ಕೇಸರಿ ಕುಡಿಯುವುದರಿಂದ ಗರ್ಭದಲ್ಲಿರುವ ಮಗು ಬೆಳ್ಳಗೆ ಹುಟ್ಟುತ್ತದೆ ಎಂದು ಹೇಳುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ ಹಾಗೂ ಕೇಸರಿಯನ್ನು ಯಾವ ಸಮಯದಲ್ಲಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಕೇಸರಿಯನ್ನು ಕುಡಿಯುವುದರಿಂದ ಗರ್ಭಿಣಿ ಸ್ತ್ರೀಯರಿಗೆ ಆಗುವ ಆರೋಗ್ಯಕರ ಪ್ರಯೋಜನಗಳೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಗರ್ಭಿಣಿ ಮಹಿಳೆಯರು ಕೇಸರಿ ಕುಡಿಯುವುದರಿಂದ ಮಗು ಬೆಳ್ಳಗೆ ಹುಟ್ಟುತ್ತದೆ ಎಂದು ಹೇಳುತ್ತಾರೆ. ಕೇಸರಿ ಕುಡಿಯುವುದರಿಂದ ದೇಹದ ಬಣ್ಣ ಬದಲಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದಿದೆ ಆದರೆ ತಾಯಿ ಕುಡಿಯುವುದರಿಂದ ಗರ್ಭದಲ್ಲಿರುವ ಮಗುವಿನ ತ್ವಚೆ ಬೆಳ್ಳಗಾಗುತ್ತದೆ ಎಂದು ಯಾವ ಸಂಶೋಧನೆಯಿಂದಲೂ ಕಂಡುಬಂದಿಲ್ಲ. ಗರ್ಭಿಣಿ ಮಹಿಳೆಯರು ಕೇಸರಿ ಕುಡಿಯುವುದರಿಂದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಕೇಸರಿ ಕುಡಿಯುವುದರಿಂದ ಗರ್ಭಿಣಿ ಮಹಿಳೆಯರಿಗೆ ಆಗುವ ಸ್ನಾಯು ನೋವು, ಬೆಳಗಿನ ಸಮಯದಲ್ಲಿ ಆಗುವ ಕಿರಿ ಕಿರಿ ಕಡಿಮೆಯಾಗುತ್ತದೆ. ಗರ್ಭಿಣಿ ಮಹಿಳೆಯರಿಗೆ ಗ್ಯಾಸ್ಟ್ರಿಕ್, ಮಲಬದ್ಧತೆ ಸಮಸ್ಯೆ ಇದ್ದರೆ ಕೇಸರಿ ಕುಡಿಯುವುದರಿಂದ ಆಹಾರ ಸರಿಯಾಗಿ ಜೀರ್ಣ ಆಗುತ್ತದೆ.
ಬಿಪಿ ಹೆಚ್ಚಾಗಿದ್ದರೆ, ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದ್ದರೆ ಗರ್ಭಿಣಿ ಮಹಿಳೆಯರು ಆಹಾರದಲ್ಲಿ ಅಥವಾ ಹಾಲಿನಲ್ಲಿ ಕೇಸರಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹಾಗೂ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಗರ್ಭಿಣಿ ಮಹಿಳೆಯರಿಗೆ ಕಬ್ಬಿಣದ ಅಂಶ ಅವಶ್ಯವಾಗಿ ಬೇಕಾಗುತ್ತದೆ. ಗರ್ಭಿಣಿ ಮಹಿಳೆಯರಿಗೆ ಐರನ್ ಕಂಟೆಂಟ್ ಹೆಚ್ಚಾಗುವ ಟ್ಯಾಬ್ಲೆಟ್ ಕೊಡುತ್ತಾರೆ ಅದರ ಸೇವನೆಯಿಂದ ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಣಿಸುತ್ತದೆ ಅವರು ಕೇಸರಿ ಕುಡಿಯುವುದರಿಂದ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಕೇಸರಿ ಕುಡಿಯುವುದರಿಂದ ಹಿಮೊಗ್ಲೋಬಿನ್ ಲೆವೆಲ್ ಹೆಚ್ಚಾಗುತ್ತದೆ. ಕೇಸರಿ ಕುಡಿಯುವುದರಿಂದ ಕೂದಲಿನ ಉದುರುವಿಕೆ ಕಡಿಮೆಯಾಗಿ ಹೆಚ್ಚು ಬೆಳೆಯುತ್ತದೆ. ಗರ್ಭಿಣಿ ಮಹಿಳೆಯರಿಗೆ ನಿದ್ದೆ ಬರುವುದಿಲ್ಲ ಅವರು ಮಲಗುವ ಮುನ್ನ ಒಂದು ಲೋಟ ಹಾಲಿಗೆ 2-3 ದಳ ಕೇಸರಿ ಹಾಕಿ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಆದರೆ ಹೆಚ್ಚು ಕೇಸರಿ ಹಾಕಬಾರದು.
ಗರ್ಭಿಣಿ ಮಹಿಳೆಯರು ಮೊದಲ 5 ತಿಂಗಳು ಕುಡಿಯಬಾರದು ಏಕೆಂದರೆ ಕೇಸರಿ ಬಹಳ ಹೀಟ್ ಅಬಾರ್ಷನ್ ಆಗುವ ಸಾಧ್ಯತೆ ಇರುತ್ತದೆ. 5 ತಿಂಗಳ ನಂತರ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಹಾಲಿಗೆ 3-4 ದಳ ಕೇಸರಿ ಹಾಕಿ ಕುಡಿದು ಮಲಗಬೇಕು. ಒಂದು ಗ್ಲಾಸ್ ಹಾಲಿಗೆ 3-4 ದಳ ಕೇಸರಿ ಹಾಕಿ ಕುದಿಸಿ ಬೆಚ್ಚಗಿರುವಾಗ ಬಾದಾಮಿ ಪೌಡರ್ ಅಥವಾ ಪಿಸ್ತಾ ಪೌಡರ್ ಮಿಕ್ಸ್ ಮಾಡಿ ಕುಡಿಯಬಹುದು. ಅತಿಯಾಗಿ ಕೇಸರಿ ಬಳಕೆ ಮಾಡುವುದರಿಂದ ಹೆಚ್ಚಿನ ಅಡ್ದ ಪರಿಣಾಮ ಉಂಟಾಗುತ್ತದೆ ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಕೇಸರಿ ಸೇವಿಸಬೇಕು. ಈ ಮಾಹಿತಿಯನ್ನು ಎಲ್ಲಾ ಮಹಿಳೆಯರಿಗೆ ತಿಳಿಸಿ.