WhatsApp Group Join Now
Telegram Group Join Now

ಆಶಿಕ ಭುವನ್ ಗಿಂತ ದೊಡ್ಡವರ?ಸ್ನೇಹಿತರೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸ್ಯಾಂಡಲ್ವುಡ್ನ ಮತ್ತೊಂದು ಜೋಡಿ ಸಪ್ತಪದಿ ತುಳಿಯುವ ಮೂಲಕ ನಿಜ ಜೀವನದಲ್ಲಿಯೂ ದಂಪತಿಗಳಾಗಲಿದ್ದಾರೆ. ಅಭಿಷೇಕ್ ಅಂಬರೀಶ್, ಅದಿತಿ ಪ್ರಭುದೇವಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಳೆದ ಕೆಲವು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.

ಇದೀಗ ನಟಿ ಹರ್ಷಿಕ ಪೂರ್ಣಚ್ಚ(Harshika Poonacha) ಮತ್ತು ಭುವನ್ ಪೊನ್ನಣ್ಣವರ ಸರದಿ. ಹೌದು ಗೆಳೆಯರೇ, ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಾ ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂಬ ನಿರ್ಧಾರ ಮಾಡಿ ಮುಂಬರುವ ಆಗಸ್ಟ್ 24ನೇ ತಾರೀಕಿನಂದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಮಾಹಿತಿಯನ್ನು ಅಧಿಕೃತವಾಗಿ ಹೊರಹಾಕಿದರು.

Harshika Poonacha Bhuvan Ponnanna Marriage

ಈ ವಿಷಯ ಹೊರ ಬರುತ್ತಾ ಇದ್ದ ಹಾಗೆ ಸಾಮಾಜಿಕ ಜಾಲತಾಣದ ತುಂಬೆಲ್ಲ ನಟಿ ಹರ್ಷಿಕಾ ಪೂರ್ಣಚ್ಚ(Harshika Poonacha) ಮತ್ತು ಭುವನ್ ಪೊನ್ನಣ್ಣ ಅವರ ನಡುವೆ ಇರುವ ವಯಸ್ಸಿನ ನಂತರದ ಲೆಕ್ಕಾಚಾರ ಕೊಂಚ ಜೋರಾಗೆ ನಡೆಯುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೌದು ಗೆಳೆಯರೇ ಈ ಪ್ರೀತಿ ಹಕ್ಕಿಗಳು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು.

ಇಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಇದ್ದದ್ದನ್ನು ಕಂಡ ನೆಟ್ಟಿಗರು ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್(Something Something) ನಡೆಯುತ್ತಿದೆ ಎಂಬ ಲೆಕ್ಕಾಚಾರ ಹಾಕಿದ್ದರು. ಅದರಂತೆ ಈ ಅಧಿಕೃತ ಮಾಹಿತಿ ಹೊರಬಂದ ನಂತರ ಇವರಿಬ್ಬರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ಗಳು ಕೂಡ ಕ್ರಿಯೇಟ್ ಆಗಿದೆ. ಅಲ್ಲದೆ ಇವರ ವಯಸ್ಸಿನ ಅಂತರದ(age difference) ಕುರಿತು ಲೆಕ್ಕಾಚಾರ ಹಾಕುತ್ತಿದ್ದಾರೆ.

ಹೌದು ಸ್ನೇಹಿತರೆ ನಟಿ ಪೂರ್ಣಚ್ಚ(Harshika Poonacha) ಅವರು ಮೇ ಒಂದನೇ ತಾರೀಕು 1990ರಂದು ಜನಿಸಿದ್ದಾರೆ, ಅದರಂತೆ ನಟ ಭುವನ್ ಪೊನ್ನಣ್ಣ 30ನೇ ತಾರೀಕು ಡಿಸೆಂಬರ್ (december) 1989 ಇಸ್ವಿಯಲ್ಲಿ ಜನಿಸಿದ್ದಾರೆ. ಇವರಿಬ್ಬರ ನಡುವೆ ಐದೇ ಐದು ತಿಂಗಳ ವಯಸ್ಸಿನ ಅಂತರವಿದ್ದು, ಹೇಗೆ ಲೆಕ್ಕಾಚಾರ ಹಾಕಿ ನೋಡಿದರೂ ಪೂರ್ಣಚ್ಚ(Harshika Poonacha) ಭುವನ್(Bhuvan) ಗಿಂತ ಚಿಕ್ಕವರೇ. ಹೌದು ಗೆಳೆಯರೇ ಹಲವಾರು ವರ್ಷಗಳಿಂದ ಪ್ರೀತಿಸಿ ಮನೆಯವರ ಒಪ್ಪಿಗೆ ಸಿಕ್ಕ ಬಳಿಕ ಮದುವೆಯಾಗುವ ನಿರ್ಧಾರ ಮಾಡಿರುವ ಪೂರ್ಣಚ್ಚ ಮತ್ತು ಭುವನ್ ಇದೇ ಆಗಸ್ಟ್ 24 ನೇ ತಾರೀಕಿನಂದು ಕೊಡಗಿನ ವಿರಾಜಪೇಟೆಯ(Virajpete) ಅಮ್ಮತಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಕೊಡುವ(kodava) ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು, ಮದುವೆಗೆ ಕುಟುಂಬಸ್ಥರು ಆತ್ಮೀಯ ಸ್ನೇಹಿತರು ಹಾಗೂ ಕನ್ನಡ ಸಿನಿ ಸೆಲಿಬ್ರೆಟಿಗಳನ್ನು ಆಹ್ವಾನಿಸಲಾಗಿದೆ. ಇವರಿಬ್ಬರ ಮದುವೆ ಲಗ್ನ ಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು, ನಟಿ ಹರ್ಷಿಕ ಮತ್ತು ಭುವನ್ ಮದುವೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: