ನರೇಗಾ ಜಾಬ್ ಕಾರ್ಡ್ ಗೆ ಆನ್ಲೈನ್ ಅರ್ಜಿ ಸಲ್ಲಿಸೋದು ಹೇಗೆ?

0

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2005 ರ ಆಗಸ್ಟ್ 25 ರಂದು ಭಾರತೀಯ ಶಾಸನವನ್ನು ಜಾರಿಗೊಳಿಸಿತು. ಯಾವುದೇ ಗ್ರಾಮೀಣ ವಯಸ್ಕರ ಸದಸ್ಯರಿಗೆ ಪ್ರತಿ ಹಣಕಾಸು ವರ್ಷದಲ್ಲಿ ನೂರು ದಿನಗಳ ಉದ್ಯೋಗಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಕಾನೂನುಬದ್ಧ ಭರವಸೆ ನೀಡುತ್ತದೆ. ಶಾಸನಬದ್ಧ ಕನಿಷ್ಠ ವೇತನದಲ್ಲಿ ಸಾರ್ವಜನಿಕ ಕೆಲಸಕ್ಕೆ ಸಂಬಂಧಿಸಿದ ಕೌಶಲ್ಯರಲ್ಲದ ಕೈಪಿಡಿಯ ಕೆಲಸ ಮಾಡಲು ಸಿದ್ಧರಿದ್ದಾರೆ.ಇದನ್ನು ನರೇಗಾ ಯೋಜನೆ ಎಂದು ಕರೆಯುತ್ತಾರೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಆಯಾ ಗ್ರಾಮ ಪಂಚಾಯತ ವ್ಯಾಪ್ತಿಗಳಲ್ಲಿ ಬರುವ ಕೆಲಸಗಾರರಿಗೆ ಉದ್ಯೋಗ ನೀಡುವ ಕುರಿತಾಗಿ ಯೋಜನೆಯನ್ನು ಮಾಡಲಾಗಿದೆ. ವ್ಯಾಪ್ತಿಗಳಲ್ಲಿ ಪಂಚಾಯತ್ ನಿಂದ ದೊರೆಯುವ ಯೋಜನೆಗಳಿಗೆ ಅಲ್ಲಿಯ ಕೆಲಸಗಾರರೇ ಮಾಡುವ ಸಲುವಾಗಿ ಯೋಜನೆಯ ಸಫಲವಾಗಿದೆ. ಇದಕ್ಕಾಗಿ ಉದ್ಯೋಗ ಖಾತ್ರಿ ಜಾಬ್  ಕಾರ್ಡನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ನರೇಗಾ ಜಾಬ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಪಡೆದುಕೊಳ್ಳಬೇಕಾಗುತ್ತದೆ. ಗೂಗಲ್ ನಲ್ಲಿ ಸೇವಾ ಸಿಂಧು ಎಂಬ ಆಫೀಸಿಯಲ್ ವೆಬ್ ಸೈಟನ್ನು ಓಪನ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ನಲ್ಲಿ ಮೊದಲು ಲಾಗಿನ್ ಆಗಲು ಅವರ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು.

ಅದರಲ್ಲಿ ದೊರಕುವ ನ್ಯೂ ಯೂಸರ್ ಆಪ್ಷನ್ ಪಡೆದು ಅದರಲ್ಲಿ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆಗಬೇಕು. ಇದನ್ನು ಲಾಗಿನ್ ಆದನಂತರ ಅಪ್ಲೈ ಫಾರ್ ಸರ್ವಿಸ್ ಎಂಬ ಆಪ್ಷನ್ ಅನ್ನು ಪಡೆದುಕೊಳ್ಳಬೇಕು. ಅದನ್ನು ಕ್ಲಿಕ್ ಮಾಡಿದಾಗ ಆಲ್ ಅವೈಲೇಬಲ್ ಸರ್ವಿಸ್ ಎಂಬ ಆಪ್ಷನ್ ದೊರಕುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಸರ್ಚ್ ಎಂಬ ಆಪ್ಷನ್ ನಲ್ಲಿ ಜಾಬ್ ಕಾರ್ಡ್ ಎಂದು ಸರ್ಚ್ ಮಾಡಬೇಕು. ಅದನ್ನು ಸರ್ಚ್ ಮಾಡಿದಾಗ ಜಾಬ್ ಕಾರ್ಡ್ ಟು ಅನ್ ಸ್ಕಿಲ್ಡ್ ಲೇಬರ್ಸ್ ಅಂಡರ್ ಎಂ ಜಿ ಏನ್ ಆರ್ ಇ ಜಿ ಎಸ್  ದೊರಕುತ್ತದೆ. ಇದನ್ನು ಕ್ಲಿಕ್ ಮಾಡಿದಾಗ ನರೇಗಾ ಜಾಬ್ ಕಾರ್ಡ್ ಪಡೆಯಲು ಅಪ್ಲಿಕೇಶನ್ ದೊರಕುತ್ತದೆ.

ಅಪ್ಲಿಕೇಶನ್ನಲ್ಲಿ ಅವರ ಹೆಸರು ತಂದೆ ಹೆಸರು ಮೊಬೈಲ್ ನಂಬರ್, ಮನೆ ನಂಬರ್, ಅರ್ಜಿದಾರನ ಸ್ಥಳ, ಪಿನ್ ಕೋಡ್ ಹಾಕಿ ಓಕೆ ಎಂದು ಕ್ಲಿಕ್ ಮಾಡಬೇಕು. ನಂತರ ಎರಡನೇ ಪೇಜಿನಲ್ಲಿ ವ್ಯಕ್ತಿಯ ಜಿಲ್ಲೆ, ತಾಲೂಕು,ಪಂಚಾಯತ,ಹಾಗೂ ಅವರ ಗ್ರಾಮವನ್ನು ಸೆಲೆಕ್ಟ್ ಮಾಡಿ ನಂತರ ಫಲಾನುಭವಿಯ ವಿಧ ಎಂಬ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿಕೊಂಡು ನಂತರ ಅರ್ಜಿದಾರನ ಡೇಟ್ ಆಫ್ ಬರ್ತ್ ಮತ್ತು ವಯಸ್ಸು ಹಾಕಿ ಲೇಡೀಸ್ ಅಥವಾ ಜೆಂಟ್ಸ್ ಎಂಬ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ ಅಥವಾ ಮ್ಯಾರಿಡ್ ಅಥವಾ ಆನ್ಮೇರಿಡ್ ಎಂಬುದನ್ನು ಸೆಲೆಕ್ಟ್ ಮಾಡಿ, ವಿಕಲಚೇತನರ ಆಗಿದ್ದರೆ ಹೌದು ಎಂದು ಸೆಲೆಕ್ಟ್ ಮಾಡಿ, ಮಾಜಿ ಸೈನಿಕನ ಆಗಿದ್ದಲ್ಲಿ ಹೌದು ಎಂದು ಸೆಲೆಕ್ಟ್ ಮಾಡಿ ಅವರ ಕುಟುಂಬದ ಜನ ಸಂಖ್ಯೆ ಜೊತೆಗೆ ಕುಟುಂಬದ ಒಟ್ಟು ಆದಾಯವನ್ನು ಎಂಟ್ರಿ ಮಾಡಬೇಕು.

ನಂತರ ಅವರ ಜಾತಿಯನ್ನು ಎಂಟ್ರಿ ಮಾಡಿ ಧರ್ಮ ಯಾವುದು ಎಂದು ಸೆಲೆಕ್ಟ್ ಮಾಡಿ ನಂತರ ರೇಷನ್ ಕಾರ್ಡ್ ಬಿ ಪಿ ಏಲ್ ಅಥವಾ ಎ ಪಿ ಏಲ್ ಎಂದು ಸೆಲೆಕ್ಟ್ ಮಾಡಿ ಅದರ ನಂಬರ್ ಎಂಟ್ರಿ ಮಾಡಬೇಕು. ಓಟರ್ ಐಡಿ ಕಾರ್ಡ್ ನಂಬರ್ ಹಾಕಿ ನಂತರ ಆರ್ ಆರ್ ನಂಬರ್ ಇದ್ದಲ್ಲಿ ಎಸ್ ಎಂದು ಸೆಲೆಕ್ಟ್ ಮಾಡಿ ನಂತರ ಅದರಲ್ಲಿ ತೋರಿಸುವ ಕ್ಯಾಪ್ಟರ್ ಕೋಡ್ ಅನ್ನು ಹಾಕಿ ಸಬ್ಮಿಟ್ ಎಂತು ಕೊಡಬೇಕು. ಇದನ್ನು ಕೊಟ್ಟಾಗ ಅವರು ತುಂಬಿದ ಡೀಟೇಲ್ಸ್ ಅನ್ನು ತೋರಿಸುತ್ತದೆ. ಅದನ್ನು ನೋಡಿ ನಂತರ ಅದರಲ್ಲಿ ಕೊಟ್ಟಿರುವ ರೆಫರ್ನಸ್ ನಂಬರ್ ಅನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ಅಟ್ಯಾಚ್ ಅನ್ನೆಕ್ಸರ್ ಎಂಬ ಆಪ್ಷನ್ ಸೆಲೆಕ್ಟ್ ಮಾಡಿದಾಗ ಅದರಲ್ಲಿ ಎಜ್ ಪ್ರೂಫ್ ಹಾಕು ಬ್ಯಾಂಕ್ ಪಾಸಬುಕ್ ಡೀಟೇಲ್ಸ್, ಕ್ಯಾಸ್ಟ್ ಸೇರ್ಟಿಫಿಕೇಟ್, ಫ್ಯಾಮಿಲಿ ಫೋಟೋ, ಐಡೆಂಟಿಟಿ ಫ್ರೂಫ್, ಪಾಸ್ಪೋರ್ಟ್ ಸೈಜ್ ಫೋಟೋ, ರೇಷನ್ ಕಾರ್ಡ್, ಟ್ಯಾಕ್ಸ್ ಪೇಡ ರಿಸೀಪ್ಟ್ ಎಲ್ಲವನ್ನು ಅಪ್ಲೋಡ್ ಮಾಡಿ ಸೇವ್ ಎಂಬ ಆಪ್ಷನ್ ಕ್ಲಿಕ್ ಮಾಡಿದಾಗ ತುಂಬಿದ ಡೀಟೇಲ್ಸ್ ತೋರಿಸುತ್ತದೆ.

ಅದನ್ನು ಒಮ್ಮೆ ಚೆಕ್ ಮಾಡಿಕೊಂಡು ನಂತರ ಸಭ್ಮಿಟ್ ಎಂಬ ಆಪ್ಷನ್ ಕ್ಲಿಕ್ ಮಾಡಿದಾಗ ಓ ಟಿ ಪಿ  ಆಪ್ಷನ್ ಕೇಳುತ್ತದೆ. ಅದನ್ನು ಕೊಟ್ಟಾಗ ಆಧಾರ ಕಾರ್ಡ್ ನಂಬರ್ ಎಂಟ್ರಿ ಮಾಡಿ ಗೆಟ್ ಓ ಟಿ ಪಿ ಎಂದು ಕ್ಲಿಕ್ ಮಾಡಿದಾಗ ಒಟಿಪಿ ಬರುತ್ತದೆ ಅದನ್ನು ಎಂಟ್ರಿ ಮಾಡಿ ಸಬ್ಮಿಟ್ ಎಂದು ಕೊಟ್ಟಾಗ ಆನ್ಲೈನ್ ಮೂಲಕ ಅದರ ಫೀಸ್ ಅನ್ನು ತುಂಬಿ ಅದರ ಫ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಬೇಕು. ಹೀಗೆ ಆನ್ಲೈನ್ ಮೂಲಕ ನರೇಗಾ ಜಾಬ್ ಕಾರ್ಡ್ ರಿಜಿಸ್ಟರೆಷನ್ ಮಾಡಬಹುದು.

Leave A Reply

Your email address will not be published.

error: Content is protected !!