WhatsApp Group Join Now
Telegram Group Join Now

Vijaya Ragavendra: ಚಂದನವನದ ಚಿನ್ನಾರಿ ಮುತ್ತ ಎಂದೆ ಜನಪ್ರಿಯತೆ ಪಡೆದಿರುವ ನಟ ವಿಜಯ್ ರಾಘವೇಂದ್ರ 1993ರಲ್ಲಿ ತೆರೆಕಂಡ ಚಿನ್ನಾರಿ ಮುತ್ತ ಎಂಬ ಸಿನಿಮಾದಲ್ಲಿ ಅಭಿನಯಿಸಿ ಬಾಲ ನಟನಾಗಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೆರಿಸಿಕೊಂಡಂತಹ ಕಲಾವಿದ. ತಂದೆ ಎಸ್ ಎ ಚಿನ್ನಸ್ವಾಮಿಯವರು ನಿರ್ಮಾಪಕನಾಗಿ ಸಕ್ರಿಯರಾಗಿದ್ದ ಕಾರಣ ವಿಜಯ ರಾಘವೇಂದ್ರ (vijay raghavendra) ಅವರಿಗೆ ಅಷ್ಟೇನೂ ಕಷ್ಟಕರವಾಗಿರಲಿಲ್ಲ.

ಆದರೂ ಕೂಡ ತಮ್ಮ ಸ್ವಂತ ಪ್ರತಿಭೆಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ವಿಜಯ ರಾಘವೇಂದ್ರ (vijay raghavendra) ಅವರು ಚಿತ್ರ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ಆನಂತರ ನಿನಗಾಗಿ, ಖುಷಿ, ರಿಷಿ, ಕಲ್ಲರಳಿ ಹೂವಾಗಿ, ಸೇವಂತಿ ಸೇವಂತಿ, ನಾನು ನೀನು ಜೋಡಿ, ಮಿಂಚಿನ ಓಟ, ಬೆಳದಿಂಗಳಾಗಿ ಬಾ, ಗಣೇಶ ಮತ್ತೆ ಬಂದ, ಮಸ್ತ್ ಮಜಾ ಮಾಡಿ, ಗೋಲ್ ಮಾಲ್, ನಮ್ ಯಜಮಾನ್ರು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಾಲ ನಟನಾಗಿ ಹಾಗೂ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ಕೇವಲ ಬೆಳ್ಳಿ ತೆರೆಯಲ್ಲಿ ಮಾತ್ರವಲ್ಲದೆ ಕಿರುತೆರೆ (television) ಲೋಕದಲ್ಲಿಯೂ ತಮ್ಮ ಅದ್ಭುತ ಮಾತುಗಾರಿಕೆಯ ಶೈಲಿ ಹಾಗೂ ವರ್ಚಸ್ಸಿನಿಂದ ಸಾಕಷ್ಟು ರಿಯಾಲಿಟಿ ಶೋಗಳ ತೀರ್ಪುಗಾರನಾಗಿಯು ಕಾಣಿಸಿಕೊಳ್ಳುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಚಿನ್ನಾರಿ ಮುತ್ತ(chinnari mutts) 26 ನೇ ತಾರೀಕು ಆಗಸ್ಟ್ 2007 ರಂದು ಸಹಾಯಕ ಪೊಲೀಸ್ ಆಯುಕ್ತರಾದ ಬಿಕೆ ಶಿವರಾಮ್(BK shivaram) ಅವರ ಮಗಳು ಸ್ಪಂದನ ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸ್ಪಂದನ ಅವರು ಮೂಲತಃ ತುಳು ಹುಡುಗಿಯಾಗಿದ್ದು, ವಿಜಯ್ ರಾಘವೇಂದ್ರ (vijay raghavendra) ಅವರ ವ್ಯಕ್ತಿತ್ವ ಹಾಗೂ ಗುಣಗಳಿಗೆ ಮಾರುಹೋಗಿ ಪ್ರೀತಿಯ ಬಲೆಗೆ ಬೀಳುತ್ತಾರೆ. ಹೀಗೆ ಮನೆಯವರೆಲ್ಲರ ಒಪ್ಪಿಗೆ ಪಡೆದು ವಿಜಯ ರಾಘವೇಂದ್ರ (vijay raghavendra) ಹಾಗೂ ಸ್ಪಂದನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಈ ದಂಪತಿಗಳಿಗೆ ಶೌರ್ಯ ಎಂಬ ಒಬ್ಬ ಮುದ್ದಾದ ಮಗನಿದ್ದು, ಆಗಾಗ ತಮ್ಮ ಸಾಕುಟುಂಬದ ಫೋಟೋಗಳನ್ನು ಶೇರ್ ಮಾಡುತ್ತಲಿರುತ್ತಾರೆ. 20 ಲಕ್ಷದ ಬಿಎಂಡಬ್ಲ್ಯೂ ಬೈಕ್ ಮೇಲೆ ಸವಾರಿ ಹೊರಟ ಟಗರು ಪುಟ್ಟಿ ಮನ್ವಿತ!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: