ಕೇಂದ್ರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಬಜೆಟ್ ಮಂಡನೆ ಮಾಡಲಾಗಿದ್ದು ಎರಡು ಸಾವಿರದ ಇಪ್ಪತ್ತೆರಡರ ಬಜೆಟ್ ನಲ್ಲಿ ವಿಶೇಷವಾಗಿ ರೈತರಿಗೆ ಯಾವ ರೀತಿಯ ಕೊಡುಗೆಯನ್ನು ನೀಡಲಾಗಿದೆ ಮತ್ತು ರೈತ ವರ್ಗಕ್ಕೆ ಏನೆಲ್ಲಾ ಘೋಷಣೆಗಳನ್ನು ಮಾಡಲಾಗಿದೆ ಮತ್ತು ರೈತರಿಗಾಗಿ ಜಾರಿಗೆ ತರುತ್ತಿರುವ ಹಾಗೂ ತಂದಿರುವ ಹೊಸ ಯೋಜನೆಗಳು ಯಾವುದು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಎರಡು ಸಾವಿರದ ಇಪ್ಪತ್ತೆರಡು – ಇಪ್ಪತ್ಮೂರರ ಬಜೆಟ್ನಲ್ಲಿ 2023 ವರ್ಷವನ್ನ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಇದು ರೈತರಿಗೆ ಸಂತಸವನ್ನುಟುಮಾಡಿದೆ.
ಕೇಂದ್ರದ ಹಣಕಾಸು ಸಚಿವೆ ಆಗಿರುವಂತಹ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟಿನಲ್ಲಿ ರೈತ ವರ್ಗಕ್ಕೆ ನೀಡಲಾಗಿರುವ ಮೀಸಲಾತಿಗಳು ಹಾಗೂ ಕಾರ್ಯಕ್ರಮಗಳು ಯಾವುದು ಎಂಬುದನ್ನು ನೋಡುವುದಾದರೆ ಬಹಳಷ್ಟು ರೈತರ ಆಶಯ ವಾರ್ಷಿಕವಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಹೆಚ್ಚಳ ಮಾಡುವುದಾಗಿರುವುದರಿಂದ ರೈತ ವರ್ಗದ ಬಹಳಷ್ಟು ಬಡ ರೈತರಿಗೆ ಕೇಂದ್ರ ಸರ್ಕಾರವು ಈಗಾಗಲೇ ವಾರ್ಷಿಕವಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಆರೂ ಸಾವಿರ ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿದೆ. ಇದನ್ನು ಇನ್ನು ಮುಂದೆ ವಾರ್ಷಿಕವಾಗಿ ಹತ್ತು ಸಾವಿರ ರೂಪಾಯಿಗಳಿಗೆ ಏರಿಸಬೇಕೆಂಬುದು ಸಾಕಷ್ಟು ರೈತರ ಆಶಯವಾಗಿದೆ.
ಆದರೆ ಅಷ್ಟಕ್ಕೂ ಕೇಂದ್ರ ವಿತ್ತ ಸಚಿವೆ ಮಂಡಿಸಿರುವ ಆರ್ಥಿಕ ಬಜೆಟಿನಲ್ಲಿ ರೈತ ವರ್ಗಕ್ಕೆ ಸೀಮಿತಗೊಳಿಸಿರುವ ಕೆಲವು ವಿಷಯಗಳನ್ನು ತಿಳಿಸಲಾಗಿದ್ದು ಇದರಿಂದ ರೈತರಿಗೆ ಸಾಕಷ್ಟು ಅನುಕೂಲಗಳು ಆಗಲಿದ್ದು ದೇಶದ ಹಾಗೂ ಕರ್ನಾಟಕದ ಎಲ್ಲಾ ರೈತರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಆಶಯವಾಗಿದೆ. ಬಜೆಟ್ನಲ್ಲಿ ಈ ಬಾರಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.
ಹಾಗಾದರೆ ಕೇಂದ್ರ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಸೌಲಭ್ಯಗಳೇನು ಎಂದರೆ ಕೃಷಿ ವಲಯದಲ್ಲಿ ಡ್ರೋನ್ ಗಳ ಬಳಕೆಗೆ ಅನುಮತಿ ಬೆಳೆಗಳ ದಾಖಲೆ ಭೂ ದಾಖಲೆ ಕೀಟನಾಶಕಗಳ ಸಿಂಪಡಣೆಗೆ ಕಿಸಾನ್ ಡ್ರೋನ್. ಗೋಧಿ ಮತ್ತು ಕಾಡು ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ರೈತರಿಗೆ ಎಣ್ಣೆ ಕಾಡುಗಳನ್ನು ಬೆಳೆಯುವುದಕ್ಕೆ ಪ್ರೋತ್ಸಾಹ. ಸಿರಿಧಾನ್ಯ ಬೆಳೆಗಳಿಗೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸುವುದು.
ಆರ್ಗೆನಿಕ್ ಉತ್ಪನ್ನಗಳ ಹೆಚ್ಚಳಕ್ಕೆ ಅದ್ಯತೆ. ಗಂಗಾ ನದಿ ಬಳಿ ಸಾವಯವ ಕೃಷಿಗೆ ಆದ್ಯತೆ ರೈತರ ಆಂದೋಲನಗಳ ಬೇಡಿಕೆಗಳಲ್ಲಿ ಒಂದಾದ ಎಂ ಎಸ್ ಎಫ್ ಮೊತ್ತವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸುವ ಘೋಷಣೆಯನ್ನು ಮಾಡಿದ್ದಾರೆ. ಈ ವರ್ಷವೇ ನೂರಾ ಅರವತ್ಮುರು ಲಕ್ಷ ರೈತರಿಂದ ಸಾವಿರದ ಎರಡು ನೂರಾ ಎಂಟು ಮೆಟ್ರಿಕ್ ಟನ್ ಗೋಧಿ ಮತ್ತು ಬತ್ತವನ್ನು ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಎಂ ಎಸ್ ಪಿ ಮೂಲಕ ರೈತರ ಖಾತೆಗೆ 2.37ಲಕ್ಷ ಕೋಟಿ ರೂಪಾಯಿ ಜಮಾ ಆಗಲಿದೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಕೇಂದ್ರಸರ್ಕಾರದ ಈ ವರ್ಷದ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಉಪಯೋಗವಾಗುವಂತಹ ಘೋಷಣೆಗಳನ್ನು ನೀಡಲಾಗಿದೆ ಎಂದು ಹೇಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.