WhatsApp Group Join Now
Telegram Group Join Now

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ರೆಬಲ್ ಕುಡಿಯಂದೆ ಪ್ರಖ್ಯಾತಿ ಪಡೆದಿದ್ದಂತಹ ಅಭಿಷೇಕ ಅಂಬರೀಶ್ (Abhishek Ambareesh) ಅವರು ಕಳೆದ ಕೆಲವು ದಿನಗಳ ಹಿಂದೆ ಬಹುಕಾಲದ ಗೆಳತಿ ಅವಿವ ಬಿಡ್ಡಪ್ಪ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬಹಳ ಅನ್ಯೂನ್ಯವಾಗಿದ್ದಾರೆ. ಮದುವೆಯಾದ ದಿನದಿಂದ ಇಂದಿನವರೆಗೂ ಎಲ್ಲೆಡೆ ಬಹಳ ಲವಲವಿಕೆಯಿಂದ ಓಡಾಡಿಕೊಂಡು ಜೊತೆಗಿರುವ ಫೋಟೋಗಳನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುವಂತಹ ಅಭಿಷೇಕ್

ಮತ್ತು ಅಭಿವ್ಯ ಇದೀಗ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ಹೌದು ಗೆಳೆಯರೇ ಅವಿವಾ ಮತ್ತು ಅಭಿಗೆ ಇದು ಮದುವೆಯಾದ ನಂತರ ಬಂದಂತಹ ಮೊದಲ ವರಮಹಾಲಕ್ಷ್ಮಿ ಹಬ್ಬವಾಗಿದ್ದು, ಹೀಗಾಗಿ ಮನೆಯಲ್ಲೇ ತಮ್ಮ ತಾಯಿಯೊಂದಿಗೆ ಸೇರಿ ಬಹಳ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಿದ್ದಾರೆ. ಹೌದು ಗೆಳೆಯರೇ ಅವಿವಾ ಅದೆಷ್ಟೇ ಪ್ರಖ್ಯಾತ ಮಾಡೆಲ್ ಆಗಿದ್ದರೂ ಕೂಡ ಮದುವೆಯಾಗ ದಿನದಿಂದ ಹಿಡಿದು ಇಂದಿನವರೆಗೂ ಅದ್ಯಾವುದನ್ನು

ತೋರಿಸಿಕೊಳ್ಳದೆ ಬಹಳ ಸರಳವಾಗಿ ಅಂಬಿ ಮನೆಗೆ ತಕ್ಕಂತಹ ಸೊಸೆಯಾಗಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ಹಬ್ಬದ ದಿನವೂ ಕೂಡ ಸಿಂಪಲ್ಲಾಗಿ ಹಸಿರು ಬಣ್ಣದ ಝರಿ ಸೀರೆ ಉಟ್ಟು ತಲೆಗೆ ಮಲ್ಲಿಗೆ ಮುಡಿದು, ಕೈಗಳಿಗೆ ಬಳೆ ಧರಿಸಿ ಬಹಳ ಲಕ್ಷಣವಾಗಿ ಕಾಣುತ್ತಿದ್ದರು. ಇನ್ನು ವಿಶೇಷವೆಂದರೆ ಅತ್ತೆ ಸೊಸೆ ಇಬ್ಬರು ಹಸಿರು ಬಣ್ಣದ ಸೀರೆ ಧರಿಸಿದ್ದರೆ ಅತ್ತ ಅಭಿಷೇಕ್ ಅಂಬರೀಶ್(Abhishek Ambareesh) ಯಥಾಪ್ರಕಾರ ಬಿಳಿ ಬಣ್ಣದ ಉಡುಪನ್ನು ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ.

ನಟಿ ಸುಮಲತಾ ಅಂಬರೀಶ್(Sumalatha Ambareesh) ಅವರು ಸೋಫಾದ ಮೇಲೆ ವಿರಾಜಮಾನವಾಗಿ ಕುಳಿತಿದ್ದಾರೆ, ಅವರ ಪಕ್ಕದಲ್ಲಿ ಅವಿವಾ(Aviva) ಹಾಗೂ ಹಿಂದುಗಡೆ ಅಭಿಷೇಕ್ ಅಂಬರೀಶ್ ನಿಂತು ರಾಯಲ್ ಆಗಿ ಫೋಟೋ(Photos) ಕ್ಲಿಕ್ಕಿಸಿಕೊಂಡಿದ್ದಾರೆ. ಪೂಜೆ ಮಾಡುವ ಸಂದರ್ಭದಲ್ಲಿ ತೆಗೆಯಲಾದಂತಹ ಎಲ್ಲಾ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಈ ದಂಪತಿಗಳು

ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ(Varamahalakshmi Fest) ಶುಭಾಶಯಗಳು ಕೋರಿದರು. ಸದ್ಯ ಈ ಒಂದು ಪೋಸ್ಟ್ ಬಾರಿ ವೈರಲ್ಲಾಗುತ್ತಿದ್ದು, ಅಭಿಮಾನಿಗಳು ಕಮೆಂಟ್ಗಳ ಸಾಗರವನ್ನ ಹರಿಸುತ್ತಾ ತಮ್ಮ ಪ್ರೀತಿಯ ಅಣ್ಣ ಅತ್ತಿಗೆಗೆ ಶುಭ ಹಾರೈಸಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: