Amrutha Prem: ಸ್ನೇಹಿತರೆ, ನೆನಪಿರಲಿ(Nenapirali) ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಂತಹ ನಟ ಪ್ರೇಮ್ (Prem) ಹಲವಾರು ವರ್ಷಗಳಿಂದ ನಮ್ಮ ಸ್ಯಾಂಡಲ್ವುಡ್ನಲ್ಲಿ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಸಕ್ರಿಯರಾಗಿ ಕನ್ನಡ ಸಿನಿ ಪ್ರೇಕ್ಷಕರಿಗೆ ವಿಶೇಷವಾದ ಮನೋರಂಜನ ನೀಡುತ್ತಾ, ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.
ಸದ್ಯ ತಮ್ಮ ಮಗಳಾದ ಅಮೃತ ಪ್ರೇಮ್ (Amrutha Prem) ಅವರನ್ನು ಸಿನಿಮಾ ರಂಗಕ್ಕೆ ತರುವ ಪ್ರಯತ್ನದಲ್ಲಿ ಇರುವಂತಹ ಪ್ರೇಮ್ ಅವರು ಉಮೇಶ್ ಕೆ ಕೃಪ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಸಿನಿಮಾದಲ್ಲಿ ನಟ ನಾಗಭೂಷಣ್ ಅವರಿಗೆ ಜೋಡಿಯಾಗಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದರಂತೆ. ಹೀಗೆ ಸಿನಿಮಾದ ಹೆಸರು ಅನೌನ್ಸ್ ಆಗುತ್ತಾ ಇದ್ದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಇರುವಂತಹ ಅಮೃತ ಪ್ರೇಮ್(Amrutha Prem) ಆಗಾಗ ತಮ್ಮ ಕ್ಯುಟೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುತ್ತಲ್ಲಿರುತ್ತಾರೆ.
ಹೌದು ಸ್ನೇಹಿತರೆ ತಂದೆ ಪ್ರೇಮ್ ಹಾಗೂ ತಾಯಿ ಜ್ಯೋತಿ ಅವರಂತೆ ಬಹಳ ಮುದ್ದಾಗಿರುವ ಅಮೃತ ಅವರ ವಿಡಿಯೋ ಒಂದನ್ನು ನೋಡಿದ ಉಮೇಶ್ ಕೆ ಕೃಪಾ ಅವರು ಸಿನಿಮಾದಲ್ಲಿ ಅಭಿನಯಿಸುವಿರಾ ಎಂದು ಕೇಳುತ್ತಾರೆ. ಟಗರು ಪಲ್ಯ ಸಿನಿಮಾಗೆ ಇನ್ನೂ ಸೆಂಟ್ ಮುಖ ಒಂದರ ಹುಡುಕಾಟದಲ್ಲಿ ಚಿತ್ರತಂಡ ಇರುತ್ತಾರೆ, ಇದೇ ಸಂದರ್ಭದಲ್ಲಿ ವೈರಲ್ ಆದ ಅಮೃತರವರ ವಿಡಿಯೋ ಒಂದನ್ನು ಕಂಡು, ನಟ ಪ್ರೇಮ್ ಅವರ ಮನೆಗೆ ತೆರಳಿ ಸಿನಿಮಾದ ಕಥೆಯನ್ನು ಕೇಳಿ ನಿಮ್ಮ ಮಗಳನ್ನು ಈ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿ ಎಂಬ ಆಫರ್ ನೀಡುತ್ತಾರೆ.
ಹೀಗೆ ಚಿತ್ರಕಥೆ ಕೇಳಿ ಬಹಳ ಇಷ್ಟ ಪಟ್ಟು ಪ್ರೇಮ್ ಹಾಗೂ ಜ್ಯೋತಿ ಅವರು ಒಪ್ಪಿಗೆ ಸೂಚಿಸಿದ ನಂತರ ಅಮೃತ ಅತಿ ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇನ್ನೂ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಲ್ಲಿಯೂ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುವಂತಹ ಅಮೃತ ಅವರು ಆಗಾಗ ಕ್ಯೂಟ್ ಫೋಟೋಶೂಟ್ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.
.
ಸದ್ಯ ಪಿಂಕ್ ಟೀ ಶರ್ಟ್ ಧರಿಸಿ ಬಿಸಿಲಿನಲ್ಲಿ ಫೋಟೋಗೆ ಫೋಸ್ ನೀಡಿದ್ದು ಲವ್ ಅಂಡ್ ಲೈಟ್ (LOVE & LIGHT) ಎಂಬ ಕ್ಯಾಪ್ಶನ್ ಬರೆದು ಫೋಟೋ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, 2೦೦೦ಕ್ಕೂ ಅಧಿಕ ಕಾಮೆಂಟ್ ಹಾಗೂ ಲೈಕ್ಗಳ ಸುರಿಮಳೆಯನ್ನೇ ನೆಟ್ಟಿಗರು ಹರಿಸುತ್ತಿದ್ದಾರೆ.