WhatsApp Group Join Now
Telegram Group Join Now

Actor Yogesh ಕನ್ನಡದ ಸಾರ್ವಕಾಲಿಕ ಹಿಟ್ ಸಿನಿಮಾ ದುನಿಯಾದ ಮೂಲಕ ಕನ್ನಡಿಗರಿಗೆ ಲೂಸ್ ಮಾದ ಎಂದೇ ಪರಿಚಯಗೊಂಡಂತಹ ಯೋಗೇಶ್(Yogesh) ಇಂದು ಯಶಸ್ವಿ ಸಿನಿಮಾಗಳ ಮೂಲಕ ಅಷ್ಟೇ ಬೇಡಿಕೆಯನ್ನು ಹೊಂದಿರುವ ನಟರಾಗಿದ್ದಾರೆ. ಹೌದು ಗೆಳೆಯರೇ ನಂದ ಲವ್ಸ್ ನಂದಿತಾ ಎಂಬ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ 2008 ರಲ್ಲಿ ಸ್ಯಾಂಡಲ್ವುಡ್(Sandalwood) ನಲ್ಲಿ ಗುರುತಿಸಿಕೊಂಡ ಇವರು ಅಂಬಾರಿ(Ambari) ಸಿನಿಮಾದಲ್ಲಿ ಅಭಿನಯಿಸುವ ಜೊತೆಗೆ ನಿರ್ದೇಶನವನ್ನು ಮಾಡಿ ಯಶಸ್ವಿಯಾದರು.

ಇದಾದ ಬಳಿಕ ನಟ ಲೂಸ್ ಮಾದ ಯೋಗಿಯವರ ಅಭಿನಯದಲ್ಲಿ ಮೂಡಿಬಂದ ಹುಡುಗರು, ಸಿದ್ಲಿಂಗು, ಅಲೆಮಾರಿ, ಯಾರೇ ಕೂಗಾಡಲಿ, ಯೋಗಿ, ರಾವಣ, ಕಿರುಗೂರಿನ ಗಯ್ಯಾಳಿಗಳು, ಜಾನ್ ಜಾನಿ ಜನಾರ್ಧನ್, ಮಾಸ್ ಲೀಡರ್, ಕೃಷ್ಣನ್ ಲವ್ ಸ್ಟೋರಿ, ದೇವದಾಸ್, ಕಾಲಾಯ ತಸ್ಮೈ ನಮಃ, ಜಿಂಕೆಮರಿ, ಲಂಕೆ ಹಾಗೂ ಹೆಡ್ ಪುಶ್ ಸೇರಿದಂತೆ ಯಶಸ್ವಿ ಸಿನಿಮಾಗಳ ಮೂಲಕ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ.

ಈಗಾಗಲೇ ಲಂಕಾಸುರ, ಪರಿಮಳ ಲಾಡ್ಜ್, ಆಡಿದ್ದೆ ಆಟ ಎಂಬ ಮೂರು ಮೂರು ಸಿನಿಮಾಗಳನ್ನು ಒಪ್ಪಿಕೊಂಡು ಚಿತ್ರೀಕರಣಗಳ ಕೆಲಸದಲ್ಲಿ ಇರುವಂತಹ ನಟ ಲೂಸ್ ಮಾದ ಯೋಗಿಯವರು ಜುಲೈ 6ನೇ ತಾರೀಕು 1990 ರಂದು ಜನಿಸಿದರು. ಅಂದಹಾಗೆ ಇದೇ ತಿಂಗಳು ಕೆಲ ದಿನಗಳ ಹಿಂದೆ ತಮ್ಮ 33ನೇ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ತಮ್ಮ ಹೆಂಡತಿ ಹಾಗೂ ಸ್ನೇಹಿತರೊಂದಿಗೆ ಖಾಸಗಿ ರೆಸಾರ್ಟ್ ಒಂದರಲ್ಲಿ ಆಚರಿಸಿಕೊಂಡ ಯೋಗಿ

ಅವರ ಪತ್ನಿ ಸಾಹಿತಿ ಯೋಗೇಶ್ ಆ ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿ ಫೋಟೋ ಡಂಪ್ ಪಾರ್ಟ 1 ಮತ್ತು ಪಾರ್ಟ2 ಹಾಟ್ ಫ್ಯಾಮಿಲಿ ಬರೆದು ತಮ್ಮ (instagram) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳೆಲ್ಲವೂ ಸದ್ಯ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ.

ಹೌದು ಗೆಳೆಯರೇ ಹಲವಾರು ವರ್ಷಗಳಿಂದ ಯಾವುದೇ ಜಗಳ ಕಲಹ ಮನಸ್ತಾಪಗಳಿಲ್ಲದೆ ಸಂತೋಷದಿಂದ ವೈಯಕ್ತಿಕ ಬದುಕನ್ನು ನಡೆಸುತ್ತಾ ಬಂದಿರುವ ಲೂಸ್ ಮಾದ ಯೋಗಿYogi) ಮತ್ತು ಸಾಹಿತಿ(Sahithi) ಇಂದಿನ ಅದೆಷ್ಟೋ ಯುವ ಪ್ರೇಮಿಗಳಿಗೆ ಆದರ್ಶವಾಗಿದ್ದರೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ Amrutha Iyengar: ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಅಮೃತ್ ಅಯ್ಯಂಗಾರ್

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: