ನಾವು ಆಹಾರವನ್ನು ಸೇವಿಸಬೇಕು ಎಂದರೆ ಬಾಯಿ ರುಚಿ ಇರಬೇಕು. ಇಲ್ಲವಾದಲ್ಲಿ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಬಾಯಿ ರುಚಿ ಬಹಳ ಮುಖ್ಯ. ಬಾಯಿ ರುಚಿ ಇಲ್ಲವೆಂದರೆ ಪದಾರ್ಥಗಳನ್ನು ಸೇವಿಸದೇ ಇದ್ದರೆ ವೀಕ್ನೆಸ್ ಉಂಟಾಗುತ್ತದೆ. ಕೆಲವರಿಗೆ ಊಟದ ಇಚ್ಛೆಯೇ ಇರುವುದಿಲ್ಲ. ಕಾರಣ ಅವರಿಗೆ ಬಾಯಿರುಚಿ ಇರುವುದಿಲ್ಲ. ಆಹಾರವನ್ನು ಸೇವನೆ ಮಾಡದಿದ್ದಲ್ಲಿ ಆರೋಗ್ಯದಿಂದ ಇರಲು ಸಾಧ್ಯವಿಲ್ಲ. ಆದ್ದರಿಂದ ನಾವು ಇಲ್ಲಿ ಬಾಯಿರುಚಿಯನ್ನು ತಂದುಕೊಳ್ಳುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನಾವು ಹೋಟೆಲ್ ಗಳಿಗೆ ಹೋದಾಗ ಸೂಪನ್ನು ಕುಡಿಯುತ್ತೇವೆ. ಆದರೆ ಅದು ಆರೋಗ್ಯವಲ್ಲ. ಆದ್ದರಿಂದ ಮನೆಯಲ್ಲಿ ಮಾಡಿಕೊಂಡು ಕುಡಿಯಬೇಕು. ಮೊದಲು ಶುಂಠಿಯನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು. ಕಾಳುಮೆಣಸನ್ನು ತೆಗೆದುಕೊಳ್ಳಬೇಕು. ಹಾಗೆಯೇ ಹುಣಸೇ ರಸವನ್ನು ತೆಗೆದುಕೊಳ್ಳಬೇಕು. ಎಲ್ಲವನ್ನೂ ಒಂದೇ ಅಳತೆಯಲ್ಲಿ ತೆಗೆದುಕೊಂಡು ನೀರನ್ನು ಜಾಸ್ತಿ ಹಾಕಿ ಮಾಡಬೇಕು. ಕೊನೆಯದಾಗಿ ಕುತ್ತುಂಬರಿ ಸೊಪ್ಪನ್ನು ಹಾಕಬೇಕು. ಸೊಪ್ಪುಗಳು ಆರೋಗ್ಯವನ್ನು ವೃದ್ಧಿಸುತ್ತದೆ.
ಇದನ್ನು ಹಸಿವಾಗದೇ ಇರುವವರಿಗೆ ಕೊಡಬೇಕು. ಚಿಕ್ಕ ಮಕ್ಕಳಿಗೆ ಬೇಕಾದರೂ ಕೊಡಬಹುದು. ಹಾಗೆಯೇ ದೊಡ್ಡವರಿಗೆ ಬೇಕಾದರೂ ಕೊಡಬಹುದು.ಅಂದರೆ ಚಿಕ್ಕವರಿಂದ ಮುದುಕರವರೆಗೂ ಇದನ್ನು ಕೊಡಬೇಕು. ಊಟ ಮಾಡುವ ಅರ್ಧ ತಾಸಿನ ಮುಂಚೆ ಇದನ್ನು ಕೊಡಬೇಕು. ಹಾಗೆಯೇ ಬೆಳ್ಳುಳ್ಳಿ ಬಹಳ ಚೆನ್ನಾಗಿ ಲಲಾರಸವನ್ನು ಉತ್ಪತ್ತಿ ಮಾಡುತ್ತದೆ. ಈ ಸೂಪನ್ನು ಕುಡಿಯುವ ಮೊದಲು ಸುಮಾರು ನಾಲ್ಕರಿಂದ ಐದು ತಾಸು ಯಾವುದೇ ಆಹಾರವನ್ನು ಸೇವನೆ ಮಾಡಿರಬಾರದು.
ಅಂದರೆ ಬೆಳಿಗ್ಗೆ ಎಂಟು ಗಂಟೆಯ ಒಳಗೆ ಉಪಹಾರವನ್ನು ಮುಗಿಸಿರಬೇಕಾಗುತ್ತದೆ. ಅದನ್ನು ಸ್ವಲ್ಪ ತಿಂದು ಸರಿಯಾಗಿ ಜೀರ್ಣ ಆಗಿರಬೇಕಾಗುತ್ತದೆ. ಸೂಪ್ ನೀರಿಗಿಂತ ಸ್ವಲ್ಪ ದಪ್ಪ ಇರಬೇಕು. ಯಾವುದೇ ರೀತಿಯಲ್ಲೂ ಪಾಯಸದ ತರ ಇರಬಾರದು. ಯಾವುದೇ ರೀತಿಯಲ್ಲೂ ಗಂಜಿಯ ತರ ಇರಬಾರದು. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ. ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಏಕೆಂದರೆ ಆರೋಗ್ಯ ನಮ್ಮ ಜನ್ಮ ಸಿದ್ಧ ಹಕ್ಕು. ಆದ್ದರಿಂದ ಸರಿಯಾದ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಳ್ಳಬೇಕು.