WhatsApp Group Join Now
Telegram Group Join Now

ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯದ ಕಾಳಜಿ ಅತೀ ಅಗತ್ಯ. ಅದರಲ್ಲೂ ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಏಕೆಂದರೆ ನಮ್ಮ ಆಹಾರದಿಂದ ಸಿಗುವ ಪೋಷಕಾಂಶ ಆರೋಗ್ಯವನ್ನು ವೃದ್ಧಿಸುತ್ತದೆ. ಅದರಂತೆ ಆಹಾರದ ಮೂಲಕ ಸಿಗುವ ಕ್ಯಾಲ್ಸಿಯಂ ಕೂಡ ದೇಹಕ್ಕೆ ಬಹಳ ಮುಖ್ಯ. ಏಕೆಂದರೆ ಸದೃಢ ಮೂಳೆಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ.

ಮಕ್ಕಳ ಆರಂಭಿಕ ಬೆಳವಣಿಗೆ ಮತ್ತು ಸ್ನಾಯುಗಳ ಬಲವರ್ಧನೆಗೆ ಸಹ ಇದು ಸಹಾಯ ಮಾಡುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅದರ ಕೊರತೆಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾಣಿಸಿಕೊಳ್ಳಬಹುದು. ಡೈರಿ ಆಹಾರಗಳು ಕ್ಯಾಲ್ಸಿಯಂನ ಉತ್ತಮ ಮೂಲಗಳಾಗಿವೆ. ಇದಲ್ಲದೆ, ಇದು ಇತರ ಅನೇಕ ಆಹಾರಗಳಲ್ಲಿ ಕ್ಯಾಲ್ಸಿಯಂ ಅಂಶ ಕಂಡುಬರುತ್ತದೆ.

ನಿಮ್ಮಲ್ಲಿ ಕ್ಯಾಲ್ಸಿಯಂ ಕೊರತೆ ಕಂಡು ಬರುತ್ತಿದ್ದರೆ ಖಂಡಿತವಾಗಿಯೂ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ನೆಲ್ಲಿಕಾಯಿ ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ನೆಲ್ಲಿಕಾಯಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ದೇಹವನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕಿವಿ ಹಣ್ಣು ಸಹ ಕ್ಯಾಲ್ಸಿಯಂ ಸಮೃದ್ಧ ಮೂಲ. ಇದರಲ್ಲಿ ವಿಟಮಿನ್ ಸಿ ಕೂಡ ಕಂಡುಬರುತ್ತದೆ.

ಇದರ ಸೇವನೆಯಿಂದ ಕೂಡ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು. ಇನ್ನು ಕಿತ್ತಳೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಒಣ ಹಣ್ಣುಗಳು ಡ್ರೈ ಫ್ರೂಟ್ಸ್​ ಸೇವನೆ ಮೂಲಕ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು. ಒಣ ದ್ರಾಕ್ಷಿ, ಬಾದಾಮಿ, ಪಿಸ್ತಾ, ವಾಲ್​ನಟ್ಸ್, ಕಲ್ಲಂಗಡಿ ಬೀಜಗಳಲ್ಲಿ ಕ್ಯಾಲ್ಸಿಯಂ ಕಂಡುಬರುತ್ತದೆ. ಇದಲ್ಲದೆ ಸೆಲರಿ, ಜೀರಿಗೆ, ಲವಂಗ, ಕೊತ್ತಂಬರಿ, ಕರಿಮೆಣಸು ಬೀಜಗಳಲ್ಲೂ ಕ್ಯಾಲ್ಸಿಯಂ ಅಂಶ ಇರುತ್ತದೆ.

ಹಸಿರು ತರಕಾರಿಗಳು ಹಸಿರು ತರಕಾರಿಗಳಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿರುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಎಲೆಕೋಸು, ಮೆಂತ್ಯ, ಮೂಲಂಗಿ ಎಲೆಗಳು, ಪುದೀನ, ಕೊತ್ತಂಬರಿ, ಸೌತೆಕಾಯಿ, ಹುರುಳಿ, ಕ್ಯಾರೆಟ್, ಮುಂತಾದ ತರಕಾರಿಗಳನ್ನು ಹೆಚ್ಚಾಗಿ ಸೇರಿಸಿ. ಹಾಲಿನಿಂದ ತಯಾರಿಸಿದ ವಸ್ತುಗಳು ಹಾಲನ್ನು ಎಲ್ಲರೂ ಬಳಸುತ್ತಾರೆ. ಇದು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.

ಇದಲ್ಲದೆ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಚೀಸ್ ಸೇರಿದಂತೆ ಹಾಲಿನಿಂದ ತಯಾರಿಸಿದ ಎಲ್ಲಾ ಪದಾರ್ಥಗಳಲ್ಲೂ ಕ್ಯಾಲ್ಸಿಯಂ ಅಂಶ ಕಂಡುಬರುತ್ತದೆ. ಇವುಗಳ ಸೇವನೆ ಮೂಲಕ ಕೂಡ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: