WhatsApp Group Join Now
Telegram Group Join Now

Spandana Vijay Dairy ಸ್ನೇಹಿತರೆ, ವಿಜಯ್ ರಾಘವೇಂದ್ರ (Vijay Raghavendra) ಅವರ ಧರ್ಮಪತ್ನಿ ಸ್ಪಂದನ(Spandana) ಅವರು ನಮ್ಮೆಲ್ಲರನ್ನಗಲಿ 12 ದಿನಗಳೆ ಕಳೆದರೂ ಅವರ ನೆನಪು ಇಂದಿಗೂ ಎಲ್ಲರನ್ನು ಬಾಧಿಸುತ್ತದೆ. ತಮ್ಮ ಮುದ್ದಾದ ನಗುವಿನ ಮೂಲಕ ಇತರರ ಮನಸ್ಸನ್ನು ಗೆಲ್ಲುತ್ತಿದ್ದಂತಹ ಪ್ರೀತಿಯ ಅಚ್ಚು ಇನ್ನಿಲ್ಲ ಎಂಬ ಸತ್ಯವನ್ನು ವಿಜಯ್ ರಾಘವೇಂದ್ರ (Vijay Raghavendra) ಅವರ ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದರ ನಡುವೆಯೂ ನಡೆಯಬೇಕಾದಂತಹ ಅಂತಿಮ ಕಾರ್ಯಗಳೆಲ್ಲವನ್ನು ಗಟ್ಟಿ ಮನಸ್ಸು ಮಾಡಿ ನೆರವೇರಿಸುತ್ತಿದ್ದು, 11ನೇ ದಿನದ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಮಲ್ಲೇಶ್ವರಂನಲ್ಲಿ ಇರುವಂತಹ ಸ್ಪಂದನವರ ತಂದೆ ಬಿ ಕೆ ಶಿವರಾಮ್ (BK Shivaram) ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸ್ಪಂದನ ಅವರ ಸೋದರ ಮಾವ ತನ್ನ ಎಲ್ಲಾ ಕನಸುಗಳನ್ನು ಯಾರಿಗೂ ಹೇಳದೆ ಡೈರಿಯ ಒಂದರಲ್ಲಿ ಬರೆದಿಟ್ಟು ಹೋಗಿದ್ದಾಳೆ ಎನ್ನುತ್ತಾ ಆಕೆಯನ್ನು ನೆನೆದು ಭಾವಕರಾಗಿದ್ದಾರೆ.

ಅಷ್ಟಕ್ಕೂ ಸ್ಪಂದನರವರಿಗೆ ಎಷ್ಟೆಲ್ಲಾ ಆಸೆ ಕನಸುಗಳಿತ್ತು? ಡೈರಿಯಲ್ಲಿ ಏನೇನೆಲ್ಲ ಬರೆದಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸ್ಪಂದನ ಅವರ ಪುಣ್ಯ ಸ್ಮರಣೆಯ ದಿನ ಮಾಧ್ಯಮ ಮಿತ್ರರು ಬಿಕೆ ಶಿವರಾಂ ಅವರ ಮನೆಯ ಆವರಣದಲ್ಲಿದ್ದರು.

ಆ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದಂತಹ ಸ್ಪಂದನವರ ಸೋದರ ಮಾವ (Brother in law) ಸ್ಪಂದನಗೆ ಡೈರಿ ಬರೆಯುವಂತಹ ಹವ್ಯಾಸ ಇತ್ತು ಅದನ್ನು ನಾನು ಹಲವರು ಬಾರಿ ಅಬ್ಸರ್ವ್ ಮಾಡಿದ್ದೇನೆ. ಆಕೆಯ ರೂಂನ್ನು ಸ್ವಚ್ಛಗೊಳಿಸುವಾಗ ಡೈರಿ (personal dairy) ಒಂದು ನಮಗೆ ಸಿಕ್ತು. ಅದರಲ್ಲಿ ಆಕೆ ನಾನು ನಿರ್ಮಾಪಕಿಯಾಗಬೇಕು ಹಾಗೂ ಹಲವು ತಂತ್ರಜ್ಞರಿಗೆ ನಾನು ಕೆಲಸ ಕೊಡಬೇಕು,

ಕಲಾವಿದರಿಗೆ ಆಸರೆ ಆಗಬೇಕೆಂದು ಆ ಡೈರಿಯಲ್ಲಿ ಬರೆದಿದ್ದಾಳೆ. ಇನ್ನು ಸಾಕಷ್ಟು ಪುಟಗಳಿವೆ ಆದರೆ ಮನೆಯಲ್ಲಿ ಎಲ್ಲರೂ ದುಃಖಿತರಾಗಿದ್ದರಿಂದ ನಾನು ಅದನ್ನು ಸಂಪೂರ್ಣವಾಗಿ ಓದಲು ಹೋಗಲಿಲ್ಲ. ಇನ್ನು ಕೆಲವು ದಿನಗಳಲ್ಲಿ ಆ ಡೈರಿಯಲ್ಲಿ ಏನಿತ್ತು? ಆಕೆಯ ಆಸೆ ಕನಸುಗಳು ಏನೇನಾಗಿದ್ದವು ಎಂಬುದನ್ನೆಲ್ಲ ನಾನು ನೋಡ ಬಯಸುತ್ತೇನೆ ಎನ್ನುತ್ತ ಭಾವಕರಾದರು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: