WhatsApp Group Join Now
Telegram Group Join Now

Kannada Actor bhavya: ಸ್ನೇಹಿತರೆ, ಆಗಿನ ದಶಕದಲ್ಲಿ ಕನ್ನಡ ಸಿನಿಮಾ ರಂಗವನ್ನು ಆಳಿದ ನಟಿಯರ ಪೈಕಿ ಭವ್ಯವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಡಾಕ್ಟರ್ ವಿಷ್ಣುವರ್ಧನ್(Vishnuvardhan) ಅವರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಪೀಕ್ನಲ್ಲಿ ಇದ್ದಂತಹ ಭವ್ಯ ಅವರು ಕನ್ನಡ ಸಿನಿಮಾ ರಂಗಕ್ಕೆ ಯಶಸ್ವಿ ಸಿನಿಮಾಗಳ ಮೂಲಕ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.

ನನ್ನ ಪ್ರೀತಿಯ ಹುಡುಗಿ, ಎಸ್ಪಿ ಸಾಂಗ್ಲಿಯಾನ, ನೀ ಬರೆದ ಕಾದಂಬರಿ, ಹೃದಯ ಹಾಡಿತು, ಲಯನ್ ಜಗಪತಿರಾವ್, ಮತ್ತೆ ಹಾಡಿತು ಕೋಗಿಲೆ, ಕೃಷ್ಣ ನೀ ಬೇಗನೆ ಬಾರೋ, ನಿಲುಕದ ನಕ್ಷತ್ರ, ಬಡ್ಡಿ ಬಂಗಾರಮ್ಮ, ಹುಲಿ ಹೆಬ್ಬುಲಿ, ಒಡೆದ ಹಾಲು, ತಾಯಿಯ ಆಸೆ, ಸಂಗಮ ಮತ್ತು ಅವಳೇ ನನ್ನ ಹೆಂಡತಿ ಸೇರಿದಂತೆ 40 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ನಟಿ ಭವ್ಯ ಅವರು ತಮಿಳು ಹಾಗೂ ತೆಲುಗಿನಲ್ಲೂ ತಮ್ಮ ಅಮೋಘ ಅಭಿನಯದ ಮೂಲಕ ಕಮಲ್ ಮಾಡಿದರು.

ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ, ಉತ್ತುಂಗದ ಶೇಖರದಲ್ಲಿರುವಾಗಲೇ ಮುಂಬೈ ಮೂಲದ ಮುಕೇಶ್ ಪಾಟೀಲ್ ಎಂಬ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭವ್ಯ ಕಾಲಕ್ರಮೇಣ ಸಿನಿಮಾರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿ ಸಿನಿ ಬದುಕಿನಿಂದ ದೂರ ಉಳಿದುಬಿಡುತ್ತಾರೆ.

ಇತರ ನಟಿಯಂತೆ ತಮ್ಮ ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಮನಸ್ತಾಪಗಳನ್ನು ಮಾಡಿಕೊಳ್ಳದೆ ಹಲವು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಾ ಬಂದಿರುವ ಮುಕೇಶ್(Mukesh) ಹಾಗೂ ಭವ್ಯ(bhavya) ದಂಪತಿಗಳಿಗೆ ಮೂವರು ಮುದ್ದಾದ ಹೆಣ್ಣು ಮಗಳಿದ್ದು, ಅವರೆಲ್ಲರೂ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಾಯಿಯಂತೆಯೇ ಸಿನಿಮಾರಂಗದಲ್ಲಿ ಮಿಂಚಲಿದ್ದಾರಾ?

ಎಂಬುದನ್ನು ಕಾದು ನೋಡಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ(Social Media) ಅಭಿಮಾನಿಗಳೊಡನೆ ಸಕ್ಕತ್ ಆಕ್ಟಿವ್ ಇರುವ ಭವ್ಯ (Bhavya) ಆಗಾಗ ತಮ್ಮ ಫ್ಯಾಮಿಲಿ ಫೋಟೋ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಇದನ್ನೂ ಓದಿ Actor Amulya: ಚೆಲುವಿನ ಚಿತ್ತಾರ ಅಮೂಲ್ಯ ಅವರ ಫ್ಯಾಮಿಲಿ ಫೋಟೋ!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: