ಎಂತಹ ಪಾತ್ರ ನೀಡಿದರು ಅದ್ಭುತವಾಗಿ ಅಭಿನಯಿಸುವ ಮೂಲಕ ಕನ್ನಡದ ಭಾವಪೂರ್ವ ನಾಯಕಿಯಾಗಿ ಪ್ರಖ್ಯಾತಿ ಪಡೆದಿರುವಂತಹ ಕನಸಿನ ರಾಣಿ ಮಾಲಾಶ್ರೀ ಅವರು 1989 ರಲ್ಲಿ ನಟ ರಾಘವೇಂದ್ರ ರಾಜಕುಮಾರ್ (Raghavendra Rajkumar) ಅವರೊಂದಿಗೆ ನಂಜುಂಡಿ ಕಲ್ಯಾಣ(Nanjundi Kalyana) ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ.
ಮೊದಲ ಸಿನಿಮಾದಲ್ಲಿಯೇ ಗಂಡು ಬೀರಿ, ಅಹಂಕಾರ ತುಂಬಿದ ಮಹಿಳೆಯ ಪಾತ್ರದಲ್ಲಿ ಅಭಿನಯಸಿ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಆವರಿಸಿಕೊಂಡಂತಹ ಮಾಲಾಶ್ರೀ (Malashree) ಅನಂತನ ಸಾಲು ಸಾಲು ಸಿನಿಮಾಗಳನ್ನು ನೀಡಿ ಯಶಸ್ಸಿನ ಉತ್ತುಂಗದ ಶಿಖರದಲ್ಲಿರುವಾಗ ನಟ ಸುನಿಲ್ ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ.
ಹೌದು ಗೆಳೆಯರೇ, ಶ್ರುತಿ ಎಂಬ ಸಿನಿಮಾದಲ್ಲಿ ಸುನಿಲ್ ಮತ್ತು ಮಹಾಲಕ್ಷ್ಮಿ ಅಕ್ಕ ತಮ್ಮನ ಪಾತ್ರದಲ್ಲಿ ಕೆಲಸ ಮಾಡುವ ಮೂಲಕ ಪರಿಚಯವಾದರು. ಅನಂತರ ಬೆಳ್ಳಿ ಕಾಲುಂಗುರ, ಮಾಲಾಶ್ರೀ ಮಾಮಶ್ರೀ, ತವರು ಮನೆ ಉಡುಗೊರೆ ಮಾಂಗಲ್ಯ ಹೀಗೆ ಮುಂತಾದ ಯಶಸ್ವಿ ಸಿನಿಮಾಗಳನ್ನು ನೀಡಿ ಕನ್ನಡದ ಹಿಟ್ ಫೇರ್ಗಳ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಸಹ ಕೇಳಿ ಬಂದವು. ಹೀಗೆ ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿದ ಮಾಲಾಶ್ರೀ ಮತ್ತು ಸುನಿಲ್
ಮದುವೆಯಾಗಬೇಕೆಂದು ನಿರ್ಧರಿಸಿದಾಗ ವಿಧಿ ಇವರಿಬ್ಬರನ್ನು ದೂರ ಮಾಡುತ್ತದೆ. ಹೀಗೆ ಸುನಿಲ್ ಅವರ ಅಗಲಿಕೆಯಿಂದ ಮೂರು ವರ್ಷಗಳ ಕಾಲ ಭಾರಿ ನೋವನ್ನು ಅನುಭವಿಸಿದ ಮಾಲಾಶ್ರೀ ಅವರಿಗೆ ಕೋಟಿ ರಾಮ ಅವರ ಪರಿಚಯವಾಗಿ 1997ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಆರ್ಯನ್ ಮತ್ತು ರಾಧನ ರಾಮ್(Radhana Ram) ಎಂಬ ಇಬ್ಬರು ಮಕ್ಕಳು ಜನಿಸಿದರು.
ಬಹಳ ಅನ್ಯೋನ್ಯವಾಗಿದ್ದ ಈ ಕುಟುಂಬದ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. 26 ಏಪ್ರಿಲ್ 2021 ರಂದು ಕೋಟಿ ರಾಮು ಅವರು ಕರೋನ ಮಹಾಮಾರಿ ಕಾಯಿಲೆಗೆ ತುತ್ತಾಗಿ ಎಂಎಸ್ ರಾಮಯ್ಯ (MS Ramaiah) ಆಸ್ಪತ್ರೆಯಲ್ಲಿ ತಮ್ಮ ಕೊನೆ ಉಸಿರೆಳೆದರು. ಗಂಡನ ಅಗಲಿಕೆಯ ನೋವಿನಲ್ಲಿ ಮಕ್ಕಳಿಗಾಗಿ ಧೈರ್ಯ ತುಂಬಿಕೊಂಡಂತಹ ಮಾಲಾಶ್ರೀ ಅವರು ನಡೆಯಬೇಕಿದಂತಹ ಎಲ್ಲಾ ಅಂತಿಮ ಕಾರ್ಯಗಳನ್ನು ಮಾಡಿ ತನ್ನ ಪ್ರೀತಿಯ ಪತಿಗೆ ನಮನ ಸಲ್ಲಿಸಿದ್ದಾರೆ.
ಅದರಂತೆ ವರ್ಷದ ಪುಣ್ಯ ಪೂಜೆಯ ನಿಮಿತ್ತ ರಾಮು ಅವರ ಪುಣ್ಯಭೂಮಿ ಇರುವಂತಹ ಸ್ಥಳಕ್ಕೆ ಕುಟುಂಬ ಸಮೇತರಾಗಿ ಹೋಗಿ ಕೋಟಿ ರಾಮು(koti Ramu) ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ಲಾಗುತ್ತಿದ್ದು, ಪೂಜೆ ಮಾಡುವಾಗ ಗಂಡನನ್ನು ನೆನೆದು ಮಾಲಾಶ್ರೀ(Mala shree) ಕಣ್ಣೀರು ಹಾಕುತ್ತಿರುವುದನ್ನು ಕಂಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.