ಕನ್ನಡ ಚಿತ್ರರಂಗದಲ್ಲಿ ಅನೇಕ ನಾಯಕ ನಟರಿದ್ದಾರೆ ಅವರಲ್ಲಿ ಕೆಲವರಿಗೆ ಮದುವೆಯ ವಯಸ್ಸಾದರೂ ಇನ್ನೂ ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ ಅಂತಹ ನಟರು ಯಾರು ಯಾರು ಎನ್ನುವ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಆದಿತ್ಯ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ ಇವರಿಗೆ ನಲವತ್ಮೂರು ವರ್ಷ ವಯಸ್ಸಾಗಿದ್ದರೂ ಒಂಟಿಯಾಗಿಯೇ ಉಳಿದಿದ್ದಾರೆ. ಎರಡನೆಯದಾಗಿ ಕಾರ್ತಿಕ್ ಜಯರಾಂ ಜೇಕೆ ಎಂದೇ ಖ್ಯಾತಿಯಾದ ಜೆಕೆ ಅವರು ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಸಿನಿ ಜೀವನವನ್ನು ಪ್ರಾರಂಭಿಸಿದ ಇವರು ಬಿಗ್ ಬಾಸ್ ಮತ್ತು ಕನ್ನಡ ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದುಕೊಂಡಿರುವವರು ನಲವತ್ಮುರು ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಇದ್ದಾರೆ.

ರಕ್ಷಿತ್ ಶೆಟ್ಟಿ ಸಿಂಪಲ್ ಸ್ಟಾರ್ ಎಂದೇ ಖ್ಯಾತಿಯಾದ ರಕ್ಷಿತ್ ಶೆಟ್ಟಿ ಅವರು ಪ್ರೋಡ್ಯುಸರ್ ಡೈರೆಕ್ಟರ್ ಆಕ್ಟರ್ ಆಗಿ ಎಲ್ಲದರಲ್ಲೂ ಯಶಸ್ಸನ್ನು ಕಂಡಿದ್ದು ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ನ್ಯಾಷನಲ್ ಕ್ರಶ್ ರಷ್ಮೀಕಾ ಮಂದಣ್ಣ ಅವರ ಜೊತೆ ಎರಡು ಸಾವಿರದ ಹದಿನೇಳರಲ್ಲಿ ನಿಶ್ಚಿತಾರ್ಥವಾಗಿತ್ತು ಕೆಲವೊಂದು ಕಾರಣಗಳಿಂದ ಅದು ಮುರಿದುಬಿದ್ದಿದ್ದು ಇವರಿಗೆ ಮೂವತ್ತೆಂಟು ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ. ಡಾಲಿ ಧನಂಜಯ ಡೈರೆಕ್ಟರ್ ಸ್ಪೆಷಲ್ ಸಿನಿಮಾದ ಮೂಲಕ ಸಿನಿ ಜೀವನವನ್ನು ಆರಂಭಿಸಿದ ಧನಂಜಯ್ ನಾಯಕ ನಟನಾಗಿ ಮತ್ತು ಖಳನಾಯಕನಾಗಿ ನಟಿಸುವ ಮೂಲಕ ಎಲ್ಲ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ. ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಮೂವತ್ತಾರು ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ.

ತರುಣ್ ಚಂದ್ರ ಖುಷಿ ಸಿನಿಮಾದ ಮೂಲಕ ಸಿನಿ ಜೀವನವನ್ನು ಆರಂಭಿಸಿದ್ದು ಗೆಳೆಯ ಲವ್ ಗುರು ಗಾನ ಬಜಾನ ಸೇರಿದಂತೆ ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಮೂವತ್ತೆಂಟು ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ. ಸತೀಶ್ ನೀನಾಸಂ ಸಹಾಯಕ ನಟನ ಪಾತ್ರಗಳಲ್ಲಿ ನಟಿಸಿ ನಂತರ ಲೂಸಿಯಾ ಸಿನಿಮಾದ ಮೂಲಕ ನಾಯಕ ನಟನಾಗಿ ಖ್ಯಾಟಿಯಾದ ಸತೀಶ್ ಅವರು ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಮೂವತ್ತಾರು ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ. ಚಿಕ್ಕಣ್ಣ ಕಾಮಿಡಿ ಸ್ಟಾರ್ ಆದ ಇವರು ಕಿರಾತಕ ಸಿನಿಮಾದ ಮೂಲಕ ಹಾಸ್ಯ ನಟನಾಗಿ ಸಿನಿ ಜೀವನವನ್ನು ಪ್ರಾರಂಭಿಸಿದ್ದು ಇವರು ಕನ್ನಡ ಚಿತ್ರ ರಂಗದ ಟಾಪ್ ಕಾಮಿಡಿಯನ್ ಗಳಲ್ಲಿ ಒಬ್ಬರಾಗಿದ್ದಾರೆ. ಇವರಿಗೆ ಮೂವತ್ತೇಳು ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಇದ್ದಾರೆ.

ತಿಲಕ್ ಶೇಖರ್ ಗಂಡ ಹೆಂಡತಿ ಮತ್ತು ಬಾಯ್ ಫ್ರೆಂಡ್ ಸಿನಿಮಾದ ಮೂಲಕ ಸಿನಿ ಜೀವನವನ್ನು ಆರಂಭಿಸಿದ ಇವರು ಉಗ್ರಂ ಸಿನಿಮಾದಲ್ಲಿನ ಅಭಿನಯಕ್ಕೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು ನಲವತ್ತು ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ. ಧರ್ಮ ಕೀರ್ತಿ ರಾಜ್ ಕ್ಯಾಡಬರಿಸ್ ಎಂದೇ ಕ್ಯಾತಿಯಾದ ಇವರು ನವಗ್ರಹ ಸಿನಿಮಾದ ಮೂಲಕ ಸಿನಿ ಜೀವನವನ್ನು ಆರಂಭಿಸಿದ್ದು ಮವತ್ತೆಳು ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ. ಇದಿಷ್ಟು ಮೂವತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೂ ಮದುವೆಯಾಗದೆ ಹಾಗೆಯೇ ಉಳಿದುಕೊಂಡಿರುವ ಕನ್ನಡ ಚಿತ್ರ ರಂಗದ ನಟರ ಕುರಿತಾದ ಮಾಹಿತಿಯಾಗಿದೆ.

By admin

Leave a Reply

Your email address will not be published. Required fields are marked *

error: Content is protected !!
Footer code: