ಕಾರ್ನ್ ಎಂದರೆ ಇದನ್ನು ಹಳ್ಳಿ ಭಾಷೆಯಲ್ಲಿ ಕಾಲಿಗೆ ಬಂದಿರುವ ಆಣೆ ಎಂದು ಕರೆಯುತ್ತಾರೆ ಇದು ಪಾದಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ ನೂರಕ್ಕೆ ಒಬ್ಬರಿಗೆ ಮಾತ್ರ ಅಂಗೈನಲ್ಲಿ ಕಂಡುಬರುತ್ತದೆ ಇನ್ನು ಈ ಕಾಲಿನ ಆಣೆ ಯಾಕೆ ಬರುತ್ತದೆ ಅಂದರೆ ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗಗಳಿಗೂ ಕೂಡ ಜೀವಕೋಶಗಳಿಗೂ ಕೂಡ ಇಂತಿಷ್ಟು ಸಮಯ ಆಯಸ್ಸು ಎಂಬುದು ಇರುತ್ತದೆ
ಒಂದು ಜೀವಕೋಶ ಸತ್ತರೆ ಮತ್ತೆ ಅದೇ ಜಾಗದಲ್ಲಿ ಮತ್ತೊಂದು ಜೀವಕೋಶ ಉತ್ಪತ್ತಿಯಾಗುತ್ತದೆ ಆದರೆ ಕೆಲವೊಬ್ಬರಲ್ಲಿ ಸತ್ತುಹೋಗಿರುವ ಅಂತಹ ಜೀವಕೋಶ ದೇಹದಲ್ಲಿ ಹೊರಹೊಗುವುದಿಲ್ಲ ಅಂತಹ ಸಮೂಹವನ್ನು ಅಥವಾ ಕಾಲಿನ ಆಣೆ ಎಂದು ಕರೆಯುತ್ತಾರೆ
ಇದು ಒಂದು ಕಾರಣವಾದರೆ ಮತ್ತೊಂದು ಕಾರಣ ಪ್ರತಿನಿತ್ಯ ನಾವು ಧರಿಸುವ ಪಾದರಕ್ಷೆಗಳಲ್ಲಿ ಯಾವುದಾದರೂ ಒಂದು ಕಡೆ ನಮ್ಮ ಪಾದಕ್ಕೆ ಒತ್ತಿದರೆ ಅದು ಕಾಲಿನ ಪಾದದ ಮೇಲೆ ಪರಿಣಾಮ ಬೀರಿ ತನ್ನ ಜೀವಿತದ ಅವಧಿಗೆ ಮುನ್ನವೇ ಜೀವಕೋಶ ಸತ್ತುಹೋಗುತ್ತದೆ ಆಗಲೂ ಕೂಡ ಕಾಲಿನ ಆಣೆ ಉಂಟಾಗುತ್ತದೆ. ಇದರ ಲಕ್ಷಣ ಕಾಲಿನಲ್ಲಿ ಬಿಳಿ ಭಾಗದಲ್ಲಿ ವೃತ್ತಾಕಾರದಲ್ಲಿ ಕಂಡುಬರುತ್ತದೆ ಅದಕ್ಕೆ ಸ್ವಲ್ಪ ಆದರೂ ನೋವು ಆದರೂ ಪ್ರಾಣ ಹೋಗುವಂತಹ ನೋವಾಗುತ್ತದೆ
ನಡೆಯುವುದಕ್ಕೂ ಕೂಡ ತೊಂದರೆಯಾಗುತ್ತದೆ ಇದಕ್ಕೆ ಎರೆಡು ರೀತಿಯಾಗಿ ಮನೆಮದ್ದುಗಳಿವೆ ಅದೇನೆಂದರೆ ಮನೆಯಲ್ಲಿರುವ ನಿಂಬೆ ಹಣ್ಣನ್ನು ಕತ್ತರಿಸಿ ಅದರ ರಸ ಮತ್ತು ನಾರಿನ ಅಂಶವನ್ನು ತೆಗೆದು ಹಾಕಿ ನಿಂಬೆಹಣ್ಣನ್ನು ಉಲ್ಟಾ ಮಾಡಿ ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಹಾಕಿ ಜೊತೆಗೆ ಎಕ್ಕೆ ಹಾಲನ್ನು ಸೇರಿಸಿ ದಪ್ಪವಾದ ಎಲೆಯನ್ನು ಹೊಂದಿರುವ ಗಿಡದ ಕಾಂಡದಲ್ಲೂ ಸ್ವಲ್ಪಮಟ್ಟಿನ ಹಾಲು ಇದ್ದರೆ ಎಲೆಯಲ್ಲಿ ಧಾರಾಳವಾಗಿ ಹಾಲು ದೊರೆಯುತ್ತದೆ.
ಸ್ವಲ್ಪ ಚಿವುಟಿದರೆ ಸಾಕು ಹಾಲು ಚಿಮ್ಮುತ್ತದೆ. ಇದರ ಹಾಲು ಅತ್ಯಂತ ಖಾರವಾಗಿರುತ್ತದೆ ಮತ್ತು ಕಣ್ಣಿಗೆ ತಾಗಿದರೆ ಅಪಾಯವೂ ಇದೆ. ಈ ಕಾರಣಕ್ಕೆ ಇದರ ಎಲೆಯನ್ನು ಚಿವುಟುವ ಪ್ರಯತ್ನಕ್ಕೆ ಯಾರೂ ಮುಂದಾಗುವುದಿಲ್ಲ. ಹಾಲು ಎಷ್ಟು ಅಪಾಯಕಾರಿಯಾಗಿದೆಯೋ ಅದಕ್ಕಿಂತ ದುಪ್ಪಟ್ಟು ಔಷಧ ಗುಣವನ್ನು ಹೊಂದಿದೆ ಎನ್ನುತ್ತಾರೆ ಈ ಎಕ್ಕೆ ಹಾಲು ಅರಿಶಿನದ ಪುಡಿಯನ್ನು ನಿಂಬೆ ಜೊತೆ ನಿಮ್ಮ ಕಾಲಿನಲ್ಲಿ ಯಾವ ಜಾಗದಲ್ಲಿ ಕಾಲಿನ ಆಣೆ ಉಂಟಾಗಿದೆಯೋ ಆ ಜಾಗಕ್ಕೆ ಇಡಬೇಕು ನಂತರ ಅದಕ್ಕೆ ಕಾಟನ್ ಬಟ್ಟೆಯಿಂದ ಸುತ್ತಿ ಈರೀತಿ ಹಲವು ದಿನಗಳ ಕಾಲ ಮಾಡಿದ್ದಲ್ಲಿ ಖಂಡಿತವಾಗಿಯೂ ಹಾರ್ಡ್ ಆಗಿರುವ ಆ ಜಾಗ ನಿಧಾನವಾಗಿ ಸಾಫ್ಟ್ ಆಗುತ್ತದೆ
ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಅಥವಾ ಅಪಮಾರ್ಗ ಕ್ಷಾರ ಎಂಬುದು ದೊರೆಯುತ್ತದೆ ಅಂದರೆ ಉತ್ತರಣೆಯಿಂದ ಮಾಡಿರುವ ಕ್ಷಾರ ಇದು ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತದೆ ಆ ಕ್ಷಾರವನ್ನು ಸ್ವಲ್ಪ ಸ್ವಲ್ಪ ಅಪ್ಲೈ ಮಾಡಿದರೆ ಸಾಕು ಆ ಚರ್ಮ ಸಾಫ್ಟ್ ಆಗುತ್ತದೆ ಈ ಮನೆಮದ್ದಿನಿಂದ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.