WhatsApp Group Join Now
Telegram Group Join Now

Vaishnavi Gowda : ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದಸ್ಟೆ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಎಂಬ ಸೀರಿಯಲ್ ಮೂಲಕ ಸನ್ನಿಧಿಯೆಂದೇ ಜನಪ್ರಿಯತೆ ಪಡೆದಿದ್ದ ನಟಿ ವೈಷ್ಣವಿ ಗೌಡ ಇದೀಗ ಮತ್ತೆ ಸೀತಾರಾಮ ಎಂಬ ಸೀರಿಯಲ್ ಮೂಲಕ ಕಂಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ. ಹೌದು ಸ್ನೇಹಿತರೆ, ಇಷ್ಟು ದಿನಗಳ ಕಾಲ ಸನ್ನಿಧಿಯೆಂದೇ ಜನಪ್ರಿಯತೆ ಪಡೆದಿದ್ದಂತಹ ವೈಷ್ಣವಿ ಅವರು ದೇವಿ ಎಂಬ ಕಿರುತೆರೆಯ ಸೀರಿಯಲ್ನಲ್ಲಿಯೂ ಅಭಿನಯಿಸಿದರು.‌

ಅದಕ್ಕೂ ಮುನ್ನ ಪುನರ್ ವಿವಾಹ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಒಂದನ್ನು ನಿಭಾಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನಮನ್ನಣೆ ಪಡೆದಿದ್ದ ಈ ನಟಿ ತಮ್ಮ ಮುಗ್ಧ ಹಾಗೂ ಮನೋಜ್ಞ ಅಭಿನಯದ ಮೂಲಕ ಕನ್ನಡಿಗರ ಮನೆಮಗಳಾಗಿ ಹೋಗಿದ್ದರು. ಹೀಗೆ ಮೌಂಟ್ ಕಾವರ್ಮೆಲ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ವೈಷ್ಣವಿ ಗೌಡ ಅವರನ್ನು ಸಾಕಷ್ಟು ಸೀರಿಯಲ್ (Serial) ಗಳ ಅವಕಾಶ ಹರಸಿ ಬಂದವು.

ಈ ಕಾರಣದಿಂದ ತಮ್ಮ ಪದವಿಯನ್ನು ಅರ್ಧಕ್ಕೆ ಬಿಟ್ಟು ನಟನೆಯತ್ತ ಗಮನ ಹರಿಸಿದ ವೈಷ್ಣವಿ (Vaishnavi), ಕೇವಲ ಅಭಿನಯದಲ್ಲಿ ಮಾತ್ರವಲ್ಲದೆ ಭರತನಾಟ್ಯಂ, ಕುಚುಪುಡಿದಂತಹ ನೃತ್ಯದಲ್ಲಿಯೂ ಎತ್ತಿದ ಕೈ. ಹೌದು ಸ್ನೇಹಿತರೆ ಬಾಲ್ಯದಿಂದಲೂ ನೃತ್ಯ ಅಭ್ಯಾಸ ಮಾಡುತ್ತ ಬಂದಿರುವ ವೈಷ್ಣವಿ ಗೌಡ(Vaishnavi Gowda) ಎಂತಹ ಮ್ಯೂಸಿಕ್ ಹಾಕಿದರು ತಾಳಕ್ಕೆ ತಕ್ಕ ಹಾಗೆ ಸೊಂಟ ಬೆಳಕಿಸುವುದರಲ್ಲಿ ಎಕ್ಸ್ಪರ್ಟ್.

Vaishnavi Gowda Dance Video

ಇದಲ್ಲದೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕುಣಿಯೋಣ ಬಾರಾದಂತಹ ಡಾನ್ಸ್ ರಿಯಾಲಿಟಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಿ ಬಹುದೊಡ್ಡ ಹೆಸರನ್ನು ಸಂಪಾದಿಸಿದರು. ಆನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 8(BBK8) ಸ್ಪರ್ಧಿಯಾಗಿ ಪ್ರವೇಶಿಸಿ ಯೋಗ ಟೀಚರ್ ಆಗಿ ಹೊರಬಂದರು.

ಹೀಗೆ ಎಲ್ಲಾ ಚಟುವಟಿಕೆಗಳಲ್ಲಿ, ಎಲ್ಲ ಟಿವಿ ಪ್ರೋಗ್ರಾಮ್ಗಳಲ್ಲಿಯೂ ಕಾಣಿಸಿಕೊಂಡಿದ್ದಂತಹ ವೈಷ್ಣವಿ ಗೌಡ(Vaishnavi Gowda) ಗಿರಗಿಟ್ಲೆ ಎಂಬ ಸಿನಿಮಾದ ಮೂಲಕ ಅದಾಗಲೇ ಭರ್ಜರಿಯಾಗಿ ಬೆಳ್ಳಿತೆರೆಗು ಎಂಟ್ರಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಹೊಸ ಹೊಸ ಸಿನಿಮಾಗಳ ಅವಕಾಶ ಹರಸಿ ಬರಲಿದ್ಯಾ? ಎಂಬುದನ್ನು ಕಾದುಬೇಕಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಆಕ್ಟಿವ್ ಆಗಿರುವಂತಹ ವೈಷ್ಣವಿ ಗೌಡ ಆಗಾಗ ತಮ್ಮ ಹಾರ್ಟ್ ಫೋಟೋಶೂಟ್ ಹಾಗೂ ಅದ್ಭುತ ರೀಲ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಸದ್ಯ ವಾತಾವರಣಕ್ಕೆ ತಕ್ಕ ಹಾಗೆ ಸುಂದರವಾದ ಪ್ರದೇಶದಲ್ಲಿ ನಿಂತು ಹಿಂದಿಯ ನೇಚರ್(nature) ಹಾಡೊಂದಕ್ಕೆ ಕಪ್ಪು ಬಣ್ಣದ ಗಾಗ್ರ ಚೋಲಿಯನ್ನು ಧರಿಸಿ ಸೊಂಟ ಬೆಳಕಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ವಾತಾವರಣ ಮತ್ತು ಈ ಹಾಡು(weather & this song) ಎಂದು ಕ್ಯಾಪ್ಶನ್ ಬರೆದು ವಿಡಿಯೋ ಹಂಚಿಕೊಳ್ಳುವ ಮೂಲಕ ನಟಿ ವೈಷ್ಣವಿ ಗೌಡ ಮಾನ್ಸೂನ್ ಸೀಸನ್(mansion season) ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: