WhatsApp Group Join Now
Telegram Group Join Now

Girls should not ring the bell: ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದೇವರ ಪೂಜೆ ಮಾಡುವಾಗ ಘಂಟೆ ಬಾರಿಸುತ್ತಾರೆ ಘಂಟೆ ಇಲ್ಲದೆ ದೇವರ ಪೂಜೆ ಸಂಪೂರ್ಣ ಆಗುವುದಿಲ್ಲ. ಹಾಗಾದರೆ ಈ ಘಂಟೆಯನ್ನು ಯಾವಾಗ ಬಾರಿಸಬೇಕು ಯಾವಾಗ ಬಾರಿಸಬಾರದು ಮಹಿಳೆಯರು ಘಂಟೆ ಬಾರಿಸಬಹುದೆ ಇತ್ಯಾದಿ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ ತಪ್ಪದೆ ಓದಿ.

ದೇವರ ಪೂಜೆ ಮಾಡುವಾಗ ಸಾಮಾನ್ಯವಾಗಿ ಎಲ್ಲರೂ ಘಂಟೆಯನ್ನು ತೂಗುತ್ತಾರೆ ಘಂಟಾನಾದವು ದೇವರ ಪೂಜೆಗೆ ಬೇಕೆಬೇಕು. ಘಂಟಾನಾದ ಇಲ್ಲದೆ ದೇವರ ಪೂಜೆ ಮಾಡಿದರೆ ಅಂತಹ ಮನೆಯಲ್ಲಿ ಕಿವುಡು, ಕುರುಡು ಮಕ್ಕಳು ಹುಟ್ಟುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳುತ್ತಾರೆ. ದೇವರ ಪೂಜೆ ಮಾಡುವಾಗ ಘಂಟೆಯನ್ನು ಬಾರಿಸದೆ ಇದ್ದರೆ ದೇವರ ಪೂಜೆ ಸಂಪೂರ್ಣ ಆಗುವುದಿಲ್ಲ. ಘಂಟಾನಾದ ಅಥವಾ ದೇವರ ಪೂಜೆ ಮಾಡುವಾಗ ಘಂಟೆಯನ್ನು ಯಾವಾಗ ಬಾರಿಸಬೇಕು ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ದೇವರ ಪೂಜೆ ಮಾಡುವಾಗ ದೇವರಿಗೆ ಧೂಪ ತೋರಿಸಿದಾಗ, ದೀಪ ಬೆಳಗಿದಾಗ, ನೈವೇದ್ಯ ಮಾಡುವಾಗ ಘಂಟಾನಾದ ಇರಬೇಕು.

ಘಂಟೆಯ ಎತ್ತರ 5 ಇಂಚು ಇರಬೇಕು ಅದಕ್ಕಿಂತ ಹೆಚ್ಚು ಎತ್ತರ ಇದ್ದರೂ ಒಳ್ಳೆಯದು ಆದರೆ 5 ಇಂಚಿಗಿಂತ ಕಡಿಮೆ ಇರಬಾರದು. ಘಂಟೆಯಲ್ಲಿ ಆಂಜನೇಯ ಸ್ವಾಮಿ ಅಥವಾ ನಂದೀಶ್ವರ ಮೂರ್ತಿ ಇರುವಂತಹ ಘಂಟೆಯನ್ನು ಬಳಸಿದರೆ ಮನೆಗೆ ಒಳ್ಳೆಯದಾಗುತ್ತದೆ. ಕೆಲವರು ಶಂಕು, ಚಕ್ರ ಇರುವ ಘಂಟೆಯನ್ನು ಬಳಸುತ್ತಾರೆ ಅದರಿಂದಲೂ ಒಳ್ಳೆಯದಾಗುತ್ತದೆ. ಮನೆಯಲ್ಲಿ ದೇವರ ಪೂಜೆ ಮಾಡುವಾಗ ಮನೆಯ ಮೂಲೆ ಮೂಲೆಯಲ್ಲೂ ಘಂಟೆಯನ್ನು ಬಾರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಬೆಳಗ್ಗೆ ಗಂಡು ಮಕ್ಕಳು ಸಂಜೆಯ ಸಮಯದಲ್ಲಿ ಹೆಣ್ಣುಮಕ್ಕಳು ದೀಪವನ್ನು ಹಚ್ಚಬೇಕು ಇದರಿಂದ ಮನೆಯಲ್ಲಿ ಧನಾಭಿವೃದ್ದಿ ಆಗುತ್ತದೆ ಎಂದು ಹೇಳುತ್ತಾರೆ. ಘಂಟೆಯ ಶಬ್ಧ ಓಮಕಾರಕ್ಕೆ ಸಮವಾಗಿದ್ದು ದೇವರ ಪೂಜೆ ಮಾಡುವಾಗ ಘಂಟೆ ಬಾರಿಸಿದರೆ ಓಮಕಾರವನ್ನು ಉಚ್ಚರಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ.

ಪುರಾಣಗಳ ಪ್ರಕಾರ ದೇವರ ಪೂಜೆ ಮಾಡುವಾಗ ಘಂಟೆ ಬಾರಿಸಿದಾಗ ವ್ಯಕ್ತಿಯ ಉಪಸ್ಥಿಯ ಬಗ್ಗೆ ದೇವರಿಗೆ ಖಚಿತಪಡಿಸುತ್ತದೆ ಅಲ್ಲದೆ ದೇವರನ್ನು ಎಚ್ಚರಗೊಳಿಸಲು ಘಂಟೆಯನ್ನು ಬಾರಿಸುತ್ತೇವೆ ಎನ್ನುವುದು ಕೂಡ ಕೆಲವರ ನಂಬಿಕೆಯಾಗಿದೆ. ಘಂಟಾನಾದವನ್ನು ಅಥವಾ ಘಂಟೆಯ ಶಬ್ಧವನ್ನು ಕೇಳಿಸಿದರೆ ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳು ಉದ್ಭವಿಸುವುದರ ಜೊತೆಗೆ ಘಂಟೆಯ ಸದ್ದು ಪರಿಸರವನ್ನು ಶುದ್ಧಗೊಳಿಸುತ್ತದೆ. ಘಂಟೆ ಬಾರಿಸಿದಾಗ ಘಂಟೆಯ ಶಬ್ಧದಿಂದ ಹೊರಬರುವ ಕಂಪನಗಳು ಆ ಪ್ರದೇಶದಲ್ಲಿರುವ ಹಾನಿಕಾರಕ ವೈರಸ್ ಗಳು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ದೇವರ ಪೂಜೆ ಮಾಡುವಾಗ ಘಂಟೆ ಬಾರಿಸುವುದರಿಂದ ಅದರ ಕಂಪನದಿಂದ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ದೇವರ ಪೂಜೆ ಮಾಡುವ ಸಮಯದಲ್ಲಿ ಕೆಲವು ಸಮಯದಲ್ಲಿ ಘಂಟೆ ಬಾರಿಸಬಾರದು ಯಾವ ಸಮಯವೆಂದರೆ ದೇವರ ಪೂಜಾ ಸಮಯದಲ್ಲಿ ದೇವರಿಗೆ ಅಲಂಕಾರ ಮಾಡುವಾಗ ಘಂಟೆಯನ್ನು ಬಾರಿಸಬಾರದು. ರಾತ್ರಿ ಸಮಯದಲ್ಲಿ ಯಾವ ಕಾರಣಕ್ಕೂ ಘಂಟೆ ಬಾರಿಸಬಾರದು ರಾತ್ರಿ ಎಂದರೆ ಸಕಲ ಜೀವಿಗಳಿಗೂ ವಿಶ್ರಾಂತಿ ಸಮಯವಾಗಿದೆ ರಾತ್ರಿ ಘಂಟೆ ಬಾರಿಸಿದರೆ ಪುಣ್ಯ ದೊರೆಯುವುದಿಲ್ಲ ರಾತ್ರಿ ವಿಶ್ರಾಂತಿ ಪಡೆಯುತ್ತಿರುವವರಿಗೆ, ಊಟ ಮಾಡುತ್ತಿರುವವರಿಗೆ ತೊಂದರೆ ಕೊಟ್ಟರೆ ದೋಷ ಉಂಟಾಗುತ್ತದೆ.

ಮನೆಯಲ್ಲಿ ಯಾರಾದರೂ ತೀರಿಹೋಗಿದ್ದರೆ ಸೂತಕದ ಮನೆಯಲ್ಲಿ ಘಂಟಾನಾದವನ್ನು ಮಾಡಬಾರದು ಏಕೆಂದರೆ ಸೂತಕ ಕಳೆಯುವವರೆಗೂ ಆತ್ಮ ಕುಟುಂಬಸ್ಥರ ಮನೆಯಲ್ಲಿ ಇರುತ್ತದೆ ಮನೆಯಲ್ಲಿ ಘಂಟಾನಾದ ಮಾಡಿದರೆ, ಕಲಹ ಶಬ್ಧ, ಜೋರು ಪಾತ್ರೆ ಶಬ್ಧ ಮಾಡುವುದರಿಂದ ಆತ್ಮಕ್ಕೆ ಬಹಳ ನೋವಾಗುತ್ತದೆ ಆತ್ಮ ಬಹಳ ಸೂಕ್ಷ್ಮವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಸುಮಾರು ವರ್ಷಗಳಿಂದ ಹಲವು ಮನೆಗಳಲ್ಲಿ ಮಹಿಳೆಯರು ಘಂಟೆಯನ್ನು ಬಾರಿಸುವುದಿಲ್ಲ ಹಿರಿಯರು ಈ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದಾರೆ.

ಸ್ತ್ರೀಯರ ಎಡಗೈ ನರ ಗರ್ಭಕೋಶಕ್ಕೆ ಸೇರಿರುತ್ತದೆ ಆದ್ದರಿಂದ ಎಡಗೈಯಿಂದ ಘಂಟೆಯನ್ನು ಬಾರಿಸುವುದರಿಂದ ತೊಂದರೆಯಾಗುತ್ತದೆ ಹೀಗಾಗಿ ಮಹಿಳೆಯರು ಘಂಟೆಯನ್ನು ಬಾರಿಸಬಾರದು. ಹೀಗೆ ಎಲ್ಲ ಪದ್ಧತಿಗಳಿಗೆ ಒಂದೊಂದು ವೈಜ್ಞಾನಿಕ ಕಾರಣವಿರುತ್ತದೆ. ಹೀಗೆ ದೇವರ ಪೂಜೆ ಮಾಡುವಾಗ ಘಂಟೆಯನ್ನು ಹೇಗೆಲ್ಲಾ ಬಳಸಬೇಕು ಎಂಬುದನ್ನು ತಿಳಿದಿದ್ದಾಯಿತು ಇನ್ನು ಮುಂದೆ ತಪ್ಪದೆ ಪಾಲಿಸೋಣ. ಈ ಉಪಯುಕ್ತ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: