2024ರ ದ್ವಾದಶ ರಾಶಿಗಳ ಹೊಸ ವರ್ಷದ ರಾಶಿ ಫಲ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಮೇಷ ರಾಶಿ. ಮೇಷ ರಾಶಿಯಲ್ಲಿ ಜನಿಸಿರುವಂತಹ ಜನರು ಲಾಭ ನಷ್ಟಗಳ ಬಗ್ಗೆ ವಿಶೇಷ ಚಿಂತನೆಯನ್ನು ಹೊಂದಿರುತ್ತಾರೆ ಆರ್ಥಿಕ ವಿಚಾರದಲ್ಲಿ ಒಂದು ರೀತಿಯ ಗೌಪ್ಯತೆ ಕಂಡು ಬರಲಿದ್ದು ಲಾಭವು ಬಂದರೂ ಸಹ ಅದು ನಿಮ್ಮ ಕೈಯಲ್ಲಿ ನಿಲ್ಲದಂತಾಗುವ ಸಂಭವ ಜಾಸ್ತಿ. ವಿಶೇಷವಾಗಿ ಮೇಷ ರಾಶಿಯವರು ಹಿರಿಯರ ಮಾರ್ಗದರ್ಶನವನ್ನು ಅನುಸರಿಸಬೇಕು ಹಾಗೆ ನಿಮ್ಮ ಕಾಯಕದಲ್ಲಿ ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಬೇಕು ಮೇಷ ರಾಶಿಯವರು ಈ ಸಂದರ್ಭದಲ್ಲಿ ಜವಾಬ್ದಾರಿಯುತ ಕಾರ್ಯವನ್ನ ಮಾಡಿ ಪ್ರಶಂಸೆಗೆ ಪಾತ್ರರಾಗುವ ಅವಕಾಶವನ್ನು ಪಡೆಯುತ್ತೀರಿ. ಹಾಗೆಯೇ ಮೇಷ ರಾಶಿಯ ರೈತರಿಗೆ ಒಳ್ಳೆಯ ಲಾಭ ದೊರೆಯಲಿದ್ದು ಮೇಷ ರಾಶಿಯ ಯೋಧರಿಗೆ ಎಚ್ಚರಿಕೆಯ ಸಂದರ್ಭ ಇದಾಗಿದೆ ಮೇಷ ರಾಶಿಯವರ ಆರೋಗ್ಯದ ವಿಚಾರ ನೋಡುವುದಾದರೆ ಸಣ್ಣಪುಟ್ಟ ಅನಾರೋಗ್ಯಕ್ಕೆ ಈಡಾಗುವ ಸಂಭವ ಇರುವುದರಿಂದ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ಮುಖ್ಯವಾಗಿ ನಿಮ್ಮ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಗಣಪತಿಯ ಆರಾಧನೆ ಮಾಡಬೇಕು.
ವೃಷಭ ರಾಶಿ ವೃಷಭ ರಾಶಿ ವೃಷಭ ಲಗ್ನದ ಜನರಿಗೆ ಪ್ರಾರಂಭದಲ್ಲಿ ಒಂದು ತರದ ಮಂದಗತಿ ಕಂಡುಬರುತ್ತದೆ ನಿಮ್ಮ ಪ್ರತಿನಿತ್ಯದ ಜೀವನದಲ್ಲಿ ನೀವು ಮಾಡುವ ಕೆಲಸಗಳ ಬಗ್ಗೆ ಯೋಚನೆ ಮಾಡಬೇಕಾದರೆ ಅಥವಾ ನೀವು ಯಾವುದಾದರು ನಿರ್ಧಾರ ತೆಗೆದುಕೊಳ್ಳಬೇಕಾದರೆ ಮಿಶ್ರ ಮನಸ್ಸಿನ ಆಲೋಚನೆಯನ್ನು ನೀವು ಹೊಂದಿರುತ್ತೀರಿ ನಿಮ್ಮ ಮನಸ್ಸು ತಲ್ಲಣಗೊಂಡಿರುತ್ತದೆ. ಹಾಗೆ ಪ್ರಾರಂಭದಲ್ಲಿ ಭಯ ನಿಮ್ಮನ್ನು ಕಾಡುತ್ತದೆ ಇದರಿಂದ ನೀವು ಕೆಲವೊಂದು ಕಾರ್ಯಗಳಲ್ಲಿ ಹಿಂಜರಿಕೆಯನ್ನು ವ್ಯಕ್ತಪಡಿಸುತ್ತೀರಿ. ಇನ್ನು ಭೂಮಿಯ ಮಾರಾಟದ ವಿಚಾರದಲ್ಲಿಯೂ ಸಹ ಕೊನೆ ಕ್ಷಣದಲ್ಲಿ ನೀವು ಅಂದುಕೊಂಡ ರೀತಿ ಆಗದೇ ಇರಬಹುದು ಹಾಗೆಯೇ ಆರೋಗ್ಯದ ವಿಚಾರ ನೋಡುವುದಾದರೆ ಜೂನ್ ಜುಲೈ ತಿಂಗಳಿನವರೆಗೆ ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ನಿಮ್ಮನ್ನ ಕಾಡುತ್ತಲೇ ಇರುತ್ತದೆ ಜುಲೈ ತಿಂಗಳ ನಂತರ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಅಭಿವೃದ್ಧಿಯನ್ನ ನೀವು ಕಾಣುತ್ತೀರಿ.
ಮಿಥುನ ರಾಶಿಯವರ ಮನಸ್ಸಿನಲ್ಲಿ ಒಂದಿಷ್ಟು ಚಂಚಲತೆ ಇರುತ್ತದೆ ಆದರೆ ಲಾಭದ ಸುಂದರ ಕ್ಷಣಗಳು ಕಣ್ಣ ಮುಂದೆ ಕಟ್ಟಿದಂತಿವೆ ವಿಶೇಷವಾಗಿ ಮಿಥುನ ರಾಶಿಯ ಜನರು ಮಕ್ಕಳಿಂದ ಹಿಡಿದು ವೃದ್ಧರ ತನಕ “ನಾನು” ಎಂಬ ಅಹಂಕಾರವನ್ನು ದೂರ ಮಾಡಿಕೊಂಡರೆ ಈ ವರ್ಷ ಸಾಧ್ಯವಾದದೆಲ್ಲವನ್ನು ಸಾಧ್ಯವಾಗಿಸಿಕೊಳ್ಳುತ್ತೀರಿ.
ಮನೆಯಲ್ಲಿರುವ ಮಕ್ಕಳು ಹಾಗೂ ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಬೇಕು ಹಾಗೆಯೇ ಕೋರ್ಟು ಕಚೇರಿಗೆ ಸಂಬಂಧಿಸಿದ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳನ್ನು ಸಹ ನೀವು ಎದುರಿಸಬೇಕಾಗುತ್ತದೆ ಆದ್ದರಿಂದ ಸಾಧ್ಯವಾದಷ್ಟು ಹುಷಾರಾಗಿರಿ.
ಕರ್ಕಾಟಕ ರಾಶಿ ಈ ರಾಶಿಯ ಜನರಿಗೆ ಈ ಬಾರಿಯ ವರ್ಷದ ಫಲ ಅದ್ಭುತವಾಗಿದೆ ಈ ಸಂದರ್ಭದಲ್ಲಿ ನೀವು ಸಾಕಷ್ಟು ಹೆಚ್ಚಿನ ಫಲಾಫಲಗಳನ್ನು ತಪ್ಪದೇ ಸಿದ್ಧಿಪಡಿಸಿಕೊಳ್ಳುತ್ತೀರಿ ನಿಮ್ಮ ಉದ್ಯೋಗ ವ್ಯವಹಾರ ಅಥವಾ ಇನ್ನಿತರ ಕ್ಷೇತ್ರಗಳಲ್ಲಿ ನೀವು ಯಶಸ್ಸನ್ನಗಳಿಸುತ್ತೀರ. ಈ ವರ್ಷ ನೀವು ಮಾಡಬೇಕು ಅಂದುಕೊಂಡಂತಹ ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಈಡೇರುತ್ತವೆ ಕರ್ಕಾಟಕ ರಾಶಿಯ ಜನರಿಗೆ ಅತಿ ಮುಖ್ಯವಾಗಿ ಅತಿಯಾದ ಆತ್ಮವಿಶ್ವಾಸವನ್ನು ಬಿಡಬೇಕು ಅಂದರೆ ನನ್ನ ಕೈಯಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬ ಭಾವನೆ ಇಟ್ಟುಕೊಳ್ಳಬಾರದು. ಈ ಜನರು ತಮ್ಮ ಮನೆದೇವರ ಪ್ರಾರ್ಥನೆ ಮಾಡಿ ಗುರು ಹಿರಿಯರಲ್ಲಿ ನಮ್ರತೆಯಿಂದ ಬದುಕಬೇಕು ಹೀಗೆ ಮಾಡಿದ್ದೆ ಆದರೆ ತಾವು ಅಂದುಕೊಂಡಂತಹ ಕೆಲಸ ಯಾವುದೇ ಅಡೆತಡೆಗಳಿಲ್ಲದೆ ನೆರವೇರುವುದು ಖಂಡಿತ.
ಸಿಂಹ ರಾಶಿ. ಸಿಂಹ ರಾಶಿ ಎಂದರೆ ನಿಮ್ಮಲ್ಲಿ ಒಂದು ಗರ್ಜನೆ ಕಾಣಿಸುತ್ತದೆ ನಿಮ್ಮ ವ್ಯವಹಾರ ಮತ್ತು ಉದ್ಯೋಗಗಳು ಉತ್ತಮ ಸ್ಥಾನದಲ್ಲಿ ಇರುತ್ತದೆ ಸಿಂಹ ರಾಶಿಯ ಜನರನ್ನು ನೀವು ಊರಿಸದೆ ಇರುವುದನ್ನು ಸಹ ಭಗವಂತ ನಿಮಗೆ ನೀಡುತ್ತಾನೆ ಆದರೆ ಇದರಿಂದ ಅಹಂಕಾರವನ್ನು ಮೂಡಿಸಿಕೊಳ್ಳಬಾರದು ಈ ವರ್ಷ ಸಿಂಹ ರಾಶಿಯವರಲ್ಲಿ ಹಾರ್ದಿಕ ಸಂಕಷ್ಟ ತುಂಬಾ ಕಡಿಮೆ ನೀವು ಹಣವನ್ನು ಯಥೇಚ್ಛವಾಗಿ ಸಂಪಾದನೆ ಮಾಡುತ್ತೀರಿ. ನಿಮ್ಮನ್ನು ನಂಬಿದ ಜನರ ಹೊಟ್ಟೆಯನ್ನು ತುಂಬಿಸುವ ಕೆಲಸವನ್ನು ನೀವು ಮಾಡುತ್ತೀರಿ ವಿಶೇಷವಾಗಿ ವಿರುದ್ಧ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬರಬಹುದು ಆದ್ದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಬೇಕು. ತಾಯಿ ದುರ್ಗೆಯನ್ನು ಆರಾಧನೆ ಮಾಡುವುದರಿಂದ ನಿಮ್ಮ ದುಃಖಗಳಿಂದ ಹಾಗೂ ಸಂಕಷ್ಟಗಳಿಂದ ಹೊರಗಡೆ ಬರಬಹುದು.
ಕನ್ಯಾ ರಾಶಿ. ಕನ್ಯಾ ರಾಶಿ ಕನ್ಯಾ ಲಗ್ನದ ಜನರಿಗೆ ಈ ವರ್ಷ ಅಷ್ಟೊಂದು ಸುಮಂಜಸವಾಗಿಲ್ಲ ನೀವು ಪ್ರಾರಂಭದ ಹಂತದಲ್ಲಿ ಬಹಳ ವೇಗವಾಗಿ ಮುನ್ನಡೆಯುತ್ತೀರಿ, ಆದರೆ ಇನ್ನೇನು ಆ ಕೆಲಸವನ್ನ ಸಾಧಿಸಬೇಕು ಎನ್ನುವ ಸಂದರ್ಭದಲ್ಲಿ ನಿಷ್ಕಾಳಜಿ ಹೊಂದುತ್ತೀರಿ. ಕನ್ಯಾ ರಾಶಿಯ ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ನಿಮ್ಮ ರಾಶಿಯವರು ಲಕ್ಷ್ಮಿ ಆರಾಧನೆ ಹಾಗೂ ಹಯಗ್ರೀವ ಮಂತ್ರವನ್ನ ಪಠಣೆ ಮಾಡಿ ನಿಮ್ಮ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ.
ತುಲಾ ರಾಶಿ. ತುಲಾ ರಾಶಿಯ ಜನರಿಗೆ ಈ ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸತನ್ನ ತಂದುಕೊಡುತ್ತದೆ ಆರು ತಿಂಗಳ ನಂತರ ನಿಮ್ಮ ಸ್ಥಿತಿಗತಿ ಬದಲಾಗುತ್ತದೆ ಮೊದಲ ಆರು ತಿಂಗಳು ಸುಖಕರವಾಗಿದ್ದರೆ ಕೊನೆಯ ಆರು ತಿಂಗಳು ಸಂಕಷ್ಟಗಳನ್ನು ತರಬಹುದು ನಿಮ್ಮ ಆರ್ಥಿಕ ಪರಿಸ್ಥಿತಿ ಹದಗಡಬಹುದು. ಶತ್ರುಗಳು ಉಲ್ಬಣಗೊಳ್ಳುವುದರಿಂದ ನಿಮ್ಮಲ್ಲಿರುವ ಒಳ್ಳೆಯತನ ನಾಶವಾಗುತ್ತದೆ. ನೀವು ಇದಕ್ಕೆ ಪರಿಹಾರವಾಗಿ ಯಾವುದಾದರೂ ಪುಣ್ಯಕ್ಷೇತ್ರಕ್ಕೆ ಹೋಗಿ ಒಂದು ದಿನ ಅಲ್ಲಿ ಉಳಿದು ದೇವರ ದರ್ಶನವನ್ನ ಮಾಡಿ ತೀರ್ಥ ಸ್ನಾನ ಮಾಡಿದರೆ ಖಂಡಿತ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ ಹಾಗೆ ಶ್ವೇತ ಬಣ್ಣದ ಬಟ್ಟೆಯಲ್ಲಿ ಒಂದಿಷ್ಟು ಅಕ್ಕಿಯನ್ನ ಕಟ್ಟಿ ಹಾಕಿ ಚಂದ್ರನನ್ನ ನೋಡಿ ಮನಸ್ಸಿಗೆ ನೆಮ್ಮದಿ ನೀಡು ಎಂಬುದಾಗಿ ಪ್ರಾರ್ಥನೆ ಮಾಡಿ ಆ ಅಕ್ಕಿಯ ಗಂಡನ ವಿಷ್ಣುವಿನ ದೇವಸ್ಥಾನಕ್ಕೆ ನೀಡಿ ಪೂಜೆ ಸಲ್ಲಿಸಿದರೆ ಮತ್ತಷ್ಟು ಅನುಕೂಲವನ್ನು ಪಡೆಯುತ್ತೀರಿ.
ವೃಚಿಕ ರಾಶಿ. ವೃಶ್ಚಿಕ ರಾಶಿಯವರು ಈ ವರ್ಷದಲ್ಲಿ ತಾವು ಒಂದು ಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಸಹ ಯಶಸ್ಸನ್ನ ಗಳಿಸುತ್ತೀರಿ. ಭಗವಂತ ಹಾಗೂ ಭಗವತಿಯ ಸಂಪೂರ್ಣ ಕೃಪಾಶೀರ್ವಾದ ನಿಮ್ಮ ಮೇಲೆ ಇರುತ್ತದೆ ಬಹಳ ಮುಖ್ಯವಾಗಿ ನೀವು ತಿಳಿದುಕೊಳ್ಳಬೇಕಾದುದು ಏನೆಂದರೆ ವಾಹನ ಚಲಿಸುವಂತಹ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಇನ್ನು ವ್ಯಾಪಾರ ವ್ಯವಹಾರ ಹಾಗೂ ಹಣಕಾಸಿನ ವಿಚಾರದಲ್ಲಿ ಲೇವಾದೇವಿ ಮಾಡುವಂಥವರು ಅಥವಾ ಭೂಮಿಯ ವಿಚಾರದಲ್ಲಿ ಇತ್ಯಾದಿ ಕೆಲಸಗಳಲ್ಲಿ ನೂರು ಪ್ರತಿಶತ ಕಾರ್ಯಸಿದ್ಧಿ ಹೊಂದುತ್ತೀರಿ. ನೀವು ತಾಳ್ಮೆಯನ್ನು ಕಳೆದುಕೊಳ್ಳದೆ ನಿಧಾನವಾಗಿ ಯೋಚಿಸಿ ನಿಮ್ಮ ಕಾರ್ಯವನ್ನು ಸಿದ್ಧಿಪಡಿಸಿಕೊಳ್ಳಬೇಕಾಗುತ್ತದೆ.
ಧನು ರಾಶಿ. ಧನು ರಾಶಿಯ ಜನರಿಗೆ ಈ ವರ್ಷದ ಮೊದಲ ಮೂರು ತಿಂಗಳು ವ್ಯಾಪಾರ ವ್ಯವಹಾರ ವಿದ್ಯಾಭ್ಯಾಸ ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಅಭಿವೃದ್ಧಿ ಕಂಡು ಬರುತ್ತದೆ ಆದರೆ ಮೂರು ತಿಂಗಳಿನ ನಂತರ ಸ್ವಲ್ಪ ಮಟ್ಟಿಗೆ ಸಂಕಷ್ಟಗಳನ್ನ ಎದುರಿಸಬೇಕಾಗಿ ಬರಬಹುದು ಇನ್ನು ಈ ಸಂಕಷ್ಟವನ್ನು ಎದುರಿಸುತ್ತಿರುವ ನಂತರದ ಮೂರು ತಿಂಗಳಲ್ಲಿ ಮತ್ತೆ ಪುನಹ ಲಾಭವನ್ನು ಕಾಣುತ್ತೀರಿ ಆದರೆ ಈ ಮಧ್ಯದ ಮೂರು ತಿಂಗಳು ಕಳೆಯುವುದು ಬಹಳ ಕಷ್ಟವಾಗುತ್ತದೆ ಅದರಿಂದ ಮನೆಯಲ್ಲಿ ಮನೆದೇವರ ಪ್ರಾರ್ಥನೆ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬದ ಸಮಸ್ಯೆಗಳಿಗೆ ಒಂದಷ್ಟು ಹೋಮ ಹವನಗಳನ್ನು ಮಾಡಿಸುವುದು ಇತ್ಯಾದಿ ದೈವ ಕಾರ್ಯಗಳನ್ನು ಮಾಡಬೇಕು. ನಿಮ್ಮ ರಾಶಿಯ ಪೂರ್ವ ಪುಣ್ಯ ಲಗ್ನದಲ್ಲಿ ಗುರು ಇರುವುದರಿಂದ ನಿಮಗೆ ಗುರುವಿನ ಆಶೀರ್ವಾದ ಇದ್ದೇ ಇರುತ್ತದೆ ಆದ್ದರಿಂದ ಹೆದರುವ ಅವಶ್ಯಕತೆ ಇಲ್ಲ.
ಮಕರ ರಾಶಿ. ಮಕರ ರಾಶಿಯವರಿಗೆ ಈ ಬಾರಿಯ ವರ್ಷ ಫಲ ಸಾಕಷ್ಟ ಸಿದ್ಧಿಯನ್ನು ತಂದುಕೊಳ್ಳುತ್ತದೆ ನಿಮ್ಮ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯನ್ನು ಕಾಣುತ್ತೇವೆ ಹಿಂದೆ ಅನುಭವಿಸಿದ್ದ ಕಷ್ಟಗಳೆಲ್ಲವೂ ಈಗ ಪರಿಹಾರಗಳು ಆದರೆ ಒಂದು ಕಿವಿಮಾತು ಏನೆಂದರೆ ನೀವು ನಿಮ್ಮ ಕಾರ್ಯ ಸಂಧಿಗೆ ಅನ್ಯಮಾರ್ಗವನ್ನು ತುಳಿಯುವ ಸಂದರ್ಭಗಳು ಬರಬಹುದು ಆದ್ದರಿಂದ ಯೋಚನೆ ಮಾಡಿ ಪರರಿಗೆ ಹಾನಿ ಉಂಟಾಗದಂತೆ ಧರ್ಮ ಮಾರ್ಗದಲ್ಲಿ ಮುಂದುವರೆಯಿರಿ. ನೀವು ಮಾಡುವಂತ ಕೆಲಸದಲ್ಲಿ ನಮ್ರತೆಯನ್ನು ಅಳವಡಿಸಿಕೊಂಡು ಗುರು ಹಿರಿಯರ ಆಜ್ಞೆಯಂತೆ ನೀವು ನಡೆದಲ್ಲಿ ಅಂದುಕೊಂಡ ಕಾರ್ಯವನ್ನು ಸಿದ್ಧಿಪಡಿಸಿಕೊಳ್ಳುತ್ತೀರಿ.
ಕುಂಭ ರಾಶಿ. ಕುಂಭ ರಾಶಿಯಲ್ಲಿ ಶನಿ ಇರುವಂತಹ ಸ್ಥಾನ ಅಷ್ಟೊಂದು ಸಮಂಜಸವಾಗಿರುವುದಿಲ್ಲ ಆದ್ದರಿಂದ ಇವರಲ್ಲಿ ಆರೋಗ್ಯದ ಸಮಸ್ಯೆ ಹಾಗೂ ಸಣ್ಣ ಪುಟ್ಟ ಕಿರಿಕಿರಿಗಳು ಕಂಡು ಬರಬಹುದು ನಾವು ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ ಕೂಡ ಇದೆ ಆದ್ದರಿಂದ ಇತರ ಜನರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ವಿಶೇಷವಾಗಿ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಿ ಒಂದು ವೇಳೆ ನಿಮ್ಮ ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡು ಬಂದರೆ ತಕ್ಷಣವೇ ವೈದ್ಯರ ಸಲಹೆಯನ್ನ ಪಡೆಯಿರಿ ಇದಕ್ಕೆ ಪರಿಹಾರವಾಗಿ ಧನ್ವಂತರಿ ಮಹಾವಿಷ್ಣುವಿನ ಪ್ರಾರ್ಥನೆ ಮಾಡಬೇಕು ತುಳಸಿ ಕುಡಿಯನ್ನ ವಿಷ್ಣುವಿನ ಪಾದದ ಮೇಲಿಟ್ಟು ತುಳಸಿ ತೀರ್ಥವನ್ನು ತೆಗೆದುಕೊಳ್ಳಿ ಹೀಗೆ ಮಾಡುವುದರಿಂದ ನಿಮಗಿರುವ ದೋಷಗಳು ಮುಕ್ತವಾಗುತ್ತವೆ.
ಮೀನ ರಾಶಿ. ದ್ವಾದಶ ರಾಶಿಗಳಲ್ಲಿ ಕೊನೆಯ ರಾಶಿಯಾಗಿರುವ ಮೀನ ರಾಶಿಯ ಜನರು ಈ ವರ್ಷದ ಪ್ರಾರಂಭದಲ್ಲಿ ಅತಿ ಆಸಕ್ತಿಯುತವಾಗಿ ಕೆಲಸವನ್ನ ಮಾಡುತ್ತೀರಿ ಹಣಕಾಸಿನ ವಿಚಾರದಲ್ಲಿ ತಗೊಂಡು ರೀತಿ ಎಲ್ಲವನ್ನು ಸಾಧಿಸುತ್ತೀರಿ ಆದರೆ ಭೂಮಿಯ ವಿಚಾರದಲ್ಲಿ ನಿಮ್ಮ ಮನಸ್ಥಿತಿ ಚಂಚಲಗೊಳ್ಳಬಹುದು ಅದರಿಂದ ಈ ವಿಚಾರದ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರು ಸಹ ನೂರು ಬಾರಿ ಯೋಚನೆ ಮಾಡಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು