WhatsApp Group Join Now
Telegram Group Join Now

Surya Dosha: ನವಗ್ರಹಗಳಲ್ಲಿ ಅತ್ಯಂತ ಶಕ್ತಿಯುತವಾದ ಗ್ರಹ ಸೂರ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಸೂರ್ಯನ ಪ್ರಭಾವ ಬಲವಾಗಿದ್ದರೆ ವರ್ಚಸ್ಸು ಚೆನ್ನಾಗಿರುತ್ತೆ ಅಂದರೆ ಆ ಜಾತಕದ ಮನುಷ್ಯನ ಜೀವನ ಸೂರ್ಯನಂತೆ ಹೊಳೆಯುತ್ತಿರುತ್ತದೆ ಆರೋಗ್ಯವಾಗಲಿ ಅಥವಾ ಆರ್ಥಿಕತೆಯಿಂದಾಗಲಿ ಆ ಮನುಷ್ಯ ಬಹಳ ಸದೃಢನಾಗಿರುತ್ತಾನೆ. ಹಾಗಾಗಿ ನಾವು ಸೂರ್ಯ ದೇವರನ್ನ ಒಲಿಸಿಕೊಳ್ಳಬೇಕು ಸೂರ್ಯ ದೇವರನ್ನ ನಮ್ಮ ಜಾತಕದಲ್ಲಿ ಬಲಿಷ್ಠರಾಗಿರುವಂತೆ ನೋಡಿಕೊಳ್ಳಬೇಕು.

ಜಾತಕದಲ್ಲಿ ಸೂರ್ಯನು ಚೆನ್ನಾಗಿದ್ದರೆ ಆ ಮನುಷ್ಯನು ಕೀರ್ತಿ ಗೌರವ ವೈಭೋಗ ಆರೋಗ್ಯ ಹಾಗೂ ಹಣದ ಬಲವನ್ನು ಹೊಂದಿರುತ್ತಾನೆ. ಬಹಳ ಕರುಣಾಮಯಿಯಾಗಿರುತ್ತಾನೆ. ಸೂರ್ಯನನ್ನು ನವಗ್ರಹಗಳ ಅಧಿಪತಿ ಅಂತಲೂ ಕರೆಯುತ್ತಾರೆ. ಜಾತಕದಲ್ಲಿ ಸೂರ್ಯನು ನೀಚನಾದರೆ ಆ ವ್ಯಕ್ತಿಯ ಬದುಕು ತುಂಬಾ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಕೆಲವು ಆಹಾರವನ್ನು ತ್ಯಜಿಸಬೇಕಾಗುತ್ತದೆ. ಇದರ ಮೂಲಕ ಸೂರ್ಯನ ಕೃಪೆಯನ್ನು ಪಡೆಯಬೇಕು.

ಹಾಗಾದರೆ ಈ ಆಹಾರಗಳು ಯಾವವು ಎಂಬುದರ ಬಗ್ಗೆ ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳೋಣ. ಮೊದಲನೆಯದಾಗಿ ಕೆಂಪು ಹುರುಳಿ ಈ ಕೆಂಪು ಹುರುಳಿಯನ್ನ ಭಾನುವಾರ ತಿನ್ನುವುದನ್ನು ತಿಳಿಸಬೇಕು ಇದರಲ್ಲಿ ಹೇರಳವಾಗಿ ಪ್ರೋಟೀನ್ ಇರುತ್ತದೆ, ಮಾಂಸಕಿಂತಲೂ ಹೆಚ್ಚಿಗೆ ಪ್ರೋಟಿನ್ ಅನ್ನ ಇದು ಹೊಂದಿರುತ್ತದೆ ಆದರೆ ಯಾವುದೇ ಕಾರಣಕ್ಕೂ ನೀವು ಭಾನುವಾರ ಇದನ್ನು ಸೇವಿಸಬಾರದು.

ಪಾಲಕ್ ಸೊಪ್ಪು, ಇದನ್ನು ಭಾನುವಾರ ತಿನ್ನಬಾರದು ಅಂತ ಹೇಳಲಾಗುತ್ತದೆ. ಯಾಕೆಂದರೆ ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಸಾವಿನ ಸಂಕೇತ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಆದ್ದರಿಂದ ಈ ಸೊಪ್ಪನ್ನು ದಿನಾಲು ತಿನ್ನುವುದನ್ನು ತಪ್ಪಿಸಿ. ಇನ್ನು ಬೆಳ್ಳುಳ್ಳಿ, ಬೆಳ್ಳುಳ್ಳಿಯನ್ನ ಎಲ್ಲರೂ ತಿಂತಾರೆ ಇದರಲ್ಲಿ ಹೇರಳವಾಗಿ ಆಂಟಿಆಕ್ಸಿಡೆಂಟ್ ಕೂಡ ಇರುತ್ತದೆ.

ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹಲವಾರು ಔಷಧಿಯ ಗುಣಗಳನ್ನು ಹೊಂದಿದೆ. ಆದರೆ ಕೆಲವೊಂದು ಕಾರಣಗಳಿಂದ ನಮ್ಮ ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ ಇದನ್ನು ಭಾನುವಾರದ ದಿನ ತಿನ್ನಲೇಬಾರದಂತೆ. ಇನ್ನು ಈರುಳ್ಳಿಯನ್ನು ಕೂಡ ತಿನ್ನಬಾರದು. ಈರುಳ್ಳಿ ಹಾಗೂ ಬೆಳ್ಳುಳ್ಳಿಗಳು ತಾಮಸಿಕ ಆಹಾರವಾಗಿದ್ದು ಶುಭ ದಿನಗಳಲ್ಲಿ ಶುಭ ವಾರಗಳಲ್ಲಿ ಇದನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: