ಜನನಾಂಗದ ಭಾಗದಲ್ಲಿ ತುರಿಕೆ ಇದ್ದರೆ ಆಗ ಅದು ತುಂಬಾ ಮುಜುಗರ ಉಂಟು ಮಾಡುವುದು. ಇದು ನಮ್ಮ ದೈನಂದಿನ ಕಾರ್ಯಗಳ ಸಮಯದಲ್ಲಿ ತುಂಬಾ ಕಿರಿಕಿರಿ ಉಂಟು ಮಾಡುವುದು. ಇಂತಹ ಪರಿಸ್ಥಿತಿಯಲ್ಲಿ ಕಚೇರಿಗೆ ಅಥವಾ ಬೇರೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವುದು ತುಂಬಾ ಕಷ್ಟವಾಗಿರುತ್ತದೆ. ಹೀಗಾಗಿ ಇದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ಅದು ತುಂಬಾ ಒಳ್ಳೆಯದು. ಯೋನಿ ಭಾಗದಲ್ಲಿ ತುರಿಕೆ ಉಂಟಾಗಲು ಯೋನಿಯು ಒಣಗುವುದು ಮತ್ತು ಕೆಲವೊಂದು ರಾಸಾಯನಿಕ ಬಳಕೆ ಅಥವಾ ರೇಜರ್ ಕಾರಣವಾಗಿರಬಹುದು. ಆದರೆ ಕೆಲವೊಂದು ವೈದ್ಯಕೀಯ ಕಾರಣಗಳಿಂದಲೂ ಇದು ಬರಬಹುದು. ಇದರಲ್ಲಿ ಮುಖ್ಯವಾಗಿ ಬ್ಯಾಕ್ಟೀರಿಯಾ ಅಥವಾ ಲೈಂಗಿ ಕವಾಗಿ ಹರಡುವಂತಹ ಸೋಂಕು. ಶಿಲೀಂಧ್ರ ಸೋಂಕಿನಿಂದಾಗಿ ಉಂಟಾಗುವಂತಹ ಸಮಸ್ಯೆಯಿಂದ ಚರ್ಮದಲ್ಲಿ ಕಿರಿಕಿರಿ ಕಾಣಿಸುವುದು. ಈ ಪರಿಸ್ಥಿತಿಯನ್ನು ಇಸುಬು ಎಂದು ಕರೆಯಲಾಗುತ್ತದೆ.
ಒಣಗಿನ ಕಿರಿಕಿರಿಯು ತುಂಬಾ ತೀವ್ರವಾಗಿರುವುದು ಮತ್ತು ಹೀಗಾಗಿ ನೀವು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿದರೆ ಒಳ್ಳೆಯದು. ಆದರೆ ಚರ್ಮದ ಭಾಗದಲ್ಲಿ ಇರುವಂತಹ ಸೋಂಕಿನ ಸಮಸ್ಯೆಯನ್ನು ಸುಲಭವಾಗಿ ಕೆಲವೊಂದು ಮನೆಮದ್ದುಗಳಿಂದ ನಿವಾರಣೆ ಮಾಡಬಹುದು. ಈ ಐದು ಸುಲಭ ಮನೆಮದ್ದುಗಳ ಬಗ್ಗೆ ನೀವು ತಿಳಿಯಿರಿ. ತುರಿಕೆ ಸಮಸ್ಯೆ ಕಾಣಿಸಿಕೊಂಡಾಗ ಸ್ನಾನದ ಬಳಿಕ ಖಾಸಗಿ ಅಂಗವನ್ನು ಸ್ವಚ್ಛವಾಗಿಸಿಕೊಳ್ಳಬೇಕು. ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಸೇರಿಸಿ ಕಾಟನ್ ಬಟ್ಟೆಯಿಂದ ಖಾಸಗಿ ಭಾಗವನ್ನು ಸ್ವಚ್ಛ ಮಾಡಿಕೊಳ್ಳಬೇಕು. ನಂತರ ಶುದ್ಧ ನೀರಿನಿಂದ ಮತ್ತೊಮ್ಮೆ ಕ್ಲೀನ್ ಮಾಡಬೇಕು. ಬೇವಿನ ಎಲೆಗಳು ಅಭೂತಪೂರ್ವ ಔಷಧೀಯ ಗುಣಗಳನ್ನು ಹೊಂದಿದೆ. ಮೊದಲಿಗೆ ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ತಣ್ಣಾಗದ ಬಳಿಕ ಇದರಿಂದ ಖಾಸಗಿ ಭಾಗ ಸ್ವಚ್ಛಗೊಳಿಸಿ ಸ್ನಾನ ಮಾಡಿ.
ಕೊಬ್ಬರಿ ಎಣ್ಣೆ ಚರ್ಮದ ಶುಷ್ಕತೆಯನ್ನು ನಿವಾರಿಸುತ್ತದೆ. ಹಾಗಾಗಿ ಖಾಸಗಿ ಭಾಗಕ್ಕೆ ತೆಂಗಿನ ಎಣ್ಣೆ ಅಪ್ಲೈ ಮಾಡುವ ಮೂಲಕ ಶುಷ್ಕತೆ ನಿವಾರಿಸಬಹುದು. ಹೆಚ್ಚು ನೀರು ಕುಡಿಯಬೇಕು. ಇನ್ನು ಸಾಬೂನಿನಂತಹ ಗಟ್ಟಿ ಪದಾರ್ಥಗಳಿಂದ ಖಾಸಗಿ ಅಂಗ ಸ್ವಚ್ಛಗೊಳಿಸೋದನ್ನು ನಿಲ್ಲಿಸಿ.
ತುಳಸಿ ಎಲೆಗಳು ಇದರ ಶಿಲೀಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಸೂಕ್ಷ್ಮಜೀವಿ ನಿವಾರಕ ಗುಣ ತುರಿಕೆಯನ್ನೂ ನಿಲ್ಲಿಸಲು ಸಮರ್ಥವಾಗಿವೆ. ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಕೊಂಚ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಟ್ಟು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಕುಡಿಯಿರಿ. ಬೋರಿಕ್ ಆಮ್ಲ ಅಥವಾ ಬೋರಿಕ್ ಪೌಡರ್ ಈ ಪುಡಿಯಲ್ಲಿಯೂ ಉತ್ತಮ ಶಿಲೀಂಧ್ರ ನಿವಾರಕ ಗುಣವಿದ್ದು ತುರಿಕೆಯನ್ನು ನಿವಾರಿಸಲು ಉತ್ತಮವಾದ ಆಯ್ಕೆಯಾಗಿದೆ. ಕಾಲು ಚಿಕ್ಕಚಮಚ ಬೋರಿಕ್ ಆಮ್ಲವನ್ನು ಒಂದು ಕಪ್ ನೀರಿನಲಿ ಬೆರೆಸಿ ಈ ನೀರನ್ನು ತೋಯಿಸಿದ ಹತ್ತಿಯುಂಡೆಯಿಂದ ತುರಿಕೆ ಇರುವ ಭಾಗವನ್ನೆಲ್ಲ ನೆನೆಸಿ. ಈ ಕ್ರಿಯೆಯನ್ನು ನಿತ್ಯವೂ ಅನುಸರಿಸುವ ಮೂಲಕ ಶೀಘ್ರವೇ ತುರಿಕೆ ಮಾಯವಾಗುತ್ತದೆ. ಈ ಮೇಲಿನ ಎಲ್ಲಾ ಕ್ರಮಗಳಿಂದ ತುರಿಕೆ ನಿಯಂತ್ರಣಕ್ಕೆ ಬರದಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ. ಜಾಹೀರಾತು ನೋಡಿ ಸಿಕ್ಕ ಸಿಕ್ಕ ಕ್ರೀಮ್ ಬಳಸಬೇಡಿ. ಇದು ತುಂಬಾನೇ ಅಪಾಯಕಾರಿ.