ಸ್ನೇಹಿತರೆ, ಸ್ಯಾಂಡಲ್ ವುಡ್ನ ಪ್ರಣಯ ಪಕ್ಷಿಗಳೆಂದೇ ಕರೆಸಿಕೊಳ್ಳುತಿದ್ದಂತಹ ಹರ್ಷಿಕ ಪುಣಚ್ಚ (Harshika Poonacha) ಮತ್ತು ಭುವನ್ ಪೊನ್ನಣ್ಣ(Bhuvan ponnanna) ಹಲವಾರು ವರ್ಷಗಳಿಂದಲೂ ಪ್ರೀತಿಸುತ್ತಿದ್ದಂತಹ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಈ ವಿಚಾರವನ್ನು ಹರ್ಷಿಕ ಪುಣಚ್ಚ ಆಗಲಿ ಭುವನ್ನಾಗಲಿ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಳ್ಳದೆ ಹೋದರು ಒಟ್ಟಾಗಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತ ಅಭಿಮಾನಿಗಳ ಗಮನಸೆಳೆಯುತ್ತಿದ್ದರು.
ಹೀಗಿರುವಾಗ ಅಧಿಕೃತವಾಗಿ ಇಬ್ಬರು ಮದುವೆಯಾಗುವ ವಿಚಾರವನ್ನು ತಮ್ಮ-ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಲವ್ ಬರ್ಡ್ಸ್ಗಳು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹೌದು ಗೆಳೆಯರೇ ಇದೇ ತಿಂಗಳು ಅಂದರೆ ಆಗಸ್ಟ್ 24 ನೇ ತಾರೀಖಿನಂದು ಹರ್ಷಿಕ ಪುಣಚ್ಚ ಮತ್ತು ಭುವನ್ ಪೊನ್ನಣ್ಣ ಗುರು ಹಿರಿಯರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಕಲ ಸಿದ್ಧತೆಯನ್ನು ಜೋರಾಗಿಯೇ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಬಾಲಿಯಲ್ಲಿ ತಮ್ಮ ಸ್ನೇಹಿತರೊಂದಿಗೆ ಹರ್ಷಿಕ ಪುಣಚ್ಚ ಬ್ಯಾಚುಲರ್ ಪಾರ್ಟಿ ಆಚರಿಸಿಕೊಂಡರೆ ಇತ್ತ ಥೈಲ್ಯಾಂಡ್ ನಲ್ಲಿ ಭುವನ್ ಪೊನ್ನಣ್ಣ ತಮ್ಮ ಸ್ನೇಹಿತರೊಂದಿಗೆ ಬ್ಯಾಚುಲರ್ ಲೈಫ್ಗೆ ಗುಡ್ ಬೈ ಹೇಳಿದರು. ಸದ್ಯ ಮದುವೆಯ ಶಾಪಿಂಗ್ ಕೆಲಸಗಳನ್ನು ಮುಗಿಸಿ ತಮ್ಮ ಕುಟುಂಬಸ್ಥರು ಆತ್ಮೀಯರು ಸ್ನೇಹಿತರು ಹಾಗೂ ಸಿನಿಮಾ ವರ್ಗದ ಸೆಲೆಬ್ರಿಟಿ ಗಳಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡುವ ಮೂಲಕ ಪ್ರೀತಿಯಿಂದ ಎಲ್ಲರೂ ತಮ್ಮಿಬ್ಬರ ಮದುವೆಗೆ ಬಂದು ಶುಭ ಹಾರೈಸುವಂತೆ ಕೇಳಿಕೊಳ್ಳುತ್ತಿದ್ದಾರೆ.
ಹೌದು ಗೆಳೆಯರೇ ಕಳೆದೆರಡು ದಿನಗಳಿಂದ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚಲು ಮುಂದಾಗಿರುವ ಕ್ಯೂಟೆಸ್ಟ್ ಕಪಲ್ಸ್ಗಳು ದೊಡ್ಮನೆ ಮಕ್ಕಳಾದ ಶಿವ್ರಾಜ್ಕುಮಾರ್ (Shiva Rajkumar)ಹಾಗೂ ರಾಘವೇಂದ್ರ ರಾಜಕುಮಾರ್(Raghavendra Rajkumar) ಅವರ ಕುಟುಂಬಕ್ಕೆ ಪ್ರೀತಿಯಿಂದ ತಮ್ಮ ಮದುವೆಗೆ ಬರುವಂತೆ ಆಹ್ವಾನಿಸಿದ್ದಾರೆ. ಅದರಂತೆ ನಟ ಟಿ ಎಸ್ ನಾಗಾಭರಣ, ಅಮೂಲ್ಯ ಮತ್ತು ಜಗದೀಶ್ ದಂಪತಿ, ನೆನಪಿರಲಿ ಪ್ರೇಮ್ ಮತ್ತು ಪತ್ನಿ ಜ್ಯೋತಿ ಕುಟುಂಬ, ರಮೇಶ್ ಅರವಿಂದ್(Ramesh Arvind)
ಹಾಗೂ ಸ್ಯಾಂಡಲ್ ವುಡ್ ನ ಮತ್ತೋರ್ವ ಕ್ಯೂಟ್ ಕಪಲ್ಸ್ಗಳಾದ ದಿಗಂತ್ ಮತ್ತು ಅಯ್ಯಂದ್ರಿತಾ ರೈ ಮನೆಗೆ ತೆರಳಿ ಹರ್ಷಿಕ ಮತ್ತು ಭುವನ್ ಪ್ರೀತಿಯಿಂದ ಆಹ್ವಾನ ಪತ್ರಿಕೆ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ(social media) ಬಾರಿ ವೈರಲಾಗುತ್ತಿದ್ದು, ತಮ್ಮ ನೆಚ್ಚಿನ ಜೋಡಿ ಯ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಾರಿ ಕುತೂಹಲರಾಗಿದ್ದಾರೆ. ಇದನ್ನೂ ಓದಿ ಯಾರಿಗೂ ಗೊತ್ತಿಲ್ಲದಂತೆ, ಸೈಲೆಂಟಾಗಿ ಡೈರಿ ಬರೆದಿಟ್ಟ ಸ್ಪಂದನ, ಆ ಡೈರಿಯಲ್ಲಿ ಏನಿದೆ ಗೊತ್ತಾ? ನಿಜಕ್ಕೂ ಕಣ್ಣೀರು ಬರುತ್ತೆ ಕಣ್ರೀ