ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಯೋ ಹಾಗೆಯೆ ತೂಕ ಕಡಿಮೆ ಇದ್ದರೂ ಕೂಡ ಕಷ್ಟ. ನೋಡಲು ಮೈ ತುಂಬಿಕೊಂಡಿದ್ದರೆ ಅದರ ಅಂದವೇ ಚಂದ. ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಹೆಂಗಳೆಯರು ಕಷ್ಟ ಪಡುತ್ತಿರುತ್ತಾರೆ. ಕಡಿಮೆ ತೂಕ ಸಾಕಷ್ಟು ತೊಂದರೆಗಳನ್ನು ತರುತ್ತದೆ. ಆಯಾಸ, ನಿರುತ್ಸಾಹ, ಇವುಗಳಿಗೆಲ್ಲಾ ಮೈಯಲ್ಲಿ ಶಕ್ತಿ ಇಲ್ಲದಿರುವುದು ಕೂಡ ಕಾರಣವಾಗುತ್ತದೆ. ಝೀರೋ ಗಾತ್ರದಿಂದ ಆರೋಗ್ಯಕರ ಮೈಕಟ್ಟನ್ನು ಹೊಂದುವುದು ಕೂಡ ಅಗತ್ಯ. ಕೆಲವರು ಏನು ಮಾಡಿದರು ತುಲಾ ಹೆಚ್ಚುವುದಿಲ್ಲಾ, ಇನ್ನು ಕೆಲವರು ಜಂಕ್ ಫುಡ್ ತಿಂದು ಕೊಬ್ಬು ಬೆಳೆಸಿಕೊಳ್ಳುತ್ತಾರೆ. ಆದರೆ ಇದರಿಂದ ದೇಹದ ತೂಕ ಹೆಚ್ಚಾದರೂ ದೇಹಕ್ಕೆ ಶಕ್ತಿ ಮಾತ್ರ ಇರುವುದಿಲ್ಲ.
ನ್ಯಾಚುರಲ್ ಆಗಿ ತೂಕವನ್ನು ಹೆಚ್ಚಿಸಿಕೊಳ್ಳಲು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಅಧಿಕವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ ಜೊತೆಗೆ ಮೊಟ್ಟೆಗಳು, ಧಾನ್ಯಗಳು, ಬೀಜಗಳು, ನಟ್ಸ್, ಬೇಳೆ ಕಾಳುಗಳು ಹಾಲಿನ ಉತ್ಪನ್ನಗಳು ನಿಮ್ಮ ದಿನನಿತ್ಯ ಆಹಾರ ಕ್ರಮದಲ್ಲಿ ಇರಲಿ. ಆತಂಕಾರಿ ವಿಚಾರವೆಂದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಾದ್ಯಂತ 462 ಮಿಲಿಯನ್ ವಯಸ್ಕರು ಕಡಿಮೆ ತೂಕ ಹೊಂದಿದ್ದಾರೆ.
ಪ್ರತಿದಿನ 500 ಕ್ಕಿಂತ ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಸೇವಿಸುವುದರಿಂದ ಒಂದು ವಾರದಲ್ಲಿ ನಿಮ್ಮ ತೂಕ ಒಂದು ಪೌಂಡ್ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚು ಕ್ಯಾಲೋರಿ ಮತ್ತು ಪೋಷಕಾಂಶ ಇರುವ ಆಹಾರವನ್ನು ದಿನ ನಿತ್ಯ ಊಟ ಮತ್ತು ತಿಂಡಿಗಳ ಜೊತೆ ಸೇವಿಸಿ, ಹಮ್ಮಸ್ ಜೊತೆ ಬಿಸ್ಕೇಟ್, ಆವಕಾಡೊ ಟೋಸ್ಟ್, ಪ್ರೋಟಿನ್ ಯುಕ್ತ ಪಾನೀಯಗಳು, ಬ್ರೆಡ್ ಜೊತೆ ಯಾವುದೇ ನಟ್ ಬಟರ್ ಅಂದರೆ ಕಡಲೇಕಾಯಿ, ಬಾದಾಮಿ, ಗೋಡಂಬಿ ಬಟರ್ ಸೇರಿಸುವುದರಿಂದ, ಮೊಸರು ಪಾರ್ಫೈಟ್, ಏಕದಳ ಬಾರ್ ಗಳು, ಮ್ಯೂಸ್ಲಿ ಜೊತೆ ಹಣ್ಣು ಸೇರಿಸುವುದರಿಂದ, ನಟ್ ಮಿಶ್ರಣದ ಜೊತೆ ಓಟ್ ಮಿಲ್, ಟೊಸ್ಟ್ ಜೊತೆ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ.
ಕಡಲೆಕಾಳನ್ನು ರಾತ್ರಿ ನೆನೆ ಹಾಕಿ, ಅದನ್ನು ಬೆಳಿಗ್ಗೆ ಮಿಕ್ಸಿ ಜಾರ್ ಅಲ್ಲಿ ನೆನೆಸಿದ ಕಡಲೆ ಹಾಗೂ ಸ್ವಲ್ಪ ಬೆಲ್ಲ ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಹಸಿ ಹಾಲಿನಲ್ಲಿ ಹಾಕಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ಬಹು ಬೇಗ ಹೆಚ್ಚುತ್ತದೆ.