WhatsApp Group Join Now
Telegram Group Join Now

ಕೆಲವು ದಿನಗಳಿಂದ ಭಾರತದಲ್ಲಿ ಕೊರೋನ ಎರಡನೆ ಅಲೆಯ ಕಾರಣದಿಂದಾಗಿ ಭಾರತದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಸಮಯದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಲೆಂಡರ್ ಇಲ್ಲದೆ ಸಾಕಷ್ಟು ಜನ ಪರದಾಡುತ್ತಿದ್ದಾರೆ, ಕೆಲವರು ಸಾಯುತ್ತಿದ್ದಾರೆ. ಅಷ್ಟೆ ಅಲ್ಲದೆ ಬಡವರು ಹಾಗೂ ದಿನಗೂಲಿ ಕಾರ್ಮಿಕರು ತಮ್ಮ ಪ್ರತಿನಿತ್ಯದ ಹೊಟ್ಟೆಪಾಡಿಗಾಗಿ ಅಲೆದಾಡುತ್ತಿದ್ದಾರೆ. ಇಂಥಹ ಸಂದಿಗ್ಧ ಸಮಯದಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ಅನೇಕ ಸೆಲೆಬ್ರಿಟಿಗಳು ಬಡವರಿಗೆ ಹಾಗೂ ದಿನಗೂಲಿ ಕಾರ್ಮಿಕರಿಗೆ ದಿನಸಿ ಸಾಮಾನುಗಳನ್ನು ಹಾಗೂ ಆರ್ಥಿಕ ಸಹಾಯ ನೀಡುವುದರ ಮೂಲಕ ನೆರವಿಗೆ ನಿಂತಿದ್ದಾರೆ. ವಿಶೇಷವೆಂದರೆ ಕೇವಲ ಭಾರತೀಯರಷ್ಟೇ ಅಲ್ಲದೆ ದೇಶ-ವಿದೇಶಗಳಿಂದ ಕೂಡ ಭಾರತಕ್ಕೆ ಕೊರೋನ ವಿರುದ್ಧ ಹೋರಾಡಲು ಆರ್ಥಿಕವಾಗಿ ಹಾಗೂ ವೈದ್ಯಕೀಯವಾಗಿ ನೆರವು ನೀಡುತ್ತಿದ್ದಾರೆ. ಅದೆ ರೀತಿ ಇದೀಗ 27 ವರ್ಷದ ಯುವಕನೊಬ್ಬ ಭಾರತಕ್ಕೆ ಎಂಟು ಲಕ್ಷ ಕೋಟಿ ರೂಪಾಯಿಗಳನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಅವರು ಯಾರು, ಏನು ಕೆಲಸ ಮಾಡುತ್ತಿದ್ದಾರೆ ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಇದು ಅಚ್ಚರಿಯೆನಿಸಿದರೂ ಕೂಡ ಸತ್ಯವಾದುದು. ಕೊರೋನ ವೈರಸ್ ನಮ್ಮ ದೇಶದಲ್ಲಿ ರಣಕೇಕೆ ಹಾಕುತ್ತಿದೆ. ರಷ್ಯಾ ಮೂಲದ 27 ವರ್ಷದ ಯುವಕ ಭಾರತಕ್ಕೆ 8 ಲಕ್ಷ ಕೋಟಿ ರೂಪಾಯಿ ದಾನವಾಗಿ ನೀಡಿದ್ದಾರೆ. ಈತನ ಹೆಸರು ವಿತಾಲಿಕ್ ಬ್ಯುಟೇರಿನ್. ಇವರು ರಷ್ಯ ಮೂಲದವರಾದರೂ ಕೂಡ ಈಗ ಕೆನಡಾ ದೇಶದಲ್ಲಿ ವಾಸವಿದ್ದಾರೆ. ಅವರು ಭಾರತಕ್ಕೆ 1.4 ಶತಕೋಟಿ ಡಾಲರ್ ಅಂದರೆ ಸುಮಾರು ಎಂಟು ಲಕ್ಷ ಕೋಟಿ ರೂಪಾಯಿಯನ್ನು ದಾನವಾಗಿ ನೀಡಿದ್ದಾರೆ. ಇವರು ಕೆನಡಾ ದೇಶದಲ್ಲಿ ಕ್ರಿಪ್ಟೋ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಟ್ ಕಾಯಿನ್ ಕರೆನ್ಸಿ ತರ ಈತ ಇಥೀರಿಯಮ್ ಎಂಬ ಕ್ರಿಪ್ಟೋ ಕರೆನ್ಸಿಯನ್ನು ಹುಟ್ಟುಹಾಕಿದವರು. ನಂತರ ಇದರ ಮೇಲೆ ಒಂದು ಕಂಪನಿಯನ್ನು ಕೂಡ ಹುಟ್ಟುಹಾಕಿ ಇದೀಗ ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಅವರ ತಂದೆ ಕಂಪ್ಯೂಟರ್ ಎಂಜಿನಿಯರ್. ವಿತಾಲಿಕ್ ಆರು ವರ್ಷದವರಿದ್ದಾಗಲೆ ರಷ್ಯ ಬಿಟ್ಟು ಕೆನಡಾದಲ್ಲಿ ಬಂದು ನೆಲೆಸಿದರು. ಬಾಲ್ಯದಲ್ಲಿಯೆ ಚುರುಕಾಗಿದ್ದ ಇವರನ್ನು ಇವರ ತಂದೆ ಶಾಲೆ ಬಿಡಿಸಿ ಹಲವಾರು ರೀತಿಯ ಕಂಪ್ಯೂಟರ್ ಕೋರ್ಸ್ ಗಳನ್ನು ಕಲಿಸಿದರು. ನಂತರ ವಿತಾಲಿಕ್ ಅವರು ಅನೇಕ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದರು. 17ನೇ ವಯಸ್ಸಿಗೆ ಇವರ ತಂದೆ ಕ್ರಿಪ್ಟೋ ಕರೆನ್ಸಿ ಪರಿಚಯ ಮಾಡಿಸಿಕೊಟ್ಟರು. ನಂತರದಲ್ಲಿ ಇಂತಹ ಕರೆನ್ಸಿಯಲ್ಲಿ ಆಸಕ್ತಿ ಬೆಳೆಸಿಕೊಂಡ ವಿತಾಲಿಕ್ ಅವರು ನಂತರದ ದಿನಗಳಲ್ಲಿ ತಮ್ಮದೆ ಆದ ಕರೆನ್ಸಿಯನ್ನು ಹುಟ್ಟುಹಾಕಿದರು. 2018 ರಿಂದ ಈಚೆಗೆ ಇವರು ಬಿಲಿಯನಿಯರ್ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ. 40 ಹಾಗೂ 30 ವರ್ಷ ವಯಸ್ಸಿನೊಳಗಿನವರ ಬಿಲಿಯನಿಯರ್ ವ್ಯಕ್ತಿಗಳ ಪಟ್ಟಿಯಲ್ಲಿ ಇವರ ಹೆಸರು ಕೂಡ ಸ್ಥಾನ ಪಡೆದಿದೆ. ಚಿಕ್ಕವಯಸ್ಸಿನಲ್ಲಿಯೆ ಹೆಸರು ಮಾಡಿರುವ ಇವರ ಮನಸ್ಸು ಕೂಡ ಅಷ್ಟೆ ದೊಡ್ಡದಾಗಿದೆ. ಇನ್ನು ಭಾರತಕ್ಕೆ 8 ಲಕ್ಷ ಕೋಟಿ ರೂಪಾಯಿಗಳನ್ನು ದಾನವಾಗಿ ನೀಡುವುದರ ಮೂಲಕ ಅವರ ವಿಶಾಲ ಹೃದಯವನ್ನು ಸಾಬೀತುಪಡಿಸಿದ್ದಾರೆ. ತನ್ನ 27 ನೇ ವಯಸ್ಸಿನಲ್ಲಿ ಸಾಧನೆ ಮಾಡಿ, ಕಷ್ಟದಲ್ಲಿರುವ ಭಾರತದ ಸಹಾಯಕ್ಕೆ ನಿಂತ ವಿತಾಲಿಕ್ ಅವರಿಗೆ ದೇವರು ಹೆಚ್ಚಿನ ಶಕ್ತಿ ಕೊಡಲಿ ಎಂದು ಹೇಳುತ್ತಾ, ಈ ಮೂಲಕ ಧನ್ಯವಾದ ತಿಳಿಸೋಣ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: