WhatsApp Group Join Now
Telegram Group Join Now

ಸಾಮಾನ್ಯ ಸಮಸ್ಯೆಗಲ್ಲಿ ಒಂದಾಗಿರುವಂತ ತಲೆನೋವು ಹಾಗೂ ಅರ್ಧ ತಲೆನೋವನ್ನು ನಿವಾರಿಸಲು ಪ್ರತಿದಿನ ಔಷದಿ ಮಾತ್ರೆಗಳನ್ನು ಸೇವಿಸುವ ಬದಲು ಈ ಹಸುವಿನ ತುಪ್ಪವನ್ನು ಬಳಸಿ ತಲೆನೋವನ್ನು ನಿವಾರಿಸಿಕೊಳ್ಳಬಹುದಾಗಿದೆ. ಅಷ್ಟೇ ಅಲ್ದೆ ತುಪ್ಪದ ಸೇವನೆಯಿಂದ ಸಿಗುವ ಆರೋಗ್ಯಕಾರಿ ಲಾಭಗಳೇನು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.

ಹಸುವಿನಿಂದ ಸಿಗುವಂತ ಹಾಲು ಮಜ್ಜಿಗೆ ಮೊಸರು ತುಪ್ಪ ಎಲ್ಲವು ಕೂಡ ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ. ಅದರಲ್ಲೂ ಈಗ ತಿಳಿಯುವ ವಿಚಾರ ಏನು ಅಂದ್ರೆ ತುಪ್ಪವನ್ನು ಬಳಸಿ ಅರ್ಧ ತಲೆನೋವನ್ನು ಹೇಗೆ ನಿವಾರಿಸಿಕೊಳ್ಳಬಹದು ಅನ್ನೋದನ್ನ ತಿಳಿಯೋಣ. ಒಂದು ಚಮಚ ಬೆಲ್ಲದೊಂದಿದೆ ಅರ್ಧ ಚಮಚ ತುಪ್ಪವನ್ನು ಬೆರಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಅರ್ಧ ತಲೆನೋವು ನಿವಾರಣೆಯಾಗುವುದು.

ಇನ್ನು ತುಪ್ಪ ಸೇವನೆಯಿಂದ ಸಿಗುವಂತ ಆರೋಗ್ಯಕಾರಿ ಲಾಭಗಳು ಏನು ಅನ್ನೋದಾದರೆ ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಹಾಲಿನಲ್ಲಿ ಅರ್ಧ ಚಮಚಕ್ಕಿಂತ ಕಡಿಮೆ ತುಪ್ಪವನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ, ಹಾಗೂ ಅಜೀರ್ಣತೆ ಸಮಸ್ಯೆ ಇರೋದಿಲ್ಲಜೀರ್ಣಕ್ರಿಯೆ ಸುಲಭವಾಗುತ್ತದೆ. ಮಲಬದ್ಧತೆ ಸಮಸ್ಯೆ ಇರೋರು ತುಪ್ಪವನ್ನು ಊಟದೊಂದಿಗೆ ಸೇವನೆ ಮಾಡುವುದು ಉತ್ತಮ ಮಲ ವಿಸರ್ಜನೆ ತೊಂದರೆಯಿಲ್ಲದೆ ಸರಾಗವಾಗಿ ಆಗುತ್ತದೆ. ತಿಪ್ಪ ಸೇವನೆಯಿಂದ ಮಕ್ಕಳ ಬುದ್ದಿ ಮಟ್ಟ ಬೆಳೆಯಲು ಹಾಗೂ ಸ್ಮರಣಶಕ್ತಿ ವೃದ್ಧಿಗೆ ಪೂರಕವಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: