ಸ್ನೇಹಿತರೆ, ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅಪರೂಪದ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತದೆ. ದಕ್ಷ ಪೊಲೀಸ್ ಅಧಿಕಾರಿಯು(Police officer) ತಾನು ಓದಿ ಸಾಮಾನ್ಯ ಜ್ಞಾನ ಕಲಿತಂತಹ ಶಾಲೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರನ್ನು ಮಾತನಾಡಿಸುತ್ತಿರುವ ಈ ವಿಡಿಯೋ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು, ಇದನ್ನು ವೀಕ್ಷಿಸಿದವರು ಪೊಲೀಸ್ ಅಧಿಕಾರಿ ಮಾಡಿರುವಂತಹ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿ ಮಾಡಿದ್ದೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಬಂದು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಪ್ರತಿಯೊಬ್ಬ ಮಕ್ಕಳಿಗೂ ಮನೆಯಲ್ಲಿ ಕಲಿಯುವಂತಹ ಸಣ್ಣಪುಟ್ಟ ಶಿಕ್ಷಣ್ಗಳ ನಂತರ ಸಿಗುವುದೇ ಶಾಲೆಯಲ್ಲಿನ ಶಿಕ್ಷಣ(Education) ಹೀಗಾಗಿ ಶಿಕ್ಷಕರು ಕೂಡ ಮಕ್ಕಳ ಒಳಗಿರುವಂತಹ ನಕಾರಾತ್ಮಕತೆಯನ್ನು ಹೊರಹಾಕಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ಉತ್ತಮ ಸ್ಥಾನಕ್ಕೆ ತಲುಪಬೇಕೆಂಬ ಸಕಾರಾತ್ಮಕ ಬೋಧನೆಗಳ ಮೂಲಕ ಒಂದು ಮಗುವಿನ ಅಭಿವೃದ್ಧಿಗೆ ಕಾರಣರಾಗುತ್ತಾರೆ.
ಹೀಗೆ ಶಿಕ್ಷಕರ ಈ ಕನಸೇನಾದರೂ ನಿಜವಾದಲ್ಲಿ ಸಾಧನೆ ಮಾಡಿದಂತಹ ವಿದ್ಯಾರ್ಥಿ(Student) ತನ್ನ ಕುಟುಂಬದೊಂದಿಗೆ ಶಾಲೆಗೆ ಭೇಟಿ ನೀಡಿ ತನ್ನ ಕೈಯಲ್ಲಿ ಆದ ಸಹಾಯ ಮಾಡುವುದು ಇದು ಮೊದಲನೆಯದಲ್ಲ. ಅದರಂತೆ ಗ್ರಾಮದ ಪುಟ್ಟ ಶಾಲೆ ಒಂದರಲ್ಲಿ ಓದಿ ಇಂದು ಪೊಲೀಸ್ ಅಧಿಕಾರಿ(Police officer) ಯಾಗಿರುವಂತಹ ವ್ಯಕ್ತಿ ಒಬ್ಬರು ತನ್ನ ಶಿಕ್ಷಕರನ್ನು ಭೇಟಿ ಮಾಡುವ ಸಲುವಾಗಿ ವಿಶೇಷ ದಿನದಂದು ಶಾಲೆಗೆ ಭೇಟಿ ನೀಡಿ ಸಿಹಿ ಹಂಚುತ್ತ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ತನ್ನ ಹಳೆಯ ವಿದ್ಯಾರ್ಥಿ (Student) ಕುರಿತು ಬಹಳ ಹೆಮ್ಮೆಯಿಂದ ಮಾತನಾಡಿದಂತಹ ಶಿಕ್ಷಕಿ ಅಲ್ಲಿದ್ದಂತಹ ಮಕ್ಕಳಿಗೆ ಅವರು ದೇಶದ ಹೆಸರನ್ನು ಮಾತ್ರವಲ್ಲದೆ ಸಮಾಜ ಮತ್ತು ಪೋಷಕರ ಹೆಸರನ್ನು ಬೆಳಗಿಸಿದ್ದಾರೆ. ನೀವು ಅವರಂತೆ ಆಗಬೇಕು ಮತ್ತು ಸಮಾಜದಲ್ಲಿ ನಿಮಗೂ ಉತ್ತಮ ಗೌರವ ದೊರಕಬೇಕು, ಇವರೇ ನಿಮ್ಮ ಮುಂದಿನ ಸ್ಪೂರ್ತಿಯಾಗಬೇಕೆಂದು ತನ್ನ ವಿದ್ಯಾರ್ಥಿಯನ್ನು ಇತರೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.
ಈ ಮಾತುಗಳಿಗೆ ತರಗತಿಯ ಮಕ್ಕಳು ಚಪ್ಪಾಳೆ ತಟ್ಟುತ್ತಾ ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದೆ. ಇದನ್ನೂ ಓದಿ ನಿರ್ದೇಶಕ ಪವನ್ ಒಡೆಯರ್ ಹೆಂಡತಿ ಮತ್ತು ಮಗುವಿನೊಂದಿಗೆ ಆಶಿಕಾ ರಂಗನಾಥ್! ಇಲ್ಲಿವೆ ಲೇಟೆಸ್ಟ್ ಫೋಟೋಸ್