WhatsApp Group Join Now
Telegram Group Join Now

ಸಾಧನೆ ಮಾಡಲು ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲ ಸ್ಥಾನವನ್ನು ಪಡೆದ ವಾರನ್ ಬಫೇಟ್ ಅವರ ಜೀವನ ನಮಗೆ ಮಾದರಿಯಾಗಿದೆ‌. ಅವರು ತಮ್ಮ ಒಟ್ಟು ಆಸ್ತಿಯಲ್ಲಿ 99% ಆಸ್ತಿಯನ್ನು ಸೇವಾ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ವಾರನ್ ಬಫೇಟ್ ಅವರ ಬಾಲ್ಯದ ಜೀವನ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ವಾರನ್ ಬಫೆಟ್ ಅವರು ಒಂದು ದಿನಕ್ಕೆ 240 ಕೋಟಿ ರೂಪಾಯಿ ಆದಾಯವನ್ನು ಗಳಿಸುತ್ತಾರೆ. ಇವರು 1930 ಆಗಸ್ಟ್ 30ರಂದು ಅಮೇರಿಕಾದ ಒಮಹಾ ಪಟ್ಟಣದಲ್ಲಿ ಜನಿಸಿದ್ದಾರೆ. ಇವರು ಚಿಕ್ಕವಯಸ್ಸಿನಲ್ಲಿ ಮನೆಮನೆಗೆ ನ್ಯೂಸ್ ಪೇಪರ್ ಹಾಕುವುದು, ಸ್ಟಾಂಪ್ ಮಾರುವುದು, ತಮ್ಮ ತಾತನ ಅಂಗಡಿಯಲ್ಲಿ ಕೆಲಸ ಮಾಡಿ ಸ್ವಲ್ಪ ಸ್ವಲ್ಪ ಹಣವನ್ನು ಕೂಡಿಟ್ಟಿದ್ದರು. ತಾನು ಕೂಡಿಟ್ಟ ಹಣದಿಂದ ಸಣ್ಣ ಬಿಸಿನೆಸ್ ಪ್ರಾರಂಭಿಸಿ ಬಂದ ಲಾಭದಿಂದ ತನ್ನ 14ನೇ ವಯಸ್ಸಿನಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಹಣಹೂಡಿಕೆ ಮಾಡಿದರು. ಮೊದಲು ನಷ್ಟವಾದರೂ ನಂತರ ಹೆಚ್ಚಿನ ಲಾಭ ಗಳಿಸಿದರು ವಾರನ್ ಬಫೇಟ್ ತಮ್ಮ 14ನೇ ವಯಸ್ಸಿನಲ್ಲೇ ಇನಕಮ್ ಟ್ಯಾಕ್ಸ್ ಕಟ್ಟಿದ್ದಾರೆ. ಅವರು ತಮ್ಮ 19ನೇ ವಯಸ್ಸಿನಲ್ಲಿ ಹಾರ್ವರ್ಡ್ ಯೂನಿವರ್ಸಿಟಿಗೆ ಓದಲು ಅಪ್ಲಿಕೇಷನ್ ಹಾಕಿದರು ಆದರೆ ಚಿಕ್ಕ ವಯಸ್ಸು ಎಂದು ರಿಜೆಕ್ಟ್ ಮಾಡಲಾಯಿತು. ಸ್ಟಾಕ್ ಮಾರ್ಕೆಟ್ ಬಗ್ಗೆ ಬೆಂಜಮಿನ್ ಗ್ರಾಹಮ್ ಎಂಬುವವರು ಬರೆದ ದ ಇಂಟಲಿಜೆಂಟ್ ಇನ್ವೆಸ್ಟರ್ ಪುಸ್ತಕವನ್ನು ವಾರನ್ ಬಫೇಟ್ ಚಿಕ್ಕವಯಸ್ಸಿನಲ್ಲಿಯೇ ಓದಿ ಮುಗಿಸಿದ್ದಾರೆ.

ಬೆಂಜಮಿನ್ ಗ್ರಾಹಮ್ ಅವರು ಕೋಲಂಬಿಯಾ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವುದನ್ನು ತಿಳಿದ ವಾರನ್ ಬಫೇಟ್ ಅದೇ ಯೂನಿವರ್ಸಿಟಿಗೆ ಸೇರಿಕೊಳ್ಳುತ್ತಾರೆ. ವಾರನ್ ಬಫೇಟ್ ಕಾಲೇಜಿಗೆ ಹೋಗುತ್ತಿರುವಾಗಲೇ ದಿನಕ್ಕೆ 176 ಡಾಲರ್ ಆದಾಯ ಗಳಿಸುತ್ತಿದ್ದರು. ವಾರನ್ ಬಫೇಟ್ ಅವರು 1962 ರಲ್ಲಿ ನಷ್ಟದಲ್ಲಿದ್ದ ಬರಕ್ಷೇರ ಹ್ಯಾಧವೆ ಎಂಬ ಟೆಕ್ಸಟೈಲ್ ಕಂಪನಿಯಲ್ಲಿ ಹೆಚ್ಚು ಷೇರುಗಳನ್ನು ತೆಗೆದುಕೊಂಡರು ಆಗ ಆ ಕಂಪನಿಯ ಒಂದು ಷೇರಿನ ಬೆಲೆ ಒಂದು ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಐದು ನೂರು ರೂಪಾಯಿ. ಈಗ ಆ ಕಂಪನಿಯ ಒಂದು ಷೇರಿನ ಬೆಲೆ ಒಂದು ಕೋಟಿ ಅರವತ್ತೆರಡು ಲಕ್ಷಕ್ಕಿಂತ ಅಧಿಕ. ಈಗಲೂ ಆ ಕಂಪನಿಯ ಸಿಇಓ ಆಗಿ ವಾರನ್ ಬಫೇಟ್ ಕೆಲಸ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ಕೋಕಕೋಲಾ, ಐಬಿಎಂ, ಅಮೇರಿಕನ್ ಎಕ್ಸಪ್ರೆಸ್, ಜಿಲ್ಲೆಟ್ ಹೀಗೆ ಮುಂತಾದ ಕಂಪನಿಗಳಿಗೆ ವಾರನ್ ಬಫೇಟ್ ಅವರ ಪಾಲುದಾರಿಕೆ ಇದೆ. ವಾರನ್ ಬಫೇಟ್ ಯಾವುದಾದರೂ ಕಂಪನಿಯಲ್ಲಿ ಷೇರು ತೆಗೆದುಕೊಂಡರೆ ಎಲ್ಲರೂ ಅದೇ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿದ್ದರು.

2008ರಲ್ಲಿ ಪ್ರಪಂಚದ ಅತಿ ಶ್ರೀಮಂತರಲ್ಲಿ ಮೊದಲ ಸ್ಥಾನ ಪಡೆದ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಾರನ್ ಬಫೇಟ್ ಮೊದಲ ಸ್ಥಾನವನ್ನು ಪಡೆದರು. ಪ್ರಪಂಚದ ನಂಬರ್ ಒನ್ ಶ್ರೀಮಂತ ವ್ಯಕ್ತಿಗಳಾದವರು ಐಷಾರಾಮಿ ಕಾರು, ಮನೆಗಳನ್ನು ಹೊಂದಿರುತ್ತಾರೆ ಆದರೆ ವಾರನ್ ಬಫೇಟ್ ಅವರು ಒಂದು ಹಳೆಯ ಮನೆಯಲ್ಲಿ ವಾಸ ಮಾಡುತ್ತಾರೆ, ಅವರ ಮನೆಗೆ ಸೆಕ್ಯೂರಿಟಿ ಇಲ್ಲ ಅವರು ಸೆಕೆಂಡ್ ಹ್ಯಾಂಡ್ ಕಾರನ್ನು ಬಳಸುತ್ತಾರೆ ಅಲ್ಲದೆ ಕಾರಿಗೆ ಡ್ರೈವರ್ ಇರುವುದಿಲ್ಲ, ಇವರೆ ಕಾರನ್ನು ಡ್ರೈವ್ ಮಾಡುತ್ತಾರೆ. ಇವರು ನೆಟ್ ಜೆಟ್ಸ್ ಎಂಬ ಒಂದು ದೊಡ್ಡ ವಿಮಾನ ಕಂಪನಿಗೆ ಅಧಿಪತಿಯಾಗಿದ್ದರೂ ತಮ್ಮ ಸ್ವಂತ ಕೆಲಸಕ್ಕೆ ಒಮ್ಮೆಯೂ ವಿಮಾನವನ್ನು ಬಳಸಲಿಲ್ಲ. ವಾರನ್ ಬಫೇಟ್ ನಿನಗೆ ಬೇಡದಿರುವುದೆಲ್ಲವನ್ನು ತೆಗೆದುಕೊಳ್ಳುತ್ತಾ ಹೋದರೆ ಕೊನೆಗೆ ಬೇಕಾಗಿರುವುದನ್ನು ಮಾರಬೇಕಾಗುತ್ತದೆ ಎಂದು ಹೇಳುತ್ತಾರೆ. ಬಿಲ್ ಗೇಟ್ಸ್ ಅವರು ಒಮ್ಮೆ ವಾರನ್ ಬಫೇಟ್ ಅವರನ್ನು ಭೇಟಿ ಮಾಡುತ್ತಾರೆ. ಕಾಮನ್ ಮ್ಯಾನ್ ಆಗಿ ಕಾಣುವ ವಾರನ್ ಬಫೇಟ್ ಅವರ ಹತ್ತಿರ ಹತ್ತು ನಿಮಿಷ ಮಾತ್ರ ಮಾತನಾಡಬೇಕೆಂದು ಬಿಲ್ ಗೇಟ್ಸ್ ಅಂದುಕೊಳ್ಳುತ್ತಾರೆ ಆದರೆ ವಾರನ್ ಅವರ ಮಾತಿನ ಶೈಲಿಯಿಂದ ಪ್ರಭಾವಿತರಾಗಿ ಬಿಲ್ ಗೇಟ್ಸ್ ಅವರು ಹತ್ತು ಗಂಟೆಗಳ ಕಾಲ ವಾರನ್ ಬಫೇಟ್ ಅವರೊಂದಿಗೆ ಸಮಯ ಕಳೆಯುತ್ತಾರೆ. ಈಗಲೂ ಬಿಲ್ ಗೇಟ್ಸ್ ಹಾಗೂ ವಾರನ್ ಬಫೇಟ್ ಒಳ್ಳೆಯ ಸ್ನೇಹಿತರು ಅಷ್ಟೇ ಅಲ್ಲದೆ ಬಿಲ್ ಗೇಟ್ಸ್ ಅವರು ನಡೆಸುತ್ತಿರುವ ಬಿಲ್ ಅಂಡ್ ಮಿಲಿಂದ ಗೇಟ್ಸ್ ಎಂಬ ಫೌಂಡೇಷನ್ ಗೆ ವಾರನ್ ಬಫೇಟ್ ಸುಮಾರು 40 ಮಿಲಿಯನ್ ಡಾಲರ್ ಸಹಾಯ ಮಾಡಿದ್ದಾರೆ.

ವಾರನ್ ಬಫೇಟ್ ಅವರು ತಮ್ಮ ವಿಶೇಷ ನೈಪುಣ್ಯತೆಯಿಂದ ಶ್ರೀಮಂತರಾದರು. ಅವರು ಅತಿ ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದರು ಅವರು ಒಂದು ದಿನದಲ್ಲಿ 70% ಸಮಯವನ್ನು ಪುಸ್ತಕಗಳನ್ನು ಓದಲು ಮೀಸಲಿಡುತ್ತಾರೆ. 2017ರಲ್ಲಿ ಫೋರ್ಬ್ಸ್ ಪತ್ರಿಕೆಯ ವರದಿಯ ಪ್ರಕಾರ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಎರಡನೇ ಸ್ಥಾನವನ್ನು ವಾರನ್ ಬಫೇಟ್ ಅವರು ಪಡೆದಿದ್ದರು, ಆಗ ವಾರೆನ್ ಬಫೇಟ್ ಅವರ ಆಸ್ತಿ ನಾಲ್ಕು ಲಕ್ಷದ ತೊಂಭತ್ತು ಸಾವಿರ ಕೋಟಿ ರೂಪಾಯಿ. 2020ರಲ್ಲಿ ಫೋರ್ಬ್ಸ್ ಪತ್ರಿಕೆಯ ವರದಿಯ ಪ್ರಕಾರ ವಾರನ್ ಬಫೇಟ್ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ. ಅವರು ಸತ್ತನಂತರ ಆಸ್ತಿಯಲ್ಲಿ 99% ಆಸ್ತಿ ಸೇವಾ ಸಮಾಜಗಳಿಗೆ ಹೋಗಬೇಕು ಎಂದು ವಿಲ್ ಬರೆದಿದ್ದಾರೆ. ನಿಜಕ್ಕೂ ಅದ್ಬುತ, ಸರಳ, ವಿಶೇಷ ವ್ಯಕ್ತಿ ವಾರನ್ ಬಫೇಟ್.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: