ಮಳೆಗಾಲ ಆರಂಭವಾಗುತ್ತಿರುವಂತೆ ದೇಶದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಇತ್ಯಾದಿ ಜ್ವರಗಳು ಸಾಲು ಸಾಲಾಗಿ ಬರುವುದು. ಪ್ರತಿವರ್ಷವೂ ಇಂತಹ ಕಾಯಿಲೆಗಳಿಂದ ಮೃತಪಡುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ನಮ್ಮ ಸುತ್ತಮುತ್ತಲಿನ ಪರಿಸರವು ಸ್ವಚ್ಛವಾಗಿ ಇರದೇ ಇರುವುದು ಕೂಡ ಇಂತಹ ಕಾಯಿಲೆಗಳು ಹರಡಲು ಪ್ರಮುಖ ಕಾರಣವಾಗಿದೆ. ಈಗ ದೇಶದೆಲ್ಲೆಡೆ ಕೊರೊನಾ ಭೀತಿಯ ನಡುವೆ ಜನರು ಬದುಕುತ್ತಿರುವಾಗಲೇ ಈ ಜ್ವರಗಳು ಮತ್ತಷ್ಟು ಸಮಸ್ಯೆಯನ್ನು ತರುತ್ತಲಿದೆ. ಇಂತಹ ಜ್ವರ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು ತುಂಬಾ ಸಹಕಾರಿ. ಡೆಂಗ್ಯೂ ಜ್ವರವನ್ನು ಗುಣಪಡಿಸಲು ಯಾವೆಲ್ಲಾ ಮನೆಮದ್ದುಗಳನ್ನು ಬಳಸಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೊದಲು ಡೆಂಗ್ಯೂ ಲಕ್ಷಣ ಏನೂ ಎನ್ನುವುದನ್ನು ಸಂಕ್ಷಿಪ್ತವಾಗಿ ನೋಡೋಣ. ಮಳೆಗಾಲದಲ್ಲಿ ಅತಿಯಾಗಿ ಕಾಡುವ ಅರೋಗ್ಯ ಸಮಸ್ಯೆ ಡೆಂಗ್ಯೂ. ರೋಗಿಗಳಿಗೆ ತೀವ್ರ ತಲೆನೋವು, ಸ್ನಾಯುಗಳು, ಕೀಲು ನೋವು ಸಹ ಜನರನ್ನು ಕಾಡಬಹುದು. ತೀವ್ರ ಜ್ವರ, ದೇಹದಲ್ಲಿ ಚಳಿ, ಅತಿಯಾದ ಬೆವರು, ನಿಶ್ಯಕ್ತಿ, ಆಯಾಸ, ಹಸಿವಾಗದಿರುವುದು, ಒಸಡುಗಳಲ್ಲಿ ರಕ್ತಸ್ರಾವ ಮತ್ತು ವಾಂತಿ ಕೂಡ ಡೆಂಗ್ಯೂನ ಸಂಕೇತ ಇಂತಹ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರ ಸಲಹೆ ಪಡೆಯುವುದನ್ನು ಮರೆಯಬೇಡಿ. ಡೆಂಗ್ಯೂ ಜ್ವರ ಎಂದರೇನು?
ಡೆಂಗ್ಯೂ ಜ್ವರವು ವೈರಸ್ನಿಂದ ಉಂಟಾಗುವ ಸೋಂಕು. ಸಮಯಕ್ಕೆ ಸರಿಯಾಗಿ ಡೆಂಗ್ಯೂ ಚಿಕಿತ್ಸೆ ಮಾಡುವುದು ಬಹಳ ಮುಖ್ಯ. ಸೊಳ್ಳೆಗಳು ಡೆಂಗ್ಯೂ ವೈರಸ್ ಅನ್ನು ಹರಡುತ್ತವೆ. ಡೆಂಗ್ಯೂ ಜ್ವರವನ್ನು ‘ಮೂಳೆ ಮುರಿಯುವ ಜ್ವರ’ ಎಂದೂ ಕರೆಯಲಾಗುತ್ತದೆ. ಇದು ತಮ್ಮ ಮೂಳೆಗಳು ಮುರಿದಂತೆ ಡೆಂಗ್ಯೂನಿಂದ ಬಳಲುತ್ತಿರುವ ಜನರಿಗೆ ತೀವ್ರ ನೋವನ್ನು ಉಂಟುಮಾಡಬಹುದು. ಡೆಂಗ್ಯೂ ಜ್ವರದ ಕೆಲವು ಲಕ್ಷಣಗಳಲ್ಲಿ ಜ್ವರ, ತಲೆನೋವು, ಚರ್ಮದ ಮೇಲೆ ಸಿಡುಬು, ದದ್ದು ಮತ್ತು ಸ್ನಾಯು ಮತ್ತು ಕೀಲು ನೋವು ಸೇರಿವೆ. ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಡೆಂಗ್ಯೂ ಜ್ವರವನ್ನು ತಪ್ಪಿಸಲು, ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು, ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಬಿಡಬಾರದು.
ಡೆಂಗ್ಯೂ ಜ್ವರವು ದೇಹದಲ್ಲಿ ತಾಪಮಾನ ಕಡಿಮೆ ಮಾಡುವ ಜತೆಗೆ ಹೊಟ್ಟೆಯ ನೋವು, ಉಸಿರಾಟದ ತೊಂದರೆ, ತೀವ್ರ ಜ್ವರ, ವಾಂತಿ, ವಿಶ್ರಾಂತಿ ಇಲ್ಲದೆ ಇರುವುದು, ನಿಶ್ಯಕ್ತಿ ಮತ್ತು ಯಕೃತ್ ಉಬ್ಬಿಕೊಳ್ಳುವ ಸಮಸ್ಯೆಯು ಕಂಡುಬರುವುದು. ಡೆಂಗ್ಯೂ ಜ್ವರಕ್ಕೆ ಇದುವರೆಗೆ ಯಾವುದೇ ಔಷಧಿ ಪತ್ತೆ ಮಾಡಲಾಗಿಲ್ಲ. ಆದರೆ ಕೆಲವೊಂದು ಮನೆಮದ್ದುಗಳನ್ನು ಬಳಕೆ ಮಾಡಿಕೊಂಡರೆ ಅದು ಖಂಡಿತವಾಗಿಯೂ ತುಂಬಾ ಲಾಭಕಾರಿ ಆಗಿರುವುದು. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆ ಅದ ಕಾರಣ ಮನೆಯನ್ನು ಹಾಗೂ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಡೆಂಗ್ಯೂ ಬಂದರೆ ಸುಧಾರಿಸಿಕೊಳ್ಳಲು ಹತ್ತರಿಂದ 12 ದಿನಗಳಾದರೂ ಬೇಕಾಗುವುದು. ಜ್ವರ ತುಂಬಾ ಹೆಚ್ಚಾಗಿ ಕಾಣಿಸಿಕೊಂಡರೆ ಬಾಯಿ ವಸಡು ಮತ್ತು ಮೂಗಿನಿಂದ ರಕ್ತ ಬರಲು ಆರಂಭಿಸುತ್ತದೆ. ಡೆಂಗ್ಯೂ ಕಾಯಿಲೆ ಹೆಚ್ಚಾಗಿ ವಯಸ್ಸಾದವರು ಮತ್ತು ಮಕ್ಕಳಲ್ಲಿ ಕಂಡು ಬರುತ್ತದೆ.
ಡೆಂಗ್ಯೂ ಜ್ವರದ ವೇಳೆ ಬೆವರು ಮತ್ತು ಬಳಲಿಕೆಯಿಂದಾಗಿ ನಿರ್ಜಲೀಕರಣವು ಉಂಟಾಗುವುದು. ಇದರಿಂದ ದೇಹವನ್ನು ಹೈಡ್ರೇಟ್ ಆಗಿಡುವುದು ಅತೀ ಅಗತ್ಯ ಹಾಗಾಗಿ ಹೆಚ್ಚೆಚ್ಚು ನೀರನ್ನು ಕುಡಿಯುತ್ತಿರಬೇಕು. ಪಪ್ಪಾಯಿ ಎಲೆಗಳಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳು ಮತ್ತು ನೈಸರ್ಗಿಕ ಅಂಶಗಳಿದ್ದು, ಇದು ಪ್ಲೆಟ್ಲೇಟ್ ಗಣತಿ ತಗ್ಗುವುದನ್ನು ತಡೆಯುವುದು. ಇದರಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಪ್ರತಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಆಂಟಿಆಕ್ಸಿಡೆಂಟ್ ಒತ್ತಡ ಕಡಿಮೆ ಮಾಡಿ, ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಪಪ್ಪಾಯಿ ಎಲೆಗಳನ್ನು ಸರಿಯಾಗಿ ಜಜ್ಜಿಕೊಂಡು ಅದರ ರಸವನ್ನು ತೆಗೆಯಬೇಕು.
ನಾವು ಅಡುಗೆಗೆ ಬಳಸುವ ಈರುಳ್ಳಿ ಇದೂ ಕೂಡಾ ಡೆಂಗ್ಯೂ ರೋಗ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈರುಳ್ಳಿಯನ್ನು ಕತ್ತರಿಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ವಿನಿಗರ್ ಸೇರಿಸಿ ಈ ಎರಡರ ಮಿಶ್ರಣವನ್ನು ಆಹಾರದಲ್ಲಿ ಸೇರಿಸಿಕೊಂಡು ತಿಂದರೆ ಡೆಂಗ್ಯೂ ಜ್ವರ ಕಡಿಮೆಯಾಗುವುದು. ಇನ್ನು ಮೂರನೆಯದಾಗಿ ಕಹಿ ಬೇವಿನ ಎಲೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿ ಇದೆ ಎನ್ನುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಬೇವಿನ ಎಲೆಗಳು ಸೋಂಕಿನ ವಿರುದ್ಧ ಅದ್ಭುತವಾಗಿ ಕೆಲಸ ಮಾಡುವುದು ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು. ಬೇವಿನ ಎಲೆಗಳು ಪ್ಲೆಟ್ಲೇಟ್ ಹೆಚ್ಚಿಸುವುದು ಮತ್ತು ಬಿಳಿ ರಕ್ತದ ಕಣಗಳ ಗಣತಿ ಹೆಚ್ಚಿಸುವುದು ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು. ಡೆಂಗ್ಯೂವಿನಿಂದ ಬಳಲುತ್ತಿದ್ದರೆ ಆಗ ಬೇವಿನ ಎಲೆಯ ಕಷಾಯ ಮಾಡಿ ಕುಡಿಯಿರಿ.
ನಾಲ್ಕನೆಯ ಮನೆಮದ್ದು ನಮ್ಮ ಅಡಿಗೆಗೆ ಬಳಸುವ ಕೊತ್ತಂಬರಿ ಸೊಪ್ಪು. ಕೊತ್ತಂಬರಿ ಸೊಪ್ಪಿನ ಎಲೆಗಳಿಂದ ರಸವನ್ನು ತೆಗೆದು ಅದನ್ನು ಒಂದು ಟಾನಿಕ್ ರೀತಿ ಬಳಸಿದರೆ ಡೆಂಗ್ಯೂ ಜ್ವರ ಕಡಿಮೆಯಾಗುತ್ತದೆ. ಐದನೇ ಮನೆಮದ್ದಾಗಿ ವಿಟಮಿನ್-ಸಿ ಅಂಶ ಹೆಚ್ಚಾಗಿರುವ ಕಿತ್ತಳೆ ಹಣ್ಣು. ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದರೆ ಅದರಿಂದ ಡೆಂಗ್ಯೂ ವೈರಸ್ ದೂರವಾಗುವುದು. ಇದು ಪ್ರತಿಕಾಯವನ್ನು ಉತ್ತೇಜಿಸಿ ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಮೂತ್ರ ವಿಸರ್ಜನೆ ವೃದ್ಧಿಸುವುದರಿಂದ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳು ಹೊರಗೆ ಹೋಗುವುದು. ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಅಂಗಾಂಶಗಳನ್ನು ಸರಿಪಡಿಸಲು ಸಹಕಾರಿ.
ಇನ್ನು ತುಳಸಿ. ತುಳಸಿಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇರುವುದು ನಮಗೆ ತಿಳಿದೇ ಇದೆ. ಆಯುರ್ವೇದದಲ್ಲೂ ಇದನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಡೆಂಗ್ಯೂ ವಿರುದ್ಧ ಹೋರಾಡಲು ತುಳಸಿ ಎಲೆಗಳನ್ನು ಜಗಿದು ಅದರ ರಸವನ್ನು ಸೇವಿಸಬೇಕು.
ಇದರಿಂದ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು. ತುಳಸಿ ಎಲೆಗಳಲ್ಲಿ ಪ್ರಮುಖ ಸಾರಭೂತ ತೈಲಗಳಿದ್ದು, ಇದು ನೈಸರ್ಗಿಕವಾದ ಕೀಟನಾಶಕ ಗುಣ ಹೊಂದಿದೆ. ಇದರ ಪರಿಣಾಮವಾಗಿ ಇದು ಸೊಳ್ಳೆಗಳನ್ನು ದೂರವಿಡುವುದು ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳನ್ನು ದೂರವಿಡುತ್ತದೆ. 5-6 ಎಲೆಗಳನ್ನು ಜಗಿದರೆ ಅದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು.
ಕೊನೆಯದಾಗಿ ಮೆಂತೆ ಸೊಪ್ಪು. ಮೆಂತೆ ಸೊಪ್ಪನ್ನು ಅಗೆದು ತಿನ್ನುವುದರಿಂದಲೂ ಸಹ ಡೆಂಗ್ಯೂ ಜ್ವರ ನಿವಾರಣೆಯಾಗುತ್ತದೆ. ಅದೇ ರೀತಿ ಡೆಂಗ್ಯೂ ಜ್ವರ ಬಂದಾಗ ನಾವು ಪ್ರತಿದಿನ ಬಳಸುವ ಬಿಳಿ ಅಕ್ಕಿಯ ಅನ್ನಕ್ಕಿಂತ ಕೆಂಪು ಅಕ್ಕಿಯಿಂದ ಗಂಜಿ ತಯಾರಿಸಿ ಕುಡಿಯುವುದರಿಂದ ಡೆಂಗ್ಯೂ ಬೇಗ ನಿವಾರಣೆಯಾಗುತ್ತದೆ. ಈ ಎಲ್ಲ ಮನೆಮದ್ದುಗಳನ್ನು ಬಳಸಿಕೊಂಡು ನಾವು ಡೆಂಗ್ಯೂ ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು .