WhatsApp Group Join Now
Telegram Group Join Now

ಬೆಳ್ಳುಳ್ಳಿ ಇದನ್ನು ತರಕಾರಿಗಳಲ್ಲಿ ಒಂದು ಎಂದು ಹೇಳಬಹುದು. ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೆಯೇ ದೇಹದ ತೂಕವನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಹಾಗೆಯೇ ನೆಗಡಿ ಮತ್ತು ಕೆಮ್ಮು ಆದಾಗ ಇದನ್ನು ಔಷಧಿಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ ಹಸಿ ಬೆಳ್ಳುಳ್ಳಿಯನ್ನು ತಿಂದರೆ ಬಹಳ ಒಳ್ಳೆಯದು. ಆದರೆ ಹಸಿ ಬೆಳ್ಳುಳ್ಳಿಯನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಒಗ್ಗರಣೆಗೆ ಹಾಕಿ ಬಳಸುವವರೇ ಹೆಚ್ಚು. ಆದ್ದರಿಂದ ನಾವು ಇಲ್ಲಿ ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆಯುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬೆಳ್ಳುಳ್ಳಿಯ ಸಿಪ್ಪೆ ತೆಗೆಯುವುದು ಎಂದರೆ ಎಲ್ಲರಿಗೂ ದೊಡ್ಡ ಪ್ರಮಾಣದ ಸಮಸ್ಯೆಯೇ ಆಗಿದೆ. ಏಕೆಂದರೆ ಕಡಿಮೆ ಬೆಳ್ಳುಳ್ಳಿ ಇದ್ದರೆ ಕೈಯಲ್ಲಿ ಸಿಪ್ಪೆಯನ್ನು ಸುಲಿಯಬಹುದು. ಆದರೆ ತುಂಬಾ ಬೆಳ್ಳುಳ್ಳಿಯ ಅವಶ್ಯಕತೆ ಇದ್ದಾಗ ಕೈಯಲ್ಲಿ ಸುಲಿಯುವುದು ಬಹಳ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಹಲವಾರು ಸುಲಭವಾದ ವಿಧಾನಗಳು ಇವೆ. ಮೊದಲು ಇಡೀ ಬೆಳ್ಳುಳ್ಳಿಯನ್ನು ಕೈಯಲ್ಲಿ ಜಜ್ಜಿ ಒಂದೊಂದನ್ನೇ ಬಿಡಿ ಬಿಡಿಯಾಗಿ ಮಾಡಿಕೊಳ್ಳಬೇಕು.

ನಂತರದಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನು ಹಾಕಿ 5 ನಿಮಿಷಗಳ ಕಾಲ ಹಾಗೆಯೇ ಇಡಬೇಕು. ನಂತರ ಅಲ್ಲಿಯೇ ಚೆನ್ನಾಗಿ ಕೈಯಾಡಿಸಿ ಸಿಪ್ಪೆಯನ್ನು ತೆಗೆಯಬೇಕು. ಕೈಯಾಡಿಸಿದರೆ ಸಾಕು ಎಲ್ಲಾ ಬೆಳ್ಳುಳ್ಳಿ ಸಿಪ್ಪೆಗಳು ಚೆನ್ನಾಗಿ ನೀರಿನ ಮೇಲೆ ತೇಲುತ್ತವೆ. ಹಾಗೆಯೇ ಇದಕ್ಕೆ ಇನ್ನೊಂದು ವಿಧಾನವಿದೆ. ಬಿಡಿ ಬಿಡಿಯಾಗಿ ಮಾಡಿಕೊಂಡ ಬೆಳ್ಳುಳ್ಳಿಯನ್ನು ಒಂದು 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಒಂದು ಬಾಣಲೆಗೆ ಹಾಕಿ ಹುರಿಯಬೇಕು. ನಂತರ ಅದು ತಣ್ಣಗಾದ ಮೇಲೆ ಬಹಳ ಸುಲಭವಾಗಿ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿಯಬಹುದು.

ಹಾಗೆಯೇ ಬೆಳ್ಳುಳ್ಳಿ ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಬೆಳ್ಳುಳ್ಳಿ ಬೇಯಿಸಿದಾಗ ಎಲ್ಲಾ ಪೋಷಕಾಂಶಗಳು ಕಡಿಮೆಯಾಗುತ್ತವೆ. ಇದರಿಂದ ಆರೋಗ್ಯಕರ ಪ್ರಯೋಜನ ಕೂಡ ಕ್ಷೀಣಿಸುತ್ತದೆ. ಹಾಗೆಯೇ ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನೊಂದಿಗೆ ಪ್ರತಿದಿನ ಎರಡು ಮೊಗ್ಗು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹಾಗೆಯೇ ದೇಹದ ರಕ್ತ ಪರಿಚಲನೆ ಕೂಡ ಉತ್ತಮ ರೀತಿಯಲ್ಲಿ ನಡೆಯುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: