WhatsApp Group Join Now
Telegram Group Join Now

Krishi Tapanda : ಇತ್ತೀಚಿನ ಕೆಲವು ದಿನಗಳ ಹಿಂದಷ್ಟೇ ನಟಿ ಕೃಷಿ ತಾಪಂಡರವರು ಮೈಸೂರಿನಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಿಸಿ ಅದರ ಗೃಹಪ್ರವೇಶ ಮಾಡಿರುವಂತಹ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳೆಲ್ಲವೂ ಬಾರಿ ವೈರಲ್ ಆಗುತ್ತಿದ್ದು, ನೋಡುಗರ ಕಣ್ಣು ಕುಕ್ಕುವಂತೆ ಮಾಡಿದೆ. ತಮಿಳು Nae ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ನಟಿ ಕನ್ನಡ ಸಿನಿಮಾ ರಂಗದಲ್ಲಿ ಯಶಸ್ಸನ್ನು ಕಂಡುಕೊಂಡವರು.

ನಟ ಅನಿಶ್(Anish) ಅಭಿನಯದ ಅಕಿರ (Akira) ಚಿತ್ರದ ಎರಡನೇ ನಾಯಕ ನಟಿಯಾಗಿ ಕಾಣಿಸಿಕೊಂಡ ಕೃಷಿ ತಾಪಂಡ(Krishita Panda) ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುವ ಮೂಲಕ ಪಡ್ಡೇ ಹುಡುಗರ ಮನಸ್ಸನ್ನು ಗೆದ್ದರು. ಈ ನಡುವೆ ಬಿಗ್ ಬಾಸ್(Big boss) ಮನೆಗೂ ಪ್ರವೇಶ ಮಾಡಿ ತಮ್ಮ ನಗುವಿನ ಮೂಲಕವೇ ಕನ್ನಡಿಗರ ಮನೆಮಗಳಾದ ಕೃಷಿ ಕಹಿ, ಎರಡು ಕನಸು, ಇರ, ಭರಾಟೆ, ಲಂಕೆ, ಬ್ಲಾಂಕ್ ಹೇಗೆ ಮುಂತಾದ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

Krishi Tapanda

ಮೂಲತಹ ಕೊಡಗಿ(Coorg)ನವರಾದ ಕೃಷಿ ತಾಪಂಡ(Krishita Panda) ಅವರು ಮೈಸೂರಿನಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದರು. ಅದರಂತೆ ಈಗ ಆ ಕನಸು ನನಸಾಗಿದ್ದು, ತಮ್ಮ ತಂದೆ ತಾಯಿ ಹಾಗೂ ಸಹೋದರ ಕಾರ್ತಿದೇವಯ್ಯ( Karthi devayya) ಅವರ ಜೊತೆಗೆ ಮನೆಯ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ.

ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಕೊಡಗು ಸಂಪ್ರದಾಯದಂತೆ ಕೃಷಿ ಸೀರೆ ಉಟ್ಟು ಫೋಟೋಗಳಿಗೆ ಬಹಳನೇ ಮುದ್ದಾಗಿ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನೆಲ್ಲ ತಮ್ಮ instagram ಹಾಗೂ facebook ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಕೃಷಿ ತಾಪಂಡ ಹ್ಯಾಪಿ ನ್ಯೂ ಹೋಂ, ನ್ಯೂ ಬಿಗಿನಿಂಗ್(Happy new home, new beginning) ಎಂಬ ಕ್ಯಾಪ್ಶನ್ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಈ ಫೋಟೋಗಳಿಗೆ ನಟಿ ಅನುಪಮಾ ಗೌಡ(Anupama Gowda), ಮನ್ವಿತಾ ಹರೀಶ್(Manvitha Harish) ಸೇರಿದಂತೆ ಮುಂತಾದ ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: