WhatsApp Group Join Now
Telegram Group Join Now

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

ಆತ್ಮೀಯ ಓದುಗರೇ ಆರೋಗ್ಯವೇ ಭಾಗ್ಯ ಎನ್ನುವ ಗಾದೆ ಮಾತನ್ನು ನೀವೆಲ್ಲ ಕೇಳುತ್ತೀರಿ. ಹೌದು ಆರೋಗ್ಯ ಇಲ್ಲದಿದ್ದ ಮೇಲೆ ಸಂಪತ್ತು, ಅದೃಷ್ಟ, ಐಶ್ವರ್ಯ ಇದರೆ ಪ್ರಯೋಜನವೇನು? ಆರೋಗ್ಯ ಭಾಗ್ಯಕ್ಕಿಂತ ಇನ್ನೊಂದು ಭಾಗ್ಯವಿಲ್ಲ. ಉತ್ತಮ ಆರೋಗ್ಯಕ್ಕೆ ಜೀವನದಲ್ಲಿ ಯಾವುದೂ ಸರಿಸಾಟಿಯಾಗಲಾರದು. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಉತ್ತಮವಾಗಿರುವವನೇ ನಿಜವಾದ ಸುಖಿ. ಹೊಸ ವರ್ಷದಲ್ಲಿ ಎಲ್ಲರೂ ಆಯುರಾರೋಗ್ಯವನ್ನೂ ಬಹು ಮುಖ್ಯವಾಗಿ ಬಯಸುತ್ತಿದ್ದಾರೆ. ಹಾಗಾದರೆ ಜ್ಯೋತಿಷ್ಯದ ಪ್ರಕಾರ ವಿಭಿನ್ನ ರಾಶಿಯ ವ್ಯಕ್ತಿಗಳಿಗೆ 2021ರಲ್ಲಿ ಆರೋಗ್ಯ ಭಾಗ್ಯ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ: ಮೇಷ ರಾಶಿಯವರ ಆರೋಗ್ಯ ಜಾತಕ 2021 ನ್ನು ನೋಡಿದಲ್ಲಿ, ಹೊಸ ವರ್ಷದಲ್ಲಿ ಮೇಷ ರಾಶಿಯವರಿಗೆ ಉತ್ತಮ ಆರೋಗ್ಯ ಭಾಗ್ಯದ ಯೋಗವಿದೆ ಎಂಬುದನ್ನು ತಿಳಿದುಬರುತ್ತದೆ. ಆಗಾಗ ಸಣ್ಣ ಸಣ್ಣ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರುತ್ತದೆ. ಪ್ರಮುಖ ಆರೋಗ್ಯ ಸಮಸ್ಯೆ ಉದ್ಭವಿಸುವುದಿಲ್ಲ. ನಿಮ್ಮ ಹತ್ತನೇ ಮನೆಯಲ್ಲಿ ಶನಿ ಗ್ರಹ ಇರುವುದರಿಂದ ಈ ವರ್ಷದ ನಿಮ್ಮ ಕೆಲಸದಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಶನಿಯ ಸ್ಥಾನದ ಪ್ರಭಾವದಿಂದಾಗಿ ಅತಿಯಾದ ಕೆಲಸ ಕಾರ್ಯಗಳಲ್ಲಿ ನೀವು ಬ್ಯುಸಿಯಾಗಲಿರುವುದರಿಂದ ಕೆಲ ಬಾರಿ ದೈಹಿಕ ಹಾಗೂ ಮಾನಸಿಕ ಬಳಲಿಕೆ ಉಂಟಾಗಬಹುದು.

ವೃಷಭ: ವೃಷಭ ರಾಶಿಯವರಿಗೆ ಆರೋಗ್ಯ ಜಾತಕ 2021 ರಲ್ಲಿ ಮಂಗಳನ್ನು ನಿಮ್ಮ ಹನ್ನೆರಡನೇ ಮನೆಯಲ್ಲಿ ಚಾಲಿಸುತ್ತಾನೆ. ಸೂರ್ಯನು ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಚಾಲಿಸುತ್ತಾನೆ. ಗ್ರಾಹಗಳ ಈ ಚಲನೆಯಿಂದಾಗಿ ನಿಮಗೆ ಕೆಲ ಆರೋಗ್ಯ ಸಮಸ್ಯೆಗಳು ಕಾಣಬಹುದು. ತೀವ್ರ ಜ್ವರ, ತಲೆನೋವು, ಗಾಯ ಅಥವಾ ರಕ್ತ ಸಂಬಂಧಿ ಸಮಸ್ಯೆಗಳು ಪ್ರಮುಖವಾಗಿ ನಿಮಗೆ ಕಾಣಿಸಬಹುದು. ವರ್ಷದ ಮಧ್ಯದಲ್ಲಿ ಅಂದರೆ ಏಪ್ರಿಲ್ ನಿಂದ ಮೇ ತಿಂಗಳಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಒಟ್ಟಾರೆಯಾಗಿ 2021 ರಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೀವು ಒಂದಷ್ಟು ಹೆಚ್ಚಿನ ಪ್ರಯತ್ನ ಮಾಡುವುದು ಒಳ್ಳೆಯದು.

ಮಿಥುನ: ಮಿಥುನ ರಾಶಿಯವರಿಗೆ ಆರೋಗ್ಯ ಜಾತಕ ಈ ವರ್ಷ ನಿಮಗೆ ಒಂದಷ್ಟು ಪ್ರತಿಕೂಲವಾಗಿದೆ ಎಂದು ತಿಳಿಯುತ್ತದೆ. ದೈಹಿಕವಾಗಿ ಹೆಚ್ಚು ಶ್ರಮ ಪಡದ ಮಿಥುನ ರಾಶಿ ವ್ಯಕ್ತಿಗಳಿಗೆ ಈ ವರ್ಷ ಅನಾರೋಗ್ಯ ಹೆಚ್ಚಾಗಿ ಕಂಡುಬರುತ್ತದೆ. ನಿಮ್ಮ ರಾಶಿಯ ಎಂಟನೇ ಮನೆಯಲ್ಲಿ ಶನಿಯು ಚಲಿಸುತ್ತಿದ್ದು. ಎಂಟನೇ ಮನೆಯಲ್ಲಿ ಶನಿಯ ಚಲನೆಯು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ವರ್ಷ ದುದ್ದಕ್ಕೂ ಕಣ್ಣಿನ ಸೋಂಕು, ನಿದ್ರಾಹೀನತೆ, ಅಜೀರ್ಣ ಮುಂತಾದ ಸಮಸ್ಯೆಗಳು ಕಾಡುವ ಸಂಭವವಿದೆ. ಹೀಗಾಗಿ ನಿಮ್ಮ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಿ.

ಕರ್ಕ: ಕರ್ಕ ರಾಶಿಯವರ ಆರೋಗ್ಯ ಜಾತಕ ಈ ವರ್ಷ ಆರೋಗ್ಯದ ದೃಷ್ಟಿಯಿಂದ ನಿಮಗೆ ಸಾಮಾನ್ಯವಾಗಿರಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡಲು ಏನೂ ಇಲ್ಲ ಮತ್ತು ನೀವು ಸಂತೋಷದಿಂದ ಬದುಕಬಹುದು. ಈ ವರ್ಷ ನಿಮಗೆ ಜಾಸ್ತಿ ಕಾಯಿಲೆಗಳ ಕಾಟ ಇರುವುದಿಲ್ಲ. ನಿಮ್ಮ ರಾಶಿಯ ಏಳನೇ ಮನೆಯಲ್ಲಿ ಶನಿ ಮತ್ತು ಗುರು ಗ್ರಹಗಳ ಸಂಯೋಜನೆಯು ಸೌಮ್ಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸೆಪ್ಟೆಂಬರ್ ಮಧ್ಯದಿಂದ ನವೆಂಬರ್ ಮಧ್ಯದವರೆಗೆ ಆರೋಗ್ಯ ತೊಂದರೆಗಳು ಹೆಚ್ಚಾಗಬಹುದು. ಈ ಅವಧಿಯಲ್ಲಿ ನೀವು ಉತ್ತಮ ಸಮತೋಲಿತ ಆಹಾರ ಸೇವಿಸಿ ಹಾಗೂ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ.

ಸಿಂಹ: ಸಿಂಹ ರಾಶಿಯವರ ಆರೋಗ್ಯ ಜಾತಕ ಈ ವರ್ಷ ನಿಮ್ಮ ಆರೋಗ್ಯವು ಏರಿಳಿತಗಳಿಂದ ಕೂಡಿರುತ್ತದೆ. ವರ್ಷದ ಆರಂಭದಲ್ಲಿ ಕೇತು ನಿಮ್ಮ ನಾಲ್ಕನೇ ಮನೆಯಲ್ಲಿ ಇರುತ್ತಾನೆ. ಇದರಿಂದಾಗಿ ನಿಮ್ಮ ಎದೆಯಲ್ಲಿ ಸ್ವಲ್ಪ ಬಿಗಿತವನ್ನು ನೀವು ಅನುಭವಿಸಬಹುದು. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ನೋಡಿದಲ್ಲಿ ಆರೋಗ್ಯದ ದೃಷ್ಟಿಯಿಂದ ನೀವು ಅವಕಾಶ ಹಾಗೂ ಸವಾಲು ಎರಡನ್ನೂ ಎದುರಿಸುವಿರಿ. ಈ ವರ್ಷ ನೀವು ಮೂತ್ರಪಿಂಡ, ದೊಡ್ಡ ಕರುಳು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಗಾಳಿಯಿಂದ ಹರಡುವ ರೋಗಗಳು, ಕೀಲು ನೋವು ಅಥವಾ ಮಧುಮೇಹದಿಂದ ಬಳಲುತ್ತಿರುವ ಜನರು ಹೆಚ್ಚು ಜಾಗರೂಕರಾಗಿರಬೇಕು. ವರ್ಷದ ಉತ್ತರಾರ್ಧವು ಆರೋಗ್ಯದ ವಿಷಯದಲ್ಲಿ ತುಲನಾತ್ಮಕವಾಗಿ ಫಲಪ್ರದವಾಗಿರುತ್ತದೆ.

ಕನ್ಯಾ: ಕನ್ಯಾ ರಾಶಿಯವರ ಆರೋಗ್ಯ ಜಾತಕ ಈ ವರ್ಷ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಮೂರನೇ ಮನೆಯಲ್ಲಿರುವ ಕೇತು ಧೈರ್ಯ ಮತ್ತು ಬುದ್ಧಿವಂತಿಕೆಗಳನ್ನು ಹೆಚ್ಚಿಸಿ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಬಲಪಡಿಸುತ್ತಾನೆ. ಹೀಗಾಗಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಎದುರಿಸಲು ನೀವು ಸಿದ್ಧರಾಗಿರುತ್ತೀರಿ. ಈ ವರ್ಷ ನಿಮ್ಮ ಚುರುಕುತನ ಮತ್ತು ಉತ್ತಮ ಆರೋಗ್ಯದ ಹಿಂದಿನ ಕಾರಣವೇ ಇದು ಎಂಬುದು ಗೊತ್ತಿರಲಿ. ಈ ಸಮಯದಲ್ಲಿ ಗ್ಯಾಸ್ಟ್ರಿಕ್, ಅಜೀರ್ಣ, ಪೀತ್ತ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಟ್ಟಾರೆಯಾಗಿ ಈ ವರ್ಷ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ತುಲಾ: ತುಲಾ ರಾಶಿಯವರ ಆರೋಗ್ಯ ಜಾತಕ ಈ ವರ್ಷದ ಆರಂಭದಲ್ಲಿ ನಿಮ್ಮ ಆರೋಗ್ಯವು ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ನೀವು ಆರೋಗ್ಯಕರ ಮತ್ತು ಸಮೃದ್ಧ ಜೀವನವನ್ನು ಆನಂದಿಸುವಿರಿ. ನಿಮ್ಮ ರಾಶಿಯ ಎರಡನೇ ಮನೆಯಲ್ಲಿ ಕೇತು ಮತ್ತು ಎಂಟನೇ ಮನೆಯಲ್ಲಿ ರಾಹು ಇರುವುದರಿಂದ, ಅಸಮತೋಲಿತ ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಕಾರಣದಿಂದ ಕೆಲ ಸೌಮ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ತೀರಾ ಗಂಭೀರವಾದ ಯಾವುದೇ ಆರೋಗ್ಯ ಸಮಸ್ಯೆಗಳು ಬಾಧಿಸಲಾರವು. ವೃಶ್ಚಿಕ: ವೃಶ್ಚಿಕ ರಾಶಿಯವರ ಆರೋಗ್ಯ ಈ ವರ್ಷ ಆರೋಗ್ಯದ ದೃಷ್ಟಿಯಿಂದ ಏರಿಳಿತಗಳಿಂದ ಕೂಡಿರಲಿದೆ. ರಾಶಿಯಲ್ಲಿ ಕೇತು ಇರುವಿಕೆಯಿಂದ ಹಠಾತ್ ಕಾಯಿಲೆಗಳು ಬಾಧಿಸಬಹುದು. ಕಾಯಿಲೆಯ ಕಾರಣವನ್ನು ನಿರ್ಧರಿಸಲು ಕಷ್ಟವಾಗುವ ಸಾಧ್ಯತೆಗಳಿರುವುದರಿಂದ ಇಂಥ ಸಂದರ್ಭಗಳು ಎದುರಾದಾಗ ನೀವು ಸ್ವಲ್ಪ ತಾಳ್ಮೆಯಿಂದ ಇರಬೇಕಾಗುತ್ತದೆ. ಆದಾಗ್ಯೂ ಸಮಯ ಕಳೆದಂತೆ ಪರಿಸ್ಥಿತಿಗಳು ಸುಧಾರಿಸುತ್ತವೆ.

ಧನು: ರಾಶಿಯವರ ಆರೋಗ್ಯ ಈ ವರ್ಷ ಧನು ರಾಶಿಯವರಿಗೆ ಉತ್ತಮವಾಗಿರುತ್ತದೆ. ನಿಮ್ಮ ಹನ್ನೆರಡನೇ ಮನೆಯಲ್ಲಿರುವ ಕೇತು ನಿಮಗೆ ನಿರಂತರ ಮಾನಸಿಕ ಒತ್ತಡ ನೀಡುವನು. ಈ ಕಾರಣದಿಂದಾಗಿ ನೀವು ನಿದ್ರಾಹೀನತೆ, ಕಾಲು ನೋವು ಅಥವಾ ಕಣ್ಣು ನೋವಿನ ಸಮಸ್ಯೆ ಎದುರಿಸಬಹುದು. ನಿಮ್ಮ ರಾಶಿಯ ಅಧಿಪತಿಯಾಗಿರುವ ಗುರು ನಿಮ್ಮ ರಾಶಿಚಕ್ರದಲ್ಲಿ ಶನಿಯೊಂದಿಗೆ ಎರಡನೇ ಮನೆಯಲ್ಲಿ ಉಳಿಯುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಅನುಕೂಲಕರ ಸ್ಥಾನವೆಂದು ಪರಿಗಣಿಸಲಾಗುವುದಿಲ್ಲ. ಇದು ನೇರವಾಗಿ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರುತ್ತದೆ. ಮಕರ: ಮಕರ ರಾಶಿಯವರ ಆರೋಗ್ಯ ಈ ವರ್ಷ ನಿಮಗೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳು ಸಿಗಲಿವೆ. ಕೆಲ ಸಣ್ಣ ಪ್ರಮಾಣದ ಅನಾರೋಗ್ಯ ಕಾಡಿದರೂ ಅವು ಬೇಗನೇ ಮಾಯವಾಗಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಿಮ್ಮ ಆರೋಗ್ಯವು ಉತ್ತಮ ಮತ್ತು ಸದೃಢವಾಗಿರುತ್ತದೆ. ಇದರಿಂದ ನಿಮಗೆ ಉತ್ತಮ ಫಲಿತಾಂಶಗಳು ಸಿಗಲಿವೆ.

ಕುಂಭ:ಈ ರಾಶಿಯವರ ಆರೋಗ್ಯ ಈ ವರ್ಷವು ಆರೋಗ್ಯದ ದೃಷ್ಟಿಯಿಂದ ನಿಮಗೆ ಸಾಮಾನ್ಯವಾಗಿರಲಿದೆ. ನಿಮ್ಮ ರಾಶಿಯ ಅಧಿಪತಿಯು ಈ ವರ್ಷದುದ್ದಕ್ಕೂ ಹನ್ನೆರಡನೇ ಮನೆಯಲ್ಲಿರುವುದರಿಂದ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬರಲಿವೆ. ಈ ವರ್ಷ ನಿಮ್ಮ ಆರೋಗ್ಯವು ಸಕಾರಾತ್ಮಕ ತಿರುವು ಪಡೆಯುವುದನ್ನು ನೀವು ನೋಡುವಿರಿ. ಆದಾಗ್ಯೂ, ಕಾಲು ನೋವು, ಉಳುಕು, ಕೀಲು ನೋವು ಮುಂತಾದ ಹಲವಾರು ಸಮಸ್ಯೆಗಳು ಕಾಲಕಾಲಕ್ಕೆ ನಿಮ್ಮನ್ನು ಕಾಡುತ್ತಲೇ ಇರುತ್ತವೆ. ಮೀನ ರಾಶಿಯವರ ಆರೋಗ್ಯ ಈ ವರ್ಷವು ಉತ್ತಮವಾಗಿರುತ್ತದೆ. ಈ ವರ್ಷ ನೀವು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದಿಲ್ಲ. ನೀವು ಕೀಲು ನೋವು ಅಥವಾ ಬೆನ್ನು ನೋವುಗಳು ಕಾಡಬಹುದು. ಆದಾಗ್ಯೂ ಆರೋಗ್ಯವು ಸಾಮಾನ್ಯವಾಗಿ ವರ್ಷದುದ್ದಕ್ಕೂ ಉತ್ತಮವಾಗಿರುತ್ತದೆ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: