಹ ಇವರಿಬ್ಬರ ಸಂಚಾರಿಕ ಜೀವನವು ಆನಂತರ ತೀವ್ರವುಗಳನ್ನು ತೆಗೆದುಕೊಳ್ಳುತ್ತಾ ಚಿತ್ರಹಿಂಸೆಯನ್ನು ಅನುಭವಿಸಬೇಕಾದಂತಹ ಸಮಯ ಎದುರಾಗುತ್ತದೆ.

ಹೀಗೆ ಒಂದು ಹಂತದವರೆಗೂ ಎಲ್ಲವನ್ನೂ ಸಹಿಸಿಕೊಂಡಂತಹ ಸುಧಾರಣಿಯವರು ಫ್ಲೈಟ್ ಏರಿ ಮತ್ತೆ ಭಾರತಕ್ಕೆ ಬಂದು ಇಳಿದು ಸಿನಿಮ ರಂಗದಲ್ಲಿ ಸಕ್ರಿಯರಾದರು ಆನಂತರ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಂತಹ ಗೋವರ್ಧನ್ ಅವರ ಪರಿಚಯವಾಗಿ ಎರಡನೇ ಮದುವೆಯಾದರೂ ಸದ್ಯ ಮುದ್ದಿನ ಮಗಳೊಂದಿಗೆ ಇಂದು ಸುಖವಾಗಿ ಸಂಸಾರಿಕ ಜೀವನ ನಡೆಸುತ್ತಿದ್ದಾರೆ. ಹೌದು ಗೆಳೆಯರೇ ಎಲ್ಲೆಡೆ ಬಹಳ ಅನ್ಯೋನ್ಯವಾಗಿ ಕಾಣಿಸಿಕೊಳ್ಳುವಂತಹ ಈ ದಂಪತಿಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಕ್ಯೂಟೆಸ್ಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸಂತೋಷ ಪಡಿಸುತ್ತಿರುತ್ತಾರೆ.

ಸುಧಾರಾಣಿ(Sudharani)ಯವರ ಈ ಕುಟುಂಬದ ಫೋಟೋಗಳಿಗೆ ಅಭಿಮಾನಿಗಳು ವ್ಯಾಪಕ ಪ್ರತಿಕ್ರಿಯೆ ನೀಡುತ್ತಿದ್ದು, ಇದರ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮ ಹಾಗೂ ಸೀರಿಯಲ್ಗಳ ಮೂಲಕ ನಮ್ಮನ್ನು ರಂಜಿಸಿ ಎಂದು ಸಹ ಕೇಳಿಕೊಳ್ಳುತ್ತಿದ್ದಾರೆ. ಸದ್ಯ ಸುಧಾರಾಣಿ(Sudharani) ಅವರ ಅಭಿನಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಶ್ರೀರಸ್ತು ಶುಭಮಸ್ತು(Srirasthu Shubhamasthu) ಧಾರಾವಾಹಿ ದಿನೇ ದಿನೇ ತಿರುವುಗಳನ್ನು ತೆಗೆದುಕೊಳ್ಳುತ್ತಾ ಕಿರುತೆರೆ ಪ್ರೇಕ್ಷಕರಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು ಟಿ ಆರ್ ಪಿ ರೇಟಿಂಗ್ ನಲ್ಲಿಯೂ ಅಗ್ರಸ್ಥಾನವನ್ನು ಅಲಂಕರಿಸಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: