Shanideva: ಶನಿಯು ಕರ್ಮಕಾರಕ ಅಂತ ಹೇಳುತ್ತಾರೆ ಮಾಡಿದ ಪಾಪ ಪುಣ್ಯಗಳಿಗೆ ತಕ್ಕಂತಹ ಫಲವನ್ನು ಕೊಡುತ್ತಾನೆ. ಹಾಗಾದ್ರೆ ಶನಿದೇವನ ಕೃಪೆ ಯಾವ ಯಾವ ರಾಶಿಗಳ ಮೇಲೆ ಇದೆ ಅಂತ ತಿಳಿದುಕೊಳ್ಳೋಣ. ಕಲಿಯುಗದ ದೈವ ಶನಿ ಪರಮಾತ್ಮ. ಇವನನ್ನು ಆರಾಧಿಸಿದರೆ ಜೀವನದಲ್ಲಿ ಯಾವ ಬಾಧೆಯು ಬಾಧಿಸುವುದಿಲ್ಲ ದುರದೃಷ್ಟದಿಂದ ಹಿಡಿದು ಎಲ್ಲ ಕಂಟಕಗಳು ಕೂಡ ದೂರವಾಗುತ್ತವೆ. ಆದ್ದರಿಂದ ಶನಿಯನ್ನು ಕಲಿಯುಗದ ದೈವ ಅಂತ ಕರೆಯಲಾಗುತ್ತದೆ.
ಹಾಗಾದ್ರೆ ಶನಿ ಕೃಪೆಯಿಂದ ಈ ರಾಶಿಗಳಿಗೆ ಅದ್ಭುತವಾದ ಯೋಗ ಪ್ರಾಪ್ತಿಯಾಗುತ್ತದೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರು ನಿಮ್ಮ ಸ್ನೇಹಿತರಿಂದ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸ್ನೇಹಿತರು ಆಗಲಿ ಅಥವಾ ಇನ್ಯಾರೋ ಆಗಲಿ ನಿಮ್ಮ ಕೆಲಸಕ್ಕೆ ಕುಂದನ್ನು ತರುವಂತಹ ಪ್ರಯತ್ನ ಮಾಡುತ್ತಾರೆ ಆದ್ದರಿಂದ ಇವರ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ. ಹಾಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಇನ್ನು ಎರಡನೆಯದಾಗಿ ಮಿಥುನ ರಾಶಿಯವರು ತುಂಬಾ ಶ್ರಮ ಪಟ್ಟು ಕೆಲಸವನ್ನು ಮಾಡಬೇಕು ಕೆಲಸ ಮಾಡಿದಾಗ ಅವರಿಗೆ ಪ್ರತಿಫಲ ದೊರೆಯುವುದಿಲ್ಲ ಹಾಗಾಗಿ ಶನಿಮಹಾತ್ಮನ ಕೃಪೆಯಿಂದ ನಿಮಗೆ ಉದ್ಯೋಗದಲ್ಲಿ ಒಳ್ಳೆಯದಾಗುತ್ತದೆ. ನೀವು ಸ್ವಲ್ಪ ಕಠಿಣ ಪರಿಶ್ರಮದಿಂದ ಹಣಕಾಸನ್ನು ಪಡೆಯಬಹುದಾಗಿದೆ.
ಇನ್ನು ಮೂರನೆಯದಾಗಿ ತುಲಾ ರಾಶಿ : ತುಲಾ ರಾಶಿಯವರು ಸ್ವಲ್ಪ ಏರುಪೇರಾದಂತಹ ಮನಸ್ಥಿತಿಯನ್ನು ಹೊಂದಿರುವವರಾಗಿರುತ್ತಾರೆ. ಕೋಪ ತಾಪಗಳನ್ನ ಇವರು ಜಾಸ್ತಿ ಹೊಂದಿರುತ್ತಾರೆ. ಇವರಿಗೆ ಉದ್ಯೋಗದಲ್ಲಿ ಯಶಸ್ಸು ಲಭಿಸುತ್ತದೆ . ಇಷ್ಟು ದಿನಪಟ್ಟಿರುವ ಕಷ್ಟಕ್ಕೆ ತಕ್ಕಂತಹ ಪ್ರತಿಫಲ ದೊರೆಯುವ ಸಮಯ ಎಂದು ಹೇಳಬಹುದು.
ಇನ್ನು ನಾಲ್ಕನೆಯ ಹಾಗೂ ಕೊನೆಯದಾಗಿ ಧನಸು ರಾಶಿ : ನೀವು ಈ ಸಮಯದಲ್ಲಿ ಎಲ್ಲ ಕೆಲಸಗಳನ್ನು ಸಾಧಿಸಬಹುದು. ಆದರೆ ನಿಧಾನ ಗತಿಯಲ್ಲಿ ನಿಮಗೆ ಫಲಗಳು ದೊರಕುತ್ತವೆ. ಆರೋಗ್ಯ ಚೆನ್ನಾಗಿರುತ್ತೆ. ಈ ಸಮಯದಲ್ಲಿ ನೀವು ಸ್ವಲ್ಪ ತಾಳ್ಮೆಯಿಂದ ಇರಬೇಕಾಗುತ್ತೆ. ಶನಿ ನಿಮ್ಮನ್ನು ಕೈಬಿಡುವುದಿಲ್ಲ.
ಹನುಮಂತನ ಸ್ಮರಣೆಯನ್ನು ಮಾಡಿ. ಶನಿದೇವನು ಹನುಮಂತನ ಸ್ಮರಣೆಯನ್ನು ಮಾಡುವವರಿಗೆ ಅಥವಾ ಹನುಮಂತನ ಭಕ್ತರಿಗೆ ಹೆಚ್ಚು ಕಷ್ಟಗಳನ್ನು ಕೊಡುವುದಿಲ್ಲ. ಆದ್ದರಿಂದ ಶನಿಯ ದೆಸೆಯಿಂದ ತಪ್ಪಿಸಿಕೊಳ್ಳಲು ಹನುಮಂತನ ಸ್ಮರಣೆಯನ್ನ ಮಾಡಬೇಕು. ಎಚ್ಚರಿಕೆಯಿಂದ ನಿಮ್ಮ ಕೆಲಸವನ್ನು ಮಾಡಿ.