Priya j achar : ಸಿದ್ದು ಮೂಲಿಮನಿ ಮತ್ತು ಪ್ರಿಯಾ ಆಚಾರ್ ವಿಶೇಷ ಫೋಟೋಸ್!ಸ್ನೇಹಿತರೆ ಅತಿ ಚಿಕ್ಕ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕನ್ನಡ ಸಿನಿಮಾ ರಂಗದ ಯಂಗ್ ಕಪಲ್ಸ್(young couples) ಎಂದೇ ಪ್ರಖ್ಯಾತಿ ಪಡೆದಿರುವ ಪ್ರಿಯ ಆಚರ್ ಮತ್ತು ಸಿದ್ದು ಮೂಲಿಮನಿ ಮದುವೆಯಾದ ನಂತರವೂ ತಮ್ಮ ವೃತ್ತಿ ಬದುಕಿನತ್ತ ಗಮನಹರಿಸುತ್ತ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಹೌದು ಗೆಳೆಯರೇ ಗಟ್ಟಿಮೇಳ (gattimela) ಸೀರಿಯಲ್ನಲ್ಲಿ ಮೂರನೇ ತಂಗಿಯಾಗಿ ಅಭಿನಯಿಸುತ್ತಿದ್ದಂತಹ ಪ್ರಿಯ ಆಚಾರ್ (Priya Achar) ಹಾಗೂ ಪಾರು(Paru) ಸೀರಿಯಲ್ ನಲ್ಲಿ ಆದಿತ್ಯನ ತಮ್ಮನಾಗಿ ಅಭಿನಯಿಸುತ್ತಿದ್ದ ಸಿದ್ದು ಮೂಲಿಮನಿ(Siddu Moolimani). ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದರು.
ಕಾಲಕ್ರಮೇಣ ಇವರ ಸ್ನೇಹ ಪ್ರೇಮಾಂಕುರವಾಗಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ಫೆಬ್ರವರಿ 13ನೇ ತಾರೀಕು 2023 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೇ ಕಿರುತೆರೆಯ ಯಂಗ್ ಕಪಲ್ಸ್ ಎಂದೆ ಗುರುತಿಸಿಕೊಂಡಿರುವ ಪ್ರಿಯಾ(Prius) ಹಾಗೂ ಸಿದ್ದು(Siddu) ಎರಡು ವರ್ಷಗಳ ಕಾಲ ಪ್ರೀತಿಸಿ ತಮ್ಮ ಪ್ರೀತಿಯನ್ನು ನನಸಾಗಿಸಿಕೊಳ್ಳುವ ಉದ್ದೇಶದಿಂದ ಮನೆಯವರಿಗೆ ಮಾಹಿತಿ ತಿಳಿಸಿ.
ಗುರು ಹಿರಿಯರ ಒಪ್ಪಿಗೆಯನ್ನು ಪಡೆದು ನವಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ(Engagement) ಮಾಡಿಕೊಂಡಿದ್ದರು, ಅದರಂತೆ ಫೆಬ್ರವರಿಯಲ್ಲಿ ಬೆಂಗಳೂರಿನ ಐಷಾರಾಮಿ ರೆಸಾರ್ಟ್(Resort) ಒಂದರಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಕಿರುತೆರೆ ಮತ್ತು ಬೆಳ್ಳಿ ತೆರೆಯ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆ ಫೋಟೋಗಳೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ಲಾಗಿದ್ದವು, ಅದರಲ್ಲಿಯೂ ಪ್ರಿಯಾ ಆಚಾರ್ (Priya Achar) ಅವರ ಔಟ್ ಫಿಟ್ ಅದೆಷ್ಟೋ ಹೆಣ್ಣು ಮಕ್ಕಳಿಗೆ ಹೊಟ್ಟೆಕಿಚ್ಚು ತರುವಂತಿತ್ತು.
ಹೌದು ಗೆಳೆಯರೇ ಬಹಳ ಅದ್ಭುತವಾದ ಡಿಸೈನ್ ಉಳ್ಳ ಒಡವೆ ಆಭರಣಗಳನ್ನು ಪ್ರಿಯ ಆಚಾರ್ (Priya Achar) ತಮ್ಮ ಮದುವೆ ಸಂದರ್ಭದಲ್ಲಿ ಧರಿಸಿದ್ದರು, ಸಿದ್ದು ಮೂಲಿಮನಿ(Siddu Moolimani) ಕೂಡ ಕ್ಲಾಸಿಕ್ ಲುಕ್ನಲ್ಲಿ ನೆಟ್ಟಿಗರ ಹೃದಯ ಗೆದ್ದಿದ್ದರು. ಇದೀಗ ಈ ಕ್ಯೂಟ್ ಕಪಲ್ಸ್ ಮದುವೆಯಾದ ನಂತರವೂ ಒಟ್ಟಾಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತ ಆ ಸುಂದರ ಕ್ಷಣಗಳನ್ನು ನೆನಪಿನ ಬುಟ್ಟಿಗೆ ಸೇರಿಸುವ ಕಾರಣದಿಂದ ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಈಗ ಪ್ರಿಯಾ ಆಚಾರ್ (Priya Achar) ಹಾಗೂ ಸಿದ್ದು ಫೋಟೋ ಭಾರಿ ವೈರಲ್ ಆಗುತ್ತಿದ್ದು ನೀವು ಕೂಡ ಈ ಪುಟದ ಮುಖಾಂತರ ಅವರ ಅಪರೂಪದ ಕ್ಷಣಗಳನ್ನು ಕಂಡುಕೊಳ್ಳಬಹುದಾಗಿದೆ.