Vijaya rghavendra spandana Marriage Old Photos: ಸ್ನೇಹಿತರೆ, ಸ್ಯಾಂಡಲ್ ವುಡ್ನ ಕ್ಯೂಟೆಸ್ಟ್ ಕಪಲ್ಸ್ (cutest couples) ಎಂದೇ ಕರೆಯಲ್ಪಡುತ್ತಿದ್ದ ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಜೋಡಿಗಳ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ನಾಲ್ಕು ದಿನಗಳ ಹಿಂದಷ್ಟೇ ಸ್ನೇಹಿತರೊಂದಿಗೆ ಥೈಲ್ಯಾಂಡ್(Thailand) ಪ್ರವಾಸಕ್ಕೆ ಹೋದಂತಹ ಸ್ಪಂದನ (Spandhana) ಜೀವಂತವಾಗಿ ವಾಪಸ್ ಬರಲೇ ಇಲ್ಲ. ಹೃದಯಘಾತ ಸಮಸ್ಯೆಯಿಂದ ಮೊನ್ನೆ ಸಾಯಂಕಾಲ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾರೆ.
ಹೀಗೆ ವಯಸ್ಸಲ್ಲದ ವಯಸ್ಸಿನಲ್ಲಿ ಬಾರದ ಲೋಕಕ್ಕೆ ತೆರಳಿರುವ ತಮ್ಮ ಪ್ರೀತಿಯ ಮಡದಿಯ ಅಗಲಿಕೆಯ ನೋವನ್ನು ಸಹಿಸುವಂತಹ ಶಕ್ತಿಯನ್ನು ಭಗವಂತ ವಿಜಯ್ ರಾಘವೇಂದ್ರ ಮತ್ತು ಕುಟುಂಬಕ್ಕೆ ನೀಡಬೇಕೆಂದು ಪ್ರತಿಯೊಬ್ಬರು ಪ್ರಾರ್ಥಿಸುತ್ತಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾ ತುಂಬೆಲ್ಲ ಸ್ಪಂದನ ಹಾಗೂ ವಿಜಯ ರಾಘವೇಂದ್ರ ಅವರ ಮದುವೆ ಫೋಟೋ ಹರಿದಾಡುತ್ತಿದ್ದು, ಮುಂದಿನ ಆಗಸ್ಟ್ 26 ನೇ ತಾರೀಖಿನಂದು ಅಂದರೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ತಮ್ಮ 17ನೇ ವರ್ಷದ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸಿಕೊಳ್ಳುತ್ತಿದ್ದರು.
ಅಷ್ಟು ಬೇಗ ವಿಧಿ ತನ್ನ ಕ್ರೌರ್ಯತೆಯನ್ನು ಮೆರೆದು ಸ್ಪಂದನ ಹಾಗೂ ವಿಜಯ್ ರಾಘವೇಂದ್ರ ಅವರನ್ನು ದೂರ ಮಾಡಿಬಿಟ್ಟಿದೆ. 2004ರಲ್ಲಿ ವಿಜಯ್ ರಾಘವೇಂದ್ರ ಮಲ್ಲೇಶ್ವರಂನ ಕಾಫಿ ಡೇ ಒಂದರಲ್ಲಿ ಸ್ಪಂದನ ಅವರನ್ನು ನೋಡುತ್ತಾರೆ. ಮೊದಲ ನೋಟದಲ್ಲಿಯೇ ವಿಜಯ್ ಮನಸ್ಸಿನಲ್ಲಿ ಪ್ರೇಮಾಂಕರವಾಗುತ್ತದೆ.
ಆನಂತರ 2007ರಲ್ಲಿ ಮನೆಯ ಖಾಸಗಿ ಫಂಕ್ಷನ್ ಒಂದಕ್ಕೆ ಸ್ಪಂದನವರು ಬಂದಿರುತ್ತಾರೆ. ಅದೇ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿಯೂ ಮದುವೆ ಮಾಡಲು ಹುಡುಗಿಯನ್ನು ನೋಡುತ್ತಿದ್ದ ಕಾರಣ ವಿಜಯ ರಾಘವೇಂದ್ರ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾದರೆ ಆಕೆಯನ್ನೇ ಎಂದು ಹೇಳಿ ಮನೆಯವರೆಲ್ಲರ ಒಪ್ಪಿಗೆ ಪಡೆದ ನಂತರ ಸ್ಪಂದನ ಅವರ ಬಳಿ ಹೋಗಿ ತಮ್ಮ ಪ್ರೇಮ ನಿವೇದನೆಯನ್ನು ಮಾಡಿದರು.
ಈ ವಿಚಾರ ಸ್ಪಂದನ ತಮ್ಮ ತಂದೆ ಶಿವರಾಂ(Shivaram) ಅವರಿಗೆ ತಿಳಿಸಿದಾಗ ಸಿನಿಮಾ ರಂಗದಲ್ಲಿ ಇರುವಂತಹ ವ್ಯಕ್ತಿಗಳಿಗೆ ಮಗಳನ್ನು ಕೊಡುವುದು ಅಷ್ಟು ಸರಿಯಲ್ಲ ಎಂದು ಸ್ಪಂದನ(Spandhana) ಮನೆಯವರು ಹಿಂದೇಟು ಹಾಕುತ್ತಾರೆ. ಆದರೆ ವಿಜಯ್ ರಾಘವೇಂದ್ರ (Vijay Raghavendra) ಅದೆಲ್ಲದಕ್ಕೂ ತದ್ವಿತವಾಗಿದ್ದ ಕಾರಣ ಆಗಸ್ಟ್ 26 ನೇ ತಾರೀಕು 2007 ರಂದು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರು. ಇದನ್ನೂ ಓದಿ ದೇವರಿಗೆ ತುಂಬಾ ಒಳ್ಳೆಯವರೇ ಇಷ್ಟ ಆಗ್ತಾರೆ ಅನ್ಸುತ್ತೆ! ಛೇ ಈ ಕಲಾವಿದರು ಅತಿಯಾಗಿ ಒಳ್ಳೆಯವರಾಗಿದ್ದೆ ತಪ್ಪಾಯ್ತಾ..