Money savings Plan: ಹಣವನ್ನು ಉಳಿಸುವುದು ಒಂದು ಕಲೆ. ಹಾಗೆ ಹಣವನ್ನ ಬೆಳೆಸುವುದು ಅಂದರೆ ಹಣವನ್ನು ಹೂಡಿಕೆ ಮಾಡಿ ಹಣವನ್ನು ಡಬಲ್ ಮಾಡುವುದು ಇದು ಇನ್ನೊಂದು ರೀತಿಯ ಉತ್ತಮವಾದ ಕಲೆ ಅಂತಾನೆ ಹೇಳಬಹುದು. ಒಬ್ಬ ಮನುಷ್ಯನ ಸ್ವಲ್ಪವೇ ಹಣವನ್ನು ದುಡಿಯಲೀ ಅಥವಾ ಜಾಸ್ತಿ ದುಡಿಯಲಿ ಅದನ್ನ ಹೀಗೆ ಅವನು ಹೂಡಿಕೆ ಮಾಡುತ್ತಾನೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಹಣವನ್ನು ಉಳಿತಾಯ ಮಾಡುವುದು ಸುಲಭವಲ್ಲ ಅದಕ್ಕೆ ಬುದ್ಧಿ ಚತುರತೆ ಬೇಕಾಗುತ್ತದೆ. ಹಾಗಾದರೆ ನಿಮಗೆ ಇಲ್ಲೊಂದು ಸರಳವಾದ ಟಿಪ್ಸ್ ಗಳನ್ನು ನಾವು ಕೊಡುತ್ತಿದ್ದೇವೆ. ಈ ಪೂರ್ತಿ ಲೇಖನವನ್ನ ಓದಿ ಕೆಲವೊಂದು ಸಲಹೆಗಳನ್ನ ತಿಳಿಯಿರಿ ಇದು ನಿಮ್ಮ ಜೀವನಕ್ಕೆ ಉತ್ತಮ ದಾರಿಯಾಗಬಹುದು.
ನೀವು ಹಣವನ್ನು ಖರ್ಚು ಮಾಡುವಾಗ ಮೊದಲು ಮಾಡಬೇಕಾದ ಕೆಲಸಗಳು ಏನೆಂದರೆ ಸರಿ ಆದ ಖರ್ಚು ವೆಚ್ಚವನ್ನು ಮೊದಲು ಲೆಕ್ಕ ಹಾಕಬೇಕು ಆಮೇಲೆ ನೀವು ಹಣವನ್ನು ಖರ್ಚು ಮಾಡಬೇಕು. ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವಂತೆ ನಮ್ಮ ಬಜೆಟ್ ನಲ್ಲಿ ಎಷ್ಟು ಆಗುತ್ತೋ ಅಷ್ಟನ್ನ ಮೊದಲು ನಾವು ಖರ್ಚು ಮಾಡುತ್ತಾ ಹೋದರೆ ನಮಗೆ ಹಣದ ಭಾರ ಯಾವತ್ತೂ ಆಗುವುದಿಲ್ಲ ಮತ್ತು ಹಣವು ನಮ್ಮಲ್ಲಿ ಉಳಿತಾಯವಾಗುತ್ತಾ ಹೋಗುತ್ತದೆ.
ಇನ್ನು ನೀವು ಮಾಡಬೇಕಾದ ಎರಡನೆಯ ಕೆಲಸ ಅಂದರೆ ಖರ್ಚು ವೆಚ್ಚವನ್ನು ಒಂದು ಪಟ್ಟಿಯಲ್ಲಿ ಬರೆದು ಇಡಬೇಕು ಇದರಿಂದ ನಿಮಗೆ ಎಷ್ಟು ಖರ್ಚಾಗಿದೆ ಎಂದು ತಿಳಿಯುತ್ತದೆ. ಇದರಲ್ಲಿ ಒಳ್ಳೆಯ ಖರ್ಚುಗಳೇ ಎಷ್ಟು ಅನವಶ್ಯಕ ಖರ್ಚುಗಳು ಎಷ್ಟು ಎಂಬುದು ನಿಮಗೆ ನೀವೇ ಮನವರಿಕೆ ಮಾಡಿಕೊಂಡಂತಾಗುತ್ತದೆ.
ಇನ್ನು ನೀವು ಹೂಡಿಕೆ ಮಾಡುವಾಗಲೂ ಅಷ್ಟೇ ಮಾರುಕಟ್ಟೆಯಲ್ಲಿ ಯಾವುದು ಹೊಸ ಸ್ಕೀಮ್ ಬಂದಿದೆ ಜನರು ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು ಅದರ ಮೇಲೆ ನೀವು ಹೂಡಿಕೆಯಲ್ಲಿ ನಿರ್ಧಾರ ಮಾಡಬೇಕು ಸುಮ್ಮನೆ ಏಕ ಏಕೆ ಕಣ್ಣು ಮುಚ್ಚಿಕೊಂಡು ಹೂಡಿಕೆ ಮಾಡಿದರೆ ಹಣವನ್ನು ಗಳಿಸಲು ಸಾಧ್ಯವಿಲ್ಲ ಉಳಿಸಲು ಸಾಧ್ಯವಿಲ್ಲ. ಈ ರೀತಿಯಾಗಿ ನಾವು ಹೇಳಿದಂತೆ ಮಾಡುತ್ತಾ ಹೋದರೆ ಖಂಡಿತವಾಗಲೂ ಹಣದ ಉಳಿತಾಯ ನಿಮಗೆ ಆಗುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.