WhatsApp Group Join Now
Telegram Group Join Now

ಥೈರಾಯ್ಡ್. ಈ ಒಂದು ಹೆಸರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೇಳಿರುತ್ತೀರಿ. ಆದರೆ ಅದೇನೆಂಬುದು ಅನೇಕರಿಗೆ ತಿಳಿದಿಲ್ಲ ಎಂಬುದೇ ವಾಸ್ತವ.ಥೈರಾಯ್ಡ್ ಗಂಟಲಿನಲ್ಲಿ ಕಂಡು ಬರುವ ಒಂದು ರೀತಿಯ ಗ್ರಂಥಿಯಾಗಿದೆ. ಚಿಟ್ಟೆಯ ಆಕಾರದಲ್ಲಿರುವ ಇದು ಶ್ವಾಸನಾಳವನ್ನು ಅಪ್ಪಿ ಹಿಡಿದಂತೆ ಕಾಣಿಸುತ್ತದೆ. ಗಂಟಿಲಿನ ಭಾಗದಲ್ಲಿ ಮೂಡುವ ಗ್ರಂಥಿಯನ್ನು ಥೈರಾಯ್ಡ್ ಎಂದು ಕರೆಯುತ್ತಾರೆ. ಥೈರಾಯ್ಡ್ ಬಿಡುಗಡೆ ಮಾಡುವ ಹಾರ್ಮೋನ್ ಗಳಲ್ಲಿ ವ್ಯತ್ಯಯವಾದರೆ ಹೈಪರ್ ಅಥಾವ ಹೈಫೋಥೈರಾಯ್ಡಿಸಂ ಸಮಸ್ಯೆ ಕಾಡುತ್ತದೆ.

ಆ ಸಮಸ್ಯೆ ಇರುವ ಜನರಿಗೆ ಆ ವಿಷಯವೇ ತಿಳಿದಿರುವುದಿಲ್ಲ. ಆಹಾರ ಸೇವೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದೇ ಬಹಳಷ್ಟು ವೇಗವಾಗಿ ತೂಕ ಹೆಚ್ಚುವುದನ್ನು ಹೈಫೋಥೈರಾಯ್ಡಿಸಂ ಎನ್ನುತ್ತಾರೆ. ಹೈಫೋಥೈರಾಯ್ಡಿಸಂನಲ್ಲಿ ಮಾನಸಿಕ ಆಂದೋಲನಗಳು ಕೂಡ ಬಹಳಷ್ಟು ಕಂಡು ಬರುತ್ತವೆ. ಸಮಸ್ಯೆಯನ್ನು ಗುರುತಿಸುವುದರಲ್ಲಿ ತಡವಾದರೆ ಸ್ಥೂಲಕಾಯದ ಜೊತೆಗೆ ಹೃದಯ ರೋಗಗಳು ಮತ್ತು ಕೂದಲು ಉದುರುವುದು, ಲೈಂಗಿಕ ಸಮಸ್ಯೆಗಳು, ಬಂಜೆತನ ಉಂಟಾಗುತ್ತದೆ.

ಗಂಟಲಿನ ಗಡ್ಡೆ: ಥೈರಾಯ್ಡ್ ಸಮಸ್ಯೆ ಕಾಡುವ ಮುಂಚೆ ಗಂಟಲ ಭಾಗದಲ್ಲಿ ಗಡ್ಡೆ ರೂಪದಲ್ಲಿ ಕಾಣುತ್ತದೆ. ಈ ವೇಳೆ ವೈದ್ಯರನ್ನು ಸಂಪರ್ಕಿಸಿ ಇದು ಕ್ಯಾನ್ಸರ್ ಲಕ್ಷಣವೇ ಎಂದು ಖಚಿತಪಡಿಸಿಕೊಳ್ಳಿ.
ಮಲಬದ್ಧತೆ:ಥೈರಾಯ್ಡ್ ಹಾರ್ಮೋನ್ಗಳು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆ ನೋವು, ಮಲ ಬದ್ಧತೆಗೆ ಕಾರಣವಾಗುತ್ತದೆ.

ಹೆಚ್ಚುನಿದ್ದೆ : ಥೈರಾಯ್ಡ್ ಸಮಸ್ಯೆಯ ಪ್ರಾರಂಭವಾಗುವ ಮುನ್ನ ಅತಿಯಾಗಿ ನಿದ್ದೆ ಮಾಡುವುದು ಅಥವಾ ಸುಸ್ತಾಗುವುದು ಕಾರಣವಾಗುತ್ತದೆ. ಕೂದಲು ಉದುರುವುದು ಕೂಡ ಥೈರಾಯ್ಡ್ ಸಮಸ್ಯೆಯ ಲಕ್ಷಣವಾಗಿದೆ. ಥೈರಾಯ್ಡ್ ಸಮಸ್ಯೆ ಕಾಡುವಾಗ ಆಹಾರ ಸೇವಿಸಲು ಕಷ್ಟವಾಗುತ್ತದೆ.

ಸ್ನಾಯು ದೌರ್ಬಲ್ಯ ಮತ್ತು ನಡುಕ.. ಅನಿಯಮಿತ ಮುಟ್ಟಿನ ಅವಧಿಯನ್ನು ಅಥವಾ ನಿಮ್ಮ ಋತುಚಕ್ರವನ್ನು ನಿಲ್ಲಿಸುವುದು. ದೃಷ್ಟಿ ತೊಂದರೆ ಅಥವಾ ಕಣ್ಣಿನ ಕಿರಿ ಕಿರಿ. ನಾಡಿ ವೇಗ ಹೆಚ್ಚಾಗುವುದು, ಕೈ ಕಾಲು ನಡುಗುವುದು, ಸ್ವಲ್ಪ ಬಿಸಿಯೂ ತಡೆಯಲಾಗದೆ ಇರುವುದು, ಪುನಃ ಪುನಃ ಬೆವರು ಬರುವುದು. ನೀರಾದ ಭೇದಿ ಆಗುವುದು ಇತ್ಯಾದಿ ಲಕ್ಷಣಗಳು ಕಂಡು ಬರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: