WhatsApp Group Join Now
Telegram Group Join Now

ತಮ್ಮ ಮುಗ್ಧ ಸೌಂದರ್ಯ ಹಾಗೂ ಅಮೋಘ ಅಭಿನಯದ ಮೂಲಕ ಹಲವಾರು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದಂತಹ ನಟಿ ಅಮೂಲ್ಯ(Amulya) ಬಾಲ ಕಲಾವಿದೆಯಾಗಿ ಡಾಕ್ಟರ್ ವಿಷ್ಣುವರ್ಧನ್(Vishnuvardhan) ಅವರ ಪರ್ವ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ೨೦೦೧ರಲ್ಲಿ ಪಾದರ್ಪಣೆ ಮಾಡಿದರು.

ಹೀಗೆ ದರ್ಶನ್ರವರ ಲಾಲಿ ಹಾಡು ಸಿನಿಮಾದಲ್ಲಿ ಅಭಿನಯಿಸಿ ಇನ್ನಷ್ಟು ಮನೆಮಾತಾದಂತಹ ಈ ನಟಿ 2007ರಲ್ಲಿ ಅತಿ ಚಿಕ್ಕ ವಯಸ್ಸಿಗೆ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಡೆಬ್ಯೂ ಮಾಡಿದಂತಹ ಅಮೂಲ್ಯ ಅವರು ಇಂದಿಗೂ ಕೂಡ ಸಾಕಷ್ಟು ಸಿನಿಮಾಗಳ ಆಫರ್ ಪಡೆದು ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇರುವಂತಹ ನಟಿ.

ಆದರೆ ಸಾಕಷ್ಟು ಸಿನಿಮಾಗಳ ಅವಕಾಶ ಇದ್ದು ಉತ್ತುಂಗದ ಶಿಖರದಲ್ಲಿರುವಾಗಲೇ ಉದ್ಯಮಿ ಜಗದೀಶ್ ಎಂಬುವವರೊಂದಿಗೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ಸಿನಿಮಾದಲ್ಲಿ ಸಕ್ರಿಯರಾಗಿದ್ದ ಅಮೂಲ್ಯ ಅವರು ಗರ್ಭಿಣಿಯಾದ ನಂತರ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಸದ್ಯ ತಮ್ಮ ಎರಡು ಅವಳಿ ಮಕ್ಕಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಮಾರ್ಚ್ ಒಂದನೇ 2022 ರಂದು ನಟಿ ಅಮೂಲ್ಯ ಅವರಿಗೆ ಎರಡು ಮುಂತಾದ ಗಂಡು ಮಕ್ಕಳು ಜನಿಸಿದರು. ಅದ್ದೂರಿಯಾಗಿ ಆ ಪುಟ್ಟ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಪೂರೈಸಿದ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ಕುಟುಂಬಸ್ಥರು, ಆತ್ಮೀಯರು ಹಾಗೂ ಕನ್ನಡ ಸಿನಿಮಾ ರಂಗದ ಸೆಲೆಬ್ರಿಟಿಗಳನ್ನು ಈ ಒಂದು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಗುರು ಹಿರಿಯರ ಸಮ್ಮುಖದಲ್ಲಿ ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ತಮ್ಮ ಇಬ್ಬರೂ ಮುದ್ದು ಮಕ್ಕಳಿಗೆ ಅಥರ್ವ ಮತ್ತು ಆದವ್ ಎಂಬ ಹೆಸರಿಟ್ಟಿದ್ದಾರೆ. ಸದ್ಯ ಈ ಪುಟ್ಟ ಮಕ್ಕಳ ಪಾಲನೆ ಘೋಷಣೆಯಲ್ಲಿ ಬಿಜಿಯಾಗಿರುವಂತಹ ಅಮೂಲ್ಯ(Amulya) ಮಕ್ಕಳ ಹಾಗೂ ತಮ್ಮ ಕುಟುಂಬದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ(Social media) ಹಂಚಿಕೊಳ್ಳುತ್ತಾ ವೈರಲ್ ಹಾಗುತ್ತಲೇ ಇದ್ದಾರೆ.

ಸದ್ಯ ಈ ನಾಲ್ವರ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು ಎರಡು ಮಕ್ಕಳಾದರೂ ಮಾಸದ ಅಮೂಲ್ಯರ ಸೌಂದರ್ಯಕ್ಕೆ ಅಭಿಮಾನಿಗಳು(Fans) ಕ್ಲೀನ್ ಬೋಲ್ಡ್ ಆಗಿದ್ದಾರೆ. ಹೌದು ಸ್ನೇಹಿತರೆ ಅಮೂಲ್ಯ(Amulya) ಅವರ ಮುಖದಲ್ಲಿನ ಚಾಮ್ ಕಂಡು ಅದೆಷ್ಟೋ ಜನ ಸಂತೂರ್ ಮಮ್ಮಿ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ ಸ್ನಾನ ಮಾಡಲು ಹೋದರೆ ಬಾತ್ರೂಮಿಗೆ ನುಗ್ತಾ ಇದ್ರು, ಮಲಗಿರುವ ಕೋಣೆಗೆ ಬಂದು ಮುಟ್ಟ ಬಾರದ ಜಾಗವನ್ನೆಲ್ಲ ಮುಟ್ಟುತ್ತಿದ್ದರು ತೆರೆ ಹಿಂದಿನ ಕಹಿ ದಿನಗಳನ್ನು ನೆನೆದು ಕಣ್ಣೀರು ಹಾಕಿದ ಸಿತಾರ!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: