Almonds Benefits For Good Health ಒಣ ಹಣ್ಣುಗಳಲ್ಲಿರುವ ಪೋಷಕಾಂಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ ಪ್ರತಿಯೊಂದು ಹಣ್ಣಿನಲ್ಲಿಯೂ ಬೇರೆ ಬೇರೆ ಪೋಷಕಾಂಶಗಳಿರುತ್ತವೆ. ಅದರಲ್ಲಿ ಈ ಬಾದಾಮಿಯು ಕೂಡ ಒಂದಾಗಿದೆ. ಬಾದಾಮಿ ತಿನ್ನುವುದರಿಂದ ಚರ್ಮಕ್ಕಾಗಲಿ ಆರೋಗ್ಯಕ್ಕಾಗಲಿ ತಲೆ ಕೂದಲಿಗಾಗಲಿ ಎಲ್ಲ ರೀತಿಯಲ್ಲೂ ಪೋಷಕಾಂಶಗಳು ಸಿಗುತ್ತವೆ ಆದ್ದರಿಂದ ದಿನಾಲು ಕೂಡ ಬಾದಾಮಿಯನ್ನು ನೆನೆಸಿಟ್ಟು ತಿನ್ನುವುದು ತುಂಬಾ ಒಳ್ಳೆಯದು ಹಾಗಾದರೆ ಈ ಬಾದಾಮಿಯಲ್ಲಿ ಯಾವ ಯಾವ ಪೋಷಕಾಂಶಗಳಿವೆ ಅದನ್ನು ಹೇಗೆ ತಿನ್ನುವುದು ಎಷ್ಟು ತಿನ್ನಬೇಕು ಎಂಬುದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಹಾಗಾದ್ರೆ ನೆನೆಸಿದ ಬಾದಾಮಿಯನ್ನು ಏಕೆ ತಿನ್ನಬೇಕು?
ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ಸುಲಿದು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಬಾದಾಮಿಯಲ್ಲಿರುವ ಪೋಷಕಾಂಶಗಳೆಲ್ಲವೂ ಸರಿಯಾಗಿ ನಮ್ಮ ದೇಹವನ್ನು ಸೇರುತ್ತವೆ. ಒಂದು ವೇಳೆ ಸಿಪ್ಪೆ ಸಹಿತ ನೀವು ತಿಂದಲ್ಲಿ ಪೋಷಕಾಂಶಗಳು ಸಂಪೂರ್ಣವಾಗಿ ನಮ್ಮ ದೇಹಕ್ಕೆ ದೊರೆಯುವುದಿಲ್ಲ ಆದ್ದರಿಂದ ಎಲ್ಲರೂ ಹೇಳುವುದು ಒಂದೇ, ಸಿಪ್ಪೆ ಸುಲಿದ ಬಾದಾಮಿಯನ್ನು ತಿನ್ನಬೇಕು. ಹಾಗೆ ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಏನು ಪ್ರಯೋಜನ ಅಂತ ನೀವು ಕೇಳಬಹುದು.
ಯಾವುದೇ ಒಣ ಹಣ್ಣುಗಳಾಗಲಿ ಅಥವಾ ಬೀಜಗಳಾಗಲಿ ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಅದರ ಪೋಷಕಾಂಶಗಳ ಪ್ರಮಾಣ ಹೆಚ್ಚಿರುತ್ತದೆ ಅದನ್ನು ಹಾಗೆಯೇ ತಿನ್ನುವುದಕ್ಕಿಂತ ನೆನೆಸಿಟ್ಟುಕೊಂಡು ತಿಂದರೆ ದುಪ್ಪಟ್ಟು ಪೋಷಕಾಂಶಗಳನ್ನು ಪಡೆಯಬಹುದಾಗಿದೆ ಆದ್ದರಿಂದಲೇ ಎಲ್ಲರೂ ಹೇಳುವುದು, ಒಣ ಹಣ್ಣುಗಳನ್ನು ನೆನೆಸಿ ತಿನ್ನಬೇಕು. ನಿಯಮಿತವಾಗಿ ಬಾದಾಮಿಯನ್ನು ತಿನ್ನುವುದರಿಂದ ತುಂಬಾ ಒಳ್ಳೆಯದು ಈ ಬಾದಾಮಿ ಮಕ್ಕಳಿಗಂತೂ ನೆನಪಿನ ಶಕ್ತಿಯ ಆಗರ ಅಂತಾನೇ ಹೇಳಬಹುದು. ಮಕ್ಕಳಿಗೆ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿಯನ್ನು ಮೂರರಿಂದ ನಾಲ್ಕು ಸಿಪ್ಪೆ ಸುಲಿದು ತಿನಿಸುವುದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಹಾಗಾದರೆ ಬಾದಾಮಿಯನ್ನು ನೆನೆಸಿಡುವುದು ಹೇಗೆ? ಎಂಬುದನ್ನು ನೋಡೋಣ. ರಾತ್ರಿ ಒಂದು ಪಿಂಗಾಣಿ ಪಾತ್ರೆಯಲ್ಲಿ ನೀರನ್ನು ಹಾಕಿ ನೆನೆಸಿಡಬೇಕು 12 ಗಂಟೆಯ ನಂತರ ಆ ನೀರನ್ನು ಚೆಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಮತ್ತು ಬಿಸಿ ನೀರನ್ನು ಹಾಕಿ ನೆನೆಸಿಡಬೇಕು ಪುನಹ 12 ಗಂಟೆಗಳ ನಂತರ ನೀರನ್ನು ಚೆಲ್ಲಿ ತಿನ್ನಬಹುದು ಒಂದು ವಾರಗಳ ಕಾಲ ಇಟ್ಟರೂ ಕೂಡ ಈ ಬಾದಾಮಿ ಕೆಡುವುದಿಲ್ಲ ಹಾಗೆ ಇದರಲ್ಲಿರುವ ಪೋಷಕಾಂಶಗಳು ಕೂಡ ನಾಶವಾಗುವುದಿಲ್ಲ ಈ ರೀತಿಯಾಗಿ ನೆನೆಸಿಟ್ಟು ತಿಂದರೆ ನಮಗೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ.
ದಿನಾಲು 8 ರಿಂದ 10 ಬಾದಾಮಿಯನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ಸುಲಿದು ತಿನ್ನುವುದರಿಂದ ನಮ್ಮ ಚರ್ಮವು ಹೊಳೆಯುತ್ತದೆ ಹಾಗೆ ಇದು ಆಂಟಿ ಏಜಿಂಗ್ ತರ ಕೆಲಸ ಮಾಡುತ್ತದೆ ಮತ್ತು ಕೂದಲಿಗೂ ಕೂಡ ಇದು ತುಂಬಾ ಒಳ್ಳೆಯದು ಕೂದಲು ಕೂಡ ಆರೋಗ್ಯವಾಗಿರುತ್ತದೆ. ಹಾಗೆ ಮಧುಮೇಹಿಗಳಿಗೆ, ರಕ್ತದೊತ್ತಡ ಇರುವವರಿಗೆ ಎಲ್ಲರಿಗೂ ಕೂಡ ಈ ಬಾದಾಮಿ ತುಂಬಾ ಒಳ್ಳೆಯದು. ನಿಯಮಿತವಾಗಿ ಇದನ್ನು ತಿನ್ನುವುದರಿಂದ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯದಂತೆ ನಮ್ಮನ್ನು ಆರೋಗ್ಯವಾಗಿರಿಸುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು