10ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಆಯುಷ್ ಇಲಾಖೆಯಲ್ಲಿ ಉದ್ಯೋಗಾವಕಾಶ

0

ಏಳನೇ ತರಗತಿ ಹಾಗೂ 10ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಅರ್ಜಿಗೆ ಆಹ್ವಾನಿಸಲಾಗಿದ್ದು ಅಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ10,000 -35,000 ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದು, ನಂತರ ಅದನ್ನು ಭರ್ತಿ ಮಾಡಿ ಹುದ್ದೆಗೆ ಸಂಬಂಧಪಟ್ಟ ಸ್ವಯಂ ದೃಢೀಕೃತ ದಾಖಲಾತಿಗಳೊಂದಿಗೆ ವಿದ್ಯಾರ್ಹತೆ ಅಂಕಪಟ್ಟಿಯ ಪ್ರತಿ ಗ್ರಾಮೀಣ, ಜಾತಿ ಪ್ರಮಾಣ ಪತ್ರ,371ಜೆ ಪ್ರತಿ ಹಾಗೂ ಭಾವಚಿತ್ರದೊಂದಿಗೆ ಕಚೇರಿಗೆ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ ಆಯುಷ್ ಕಛೇರಿ, ಗಾಜಿಪೂರ,
ಕಲ್ಬುರ್ಗಿ-585101

ಹುದ್ದೆಯ ಹೆಸರು : ಆಯುಷ್ ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್, ಕ್ಷಾರಸೂತ್ರ ಅಟೆಂಡರ್, ಸ್ತ್ರೀರೋಗ ಅಟೆಂಡರ್ (ಮಹಿಳೆ), ಮಲ್ಟಿ ಪರ್ಪಸ್ ವರ್ಕರ್
ಹುದ್ದೆಗಳ ಸಂಖ್ಯೆ : 32 ಹುದ್ದೆ
ಉದ್ಯೋಗ ಸ್ಥಳ : ಕಲಬುರಗಿ ಜಿಲ್ಲೆ

ವಿದ್ಯಾರ್ಹತೆ :ಆಯುಷ್ ತಜ್ಞ ವೈದ್ಯರು: ಸರ್ಕಾರದಿಂದ ಅಂಗೀಕಾರವಾದ ವಿಶ್ವವಿದ್ಯಾಲಯದಿಂದ ಆಯುರ್ವೇದ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರಬೇಕು.

ಔಷಧಿ ವಿತರಕರು: ಎಸ್ ಎಸ್ ಎಲ್ ಸಿ ಮತ್ತು ಡಿಪ್ಲೋಮಾ ಇನ್ ಫಾರ್ಮಸಿ ಅರ್ಹತೆ ಹೊಂದಿರಬೇಕು. ಅಂಗೀಕೃತ ನೊಂದಣಿ ಪ್ರಾಧಿಕಾರದಿಂದ‌ ನೋಂದಣಿಯನ್ನು ಮಾಡಿಕೊಂಡಿರಬೇಕು.

ಮಸಾಜಿಸ್ಟ್ : ಕನಿಷ್ಠ 7ನೇ ತರಗತಿ ಹಾಗೂ ಆಯುಷ್ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಗಳಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.
ಕ್ಷಾರಸೂತ್ರ ಅಟೆಂಡರ್ ಮತ್ತು ಸ್ತ್ರೀರೋಗ ರೋಗ ಅಟೆಂಡರ್: ಕನಿಷ್ಠ 10ನೇ ತರಗತಿ ಹಾಗೂ ಆಯುಷ್ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.
ಮಲ್ಟಿ ಪರ್ಪಸ್ ವರ್ಕರ್: ಕನಿಷ್ಠ 10ನೇ ತರಗತಿ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ.

Leave A Reply

Your email address will not be published.

error: Content is protected !!