2 ತಿಂಗಳ ನಂತರ ಅಪ್ಪು ಬಗ್ಗೆ ನಿಜವಾದ ಸತ್ಯ ತಿಳಿಸಿದ ಬಾಡಿಬಿಲ್ಡರ್ ಮಮತಾ ಏನ್ ಅಂದ್ರು ನೋಡಿ

0

ನಮ್ಮ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಮೂರು ತಿಂಗಳು ಸಮೀಪಿಸುತ್ತಿದೆ ಈಗಲೂ ಕೂಡ ಅವರು ನಮ್ಮೊಂದಿಗಿಲ್ಲ ಎಂಬುದನ್ನು ನಂಬುವುದಕ್ಕೇ ಅಸಾಧ್ಯವಾಗುತ್ತಿಲ್ಲ ತಾವು ಬದುಕಿದ್ದಷ್ಟು ಕಾಲ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾ ದಾನಧರ್ಮಗಳನ್ನು ಮಾಡುತ್ತಾ ಸರಳವಾಗಿ ಜೀವನವನ್ನು ನಡೆಸಿದ್ದರು. ತಮ್ಮ ಸಿನಿಮಾಗಳ ಜೊತೆ ತಾವು ಮಾಡುವ ಕೆಲಸದಲ್ಲಿ ಇತರರಿಗೆ ಆದರ್ಶಪ್ರಾಯರಾಗಿದ್ದರು ಅವರನ್ನು ಮರೆಯುವುದಕ್ಕೆ ಎಂದಿಗೂ ಯಾರಿಂದಲೂ ಸಾಧ್ಯವಿಲ್ಲ ಅವರು ಯಾವಾಗಲೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.

ಇದೀಗ ನನ್ನಮ್ಮ ಸೂಪರ್ಸ್ಟಾರ್ ಸ್ಪರ್ಧೆಯ ಸ್ಪರ್ಧಿ ಹಾಗೂ ಬಾಡಿಬಿಲ್ಡರ್ ಆಗಿರುವ ಮಮತಾ ಅವರು ಪುನೀತ್ ರಾಜಕುಮಾರ್ ಅವರ ಒಳ್ಳೆಯ ಗುಣಗಳ ಕುರಿತಾಗಿ ಏನು ಹೇಳಿದ್ದಾರೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಮಮತಾ ಅವರು ಹೇಳುವುದು ಏನೆಂದರೆ ನನ್ನ ಮೊದಲ ಸಿನಿಮಾ ಯುವರತ್ನ ಅದು ನನಗೆ ಸಿಕ್ಕ ಆಶೀರ್ವಾದ ಅಪ್ಪು ಅವರ ಕೊನೆಯ ಸಿನಿಮಾ ನಿನಗೆ ಮೊದಲ ಸಿನಿಮಾ. ನಾನು ಮೊದಲ ಬಾರಿಗೆ ಅವರನ್ನು ಭೇಟಿ ಮಾಡಲು ಹೋದಾಗ ಅವರು ಆಶ್ಚರ್ಯಚಕಿತರಾಗಿದ್ದರು ಹೇಗೆ ಬಾಡಿ ಬಿಲ್ಡ್ ಮಾಡುತ್ತೀರಾ ಎಂದು ಕೇಳಿದ್ದರು. ಅವರನ್ನು ಒಬ್ಬ ನಟನಾಗಿ ನೋಡುವುದಕ್ಕಿಂತ ಒಬ್ಬ ವ್ಯಕ್ತಿಯಾಗಿ ಇಷ್ಟಪಡುತ್ತೇನೆ. ಅವರೊಂದಿಗೆ ಮಾತನಾಡುವಾಗ ಒಲಂಪಿಕ್ಸ್ ನನ್ನ ಮುಂದಿನ ಗುರಿ ಎಂದು ಹೇಳಿದ್ದೆ ನಿನಗೆ ಏನೇ ಸಹಾಯ ಬೇಕು ಎಂದರೂ ನನಗೆ ಕಾಲ್ ಮಾಡು ಎಂದು ಅವರು ಹೇಳಿದ್ದರು ನನಗೆ ಫೋನ್ ನಂಬರ್ ಕೂಡ ಕೊಟ್ಟಿದ್ದರು.

ಯಾವ ಹೀರೋ ಕೂಡ ಫೋನ್ ನಂಬರನ್ನು ಹಂಚಿಕೊಳ್ಳುವುದಿಲ್ಲ ಆದರೆ ಪುನೀತ್ ಅವರು ಫೋನ್ ನಂಬರ್ ಕೊಟ್ಟು ಸಹಾಯ ಬೇಕಿದ್ದರೆ ಕೇಳಿ ಎಂದು ಹೇಳಿದ್ದರು. ವೀಸಾ ಫ್ಲೈಟ್ ಟಿಕೆಟ್ ಏನೇ ಇದ್ದರೂ ಫೋನ್ ಮಾಡು ಎಂದು ಹೇಳಿದ್ದರು ಅವರು ತುಂಬಾ ಹಂಬಲ್ ಪರ್ಸನ್ ಅವರು ಎಲ್ಲೂ ಹೋಗಿಲ್ಲ ಅವರು ಮಾಡಿರುವ ಒಳ್ಳೆಯ ಕೆಲಸಗಳ ಜೊತೆಗೆ ನಮ್ಮೊಂದಿಗಿರುತ್ತಾರೆ. ನಾವೆಲ್ಲರೂ ಕೂಡ ಅವರ ಒಳ್ಳೆಯ ಕೆಲಸಗಳನ್ನು ಪಾಲಿಸಬೇಕು ಅಷ್ಟೇ ಎಂದು ಮಮತಾ ಅವರು ಅಪ್ಪು ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪುನೀತ್ ರಾಜಕುಮಾರ್ ಅವರು ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಬಡವರಿಗೆ ಅಸಹಾಯಕರಿಗೆ ಮಾಡಿದ್ದಾರೆ ಅವರು ಮಾಡಿರುವ ಒಳ್ಳೆಯ ಕೆಲಸಗಳು ಅವರು ಸದಾ ನಮ್ಮ ನಡುವೆ ಇರುವಂತೆ ಮಾಡುತ್ತವೆ. ಪುನೀತ್ ಅವರು ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ತೆರಳಿದ್ದರೂ ಕೂಡ ಅವರು ಎಲ್ಲೂ ಹೋಗಿಲ್ಲ ಅವರು ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ. ಪುನೀತ್ ಅವರು ಮಾಡಿರುವ ಸಿನಿಮಾಗಳ ಮೂಲಕ ಅವರು ಮಾಡಿರುವ ಸಮಾಜಮುಖಿ ಕಾರ್ಯಗಳ ಮೂಲಕ ಅವರು ಸದಾ ನಮ್ಮ ನಡುವೆ ಜೀವಂತವಾಗಿರುತ್ತಾರೆ ಅವರ ನಗುಮೋಗವನ್ನು ಅವರನ್ನು ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ಮರೆಯುವುದಕ್ಕೆ ಎಂದಿಗೂ ಯಾರಿಂದಲೂ ಸಾಧ್ಯವಿಲ್ಲ.

Leave A Reply

Your email address will not be published.

error: Content is protected !!
Footer code: