44 ನೇ ವಯಸ್ಸಿನಲ್ಲಿ ಪ್ರೇಮ ಮಾಡುವೆ ನಾ? ಹುಡುಗ ಯಾರು

0

ನೋಡಿದ ತಕ್ಷಣ ಮನೆ ಮಗಳು ಎನಿಸುವಂತಹ ಮುಗ್ಧ ನೋಟ ನೋಡುಗರ ಮನದಲ್ಲಿ ಸ್ಥಿರವಾಗಿ ನೆಲೆಸುವಂತಹ ಅಭಿನಯ, ಅಂತಹ ಅಭಿನಯದಿಂದ ಕೇವಲ ಮೂರನೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡ ಪ್ರತಿಭಾವಂತ ಕನ್ನಡದ ನಟಿ ಎಂದರೆ ಅದು ಪ್ರೇಮ. 90ರ ದಶಕದ ಖ್ಯಾತ ನಟಿ ಪ್ರೇಮಾ ಅವರು ಅಂದಿನ ಕಾಲದಲ್ಲಿಯೇ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು. ಇದೀಗ ಪ್ರೇಮಾ ಅವರು ತಮ್ಮ ನಾಲವತ್ನಾಲ್ಕನೆ ವಯಸ್ಸಿಗೆ ಎರಡನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತ ಇದೆ ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಚತುರ್ಭಾಷೆ ನಟಿ ಪ್ರೇಮಾ ಒಂದು ಕಾಲದ ಬಹುಬೇಡಿಕೆಯ ನಟಿ. ವಿಷ್ಣುವರ್ಧನ್ ರಮೇಶ್ ಅರವಿಂದ್ ಉಪೇಂದ್ರ ಶಿವರಾಜ್‌ಕುಮಾರ್ ವಿ.ರವಿಚಂದ್ರನ್ ಸಾಯಿಕುಮಾರ್ ತೆಲುಗು ನಟ ವೆಂಕಟೇಶ್ ಜಗಪತಿ ಬಾಬು ಮೋಹನ್ ಬಾಬು ಅವರ ಜೊತೆ ಪ್ರೇಮಾ ನಟಿಸಿದ್ದರು. ರಮೇಶ್ ಅರವಿಂದ್ ಅವರು ಪ್ರೇಮಾ ಅವರ ಜೊತೆಗೆ ಸಿನಿಮಾ ಮಾಡುವಾಗ ಅವರ ಎತ್ತರಕ್ಕೆ ಸಮವಾಗಲು ಹೀಲ್ಸ್ ಹಾಕಿಕೊಳ್ಳುತ್ತಿದ್ದರಂತೆ. ಕನ್ನಡದಲ್ಲಿ 55ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಈ ಕೊಡಗಿನ ಸುಂದರಿ. ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಕೂಡ ಇವರು ನಟಿಸಿದ್ದು ಒಟ್ಟಾರೆಯಾಗಿ ನೂರು ಚಿತ್ರಗಳಲ್ಲಿ ನಟಿಸಿದ ಕೀರ್ತಿ ಪ್ರೇಮಾಗೆ ಸಲ್ಲುತ್ತದೆ. 1995ರ ‘ಸವ್ಯಸಾಚಿ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಉಪೇಂದ್ರ , ಯಜಮಾನ, ಓಂ, ನಮ್ಮೂರ ಮಂದಾರ ಹೂವೇ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಓಂ ಚಿತ್ರಕ್ಕೆ ಫಿಲ್ಮ್‌ಫೇರ್ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ ಚತುರ್ಭಾಷೆ ತಾರೆ ಪ್ರೇಮಾ ಅವರು.

2006ರಲ್ಲಿ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಪ್ರೇಮಾ ಅವರಿಗೆ ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದರು. 1995ರಿಂದ 2006ರವರೆಗೆ 11 ವರ್ಷಗಳ ಕಾಲ ಅವರು ಚಿತ್ರರಂಗದಲ್ಲಿ ನಿರಂತರವಾಗಿ ಕೆಲಸ ಮಾಡಿದ್ದಾರೆ. ತದನಂತರ ಪ್ರೇಮ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾರಂಗದಿಂದ ದೂರ ಉಳಿದರು. ಇದಾದ ಬಳಿಕ ಹೆಚ್ಚು ದಿನಗಳ ಕಾಲ ನಟಿ ಪ್ರೇಮ ಅವರ ವೈವಾಹಿಕ ಜೀವನ ನಡೆಯಲಿಲ್ಲ. ಮೊದಲ ಮದುವೆಯ ಕತೆ ಮುಗಿದು ಹೋಗಿದ್ದು ಅಮ್ಮನ ಜೊತೆ ಮಡಿಕೇರಿ ಸೇರಿದ್ದರು. ಇವೆಲ್ಲದರ ನಡುವೆ ತಮ್ಮ ಪ್ರೀತಿಯ ತಂದೆಯನ್ನು ಸಹ ನಟಿ ಪ್ರೇಮಾ ಅವರು ಕಳೆದುಕೊಂಡರು. ನಟಿ ಪ್ರೇಮಾ ಅವರ ತಮ್ಮ ಅಯ್ಯಪ್ಪನ ಮದುವೆ ಸಹ ಇತ್ತೀಚಿಗೆ ಆಗಿದೇ. ಇದೆಲ್ಲದರ ನಡುವೆ ಪ್ರೇಮ ಅವರ ತಾಯಿ ಎರಡನೇ ಮದುವೆ ಆಗು ಎಂಬಂತೆ ಪ್ರೇಮ ಅವರ ಮುಂದೆ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರಂತೆ. ಅದಕ್ಕೆ ಪ್ರೇಮ ಯಾವ ರೀತಿ ಪ್ರತಿಕ್ರಿಯೆ ನೀಡಿದರು ಗೊತ್ತಾ?

ತಂದೆಯನ್ನು ಕಳೆದುಕೊಂಡ ಪ್ರೇಮಾ ಅವರಿಗೆ ಅವರ ತಾಯಿ ಎರಡನೇ ಮದುವೆ ಆಗು ಎಂದು ಹೇಳಿದಾಗ ಪ್ರೇಮ ಅವರು ಈ ರೀತಿಯಾಗಿ ಹೇಳುತ್ತಾರೆ. ತಂದೆಯನ್ನು ಕಳೆದುಕೊಂಡ ಮೇಲೆ ಪ್ರೇಮ ಅವರ ತಾಯಿ ಹೇಳಿದ್ದು ತಾನು ಕೂಡಾ ಇನ್ನು ಎಷ್ಟು ದಿನ ಅಂತಾ ಇರೋದಕ್ಕೆ ಸಾಧ್ಯ? ತನಗೂ ವಯಸ್ಸಾಯಿತು ನೀನು ಇನ್ನೊಂದು ಮದುವೆ ಆಗು ಎಂದು ಹೇಳಿದಾಗ ಪ್ರೇಮ ಅವರು “ಮದುವೆ ಎನ್ನುವುದು ತನ್ನ ಜೀವನದಲ್ಲಿ ಮುಗಿದು ಹೋದ ಅಧ್ಯಾಯ ಇನ್ನೊಂದು ಮದುವೆ ಆಗುವ ಮಾತೇ ಇಲ್ಲಾ ಎಂದು ತಾಯಿ ಹೇಳಿದ ಎರಡನೇ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಆದರೆ ಪ್ರೇಮ ಅವರ ತಾಯಿ ಕಾವೇರಿ ಕೂಡಾ ಪಟ್ಟು ಬಿಡದೆ ಪ್ರೇಮ ಅವರಿಗೆ ಮದುವೆಗೆ ಒತ್ತಾಯ ಮಾಡುತ್ತಲೇ ಇದ್ದಾರೆ. ಹಾಗಿದ್ದರೆ ಪ್ರೇಮ ಅವರು ತಮ್ಮ ಅಂತಿಮ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳುತ್ತಾರೆ? ತಾಯಿಯ ಮಾತಿನ ಹಾಗೆ ಎರಡನೇ ಮದುವೆಗೆ ಒಪ್ಪಿಕೊಳ್ಳುತ್ತಾರ? ಅಥವಾ ಒಬ್ಬಂಟಿಯಾಗಿ ಮುಂದೆ ಕೂಡಾ ಜೀವನ ನಡೆಸುತ್ತಾರ ಎನ್ನುವುದು ಕಾದು ನೋಡಬೇಕಿದೆ.

Leave A Reply

Your email address will not be published.

error: Content is protected !!
Footer code: