ಆತ್ಮೀಯ ಓದುಗರೇ ಮನೂಹ್ಯ ಉತ್ತಮ ಆರೋಗ್ಯಕ್ಕೆ ಬೇಕಾಗುತ್ತದೆ ಒಳ್ಳೆಯ ಆಹಾರ ಗಾಳಿ ನೀರು, ಹೌದು ನಾವುಗಳು ಸೇವನೆ ಮಾಡುವಂತ ಆಹಾರ ಹಾಗೂ ಜೀವನ ಶೈಲಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಕೆಟ್ಟ ಚಟಗಳಿಂದ ದೂರ ಉಳಿದು ಅಷ್ಟೇ ಅಲ್ಲದೆ ಕೆಲವರು ಬೇಕರಿ ತಿನಸುಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ, ಆದ್ರೆ ಅತಿಯಾದರೆ ಅಮೃತವು ಕೂಡ ವಿಷ ಅನ್ನೋದನ್ನ ತಿಳಿಯುವುದು ಒಳ್ಳೇದು.
ಮುಖ್ಯವಾಗಿ ವಿಷ್ಯಕ್ಕೆ ಬರೋಣ ಅಂಜೂರ ಹಾಗೂ ಹಾಲಿನ ಸೇವನೆ ಮನುಷ್ಯತನ ದೇಹಕ್ಕೆ ಎಷ್ಟೊಂದು ಲಾಭವನ್ನು ನೀಡುತ್ತೆ ಹಾಗೂ ಇದರಿಂದ ಯಾವೆಲ್ಲ ಶಾರೀರಿಕ ಸಮಸ್ಯೆಯಿಂದ ದೂರ ಉಳಿಯಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ. ಅಂಜುಟನ ಹಣ್ಣು ನೋಡಲು ಹತ್ತಿಹಣ್ಣು ತರಾನೇ ಇರುತ್ತೆ ಆದ್ರೆ ಅಂಜೂರ ಹಾಗೂ ಹತ್ತಿಹಣ್ಣು ಎರಡು ಕೂಡ ತನ್ನದೆಯಾದ ವಿಶೇಷತೆ ಹೊಂದಿದೆ. ಈ ಅಂಜೂರ ಹಣ್ಣನು ಊಟಕ್ಕೂ ಮುಂಚೆ ತಿಂದ್ರೆ ಒಳ್ಳೆಯ ಅರೋಗ್ಯ ವೃದ್ಧಿಸಿಕೊಳ್ಳಬಹುದು. ಅಂಜೂರ ಹಣ್ಣನ್ನು ಹಣ್ಣಾಗಿ ತಿನ್ನ ಬಹುದು ಒಣಗಿಸಿ ಕೂಡ ತಿನ್ನುವುದರಿಂದ ಹೆಚ್ಚು ಲಾಭ ಪಡೆಯಬಹುದು.
ರಕ್ತಹೀನತೆ ಸಮಸ್ಯೆಯಿಂದ ದೂರ ಉಳಿಯಬಹುದು ಹಾಗೂ ಈ ಹಣ್ಣಿನಲ್ಲಿ ಫೈಬರ್ ಅಂಶ ಇದೆ ಅಲ್ಲದೆ ಶರೀರದಲ್ಲಿ ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುತ್ತದೆ. ಇನ್ನು ಈ ಹಣ್ಣಿನಲ್ಲಿ ಜೀರ್ಣಕ್ರಿಯೆ ಸಮಸ್ಯೆಗೆ ದಿವ್ಯ ಔಷಧ ಅಂಜೂರ. ಹೆಚ್ಚು ಮಹಿಳೆಯರು ರಕ್ತಹೀನತೆ, ರಕ್ತದೊತ್ತಡ, ಜೀರ್ಣಕ್ರಿಯೆ ಸಮಸ್ಯೆಯನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಬಿಪಿ, ಮಧುಮೇಹ ಸಮಸ್ಯೆಯನ್ನು ಅನುಭವಿಸುತ್ತಾರೆ.
ಬಹಳ ಕಡಿಮೆ ಬೆಲೆಗೆ ಅಂಜೂರ ಸಿಗುತ್ತದೆ 2-3 ಅಂಜೂರವನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರಕ್ತದೊತ್ತಡ, ರಕ್ತಹೀನತೆ, ಮಧುಮೇಹ, ಜೀರ್ಣಕ್ರಿಯೆ ಈ ಎಲ್ಲ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಅಂಜೂರದಂತೆ ಅದರ ಎಲೆಯು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ.
ಇನ್ನು ಅಂಜೂರ ಹಣ್ಣಿನ ಎಲೆಯ ಕಷಾಯ ಸೇವನೆ ಮಾಡುವುದರಿಂದ ಶ್ವಾಸಕೋಶದ ಸಮಸ್ಯೆ ನಿವಾರಣೆಯಾಗುತ್ತದೆ. ಅಂಜೂರದ ಬೀಜವು ಸಹ ಆರೋಗ್ಯಕ್ಕೆ ಒಳ್ಳೆಯದು. ಒಂದು ಚಮಚ ಅಂಜೂರದ ಪುಡಿಗೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹಕ್ಕೆ ಅಂಜೂರ ಒಳ್ಳೆಯದು ಎಂದು ಸಂಶೋಧನೆಗಳು ತಿಳಿಸಿವೆ.
ಈ ಹಣ್ಣಿನಲ್ಲಿ ಫೈಬರ್, ಪ್ರೋಟೀನ್, ಕ್ಯಾಲ್ಶಿಯಂ ಅಪಾರ ಪ್ರಮಾಣದಲ್ಲಿದ್ದು ಆರೋಗ್ಯಕ್ಕೆ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರು ಪ್ರತಿದಿನ ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೆ ಹಣ್ಣುಗಳನ್ನು ತಿನ್ನಬೇಕು ಅದರಲ್ಲೂ ಅಂಜೂರ ಹಣ್ಣನ್ನು ಪ್ರತಿದಿನ ತಿನ್ನುವುದು ಒಳ್ಳೆಯ ಅಭ್ಯಾಸ ಆದ್ದರಿಂದ ಎಲ್ಲರೂ ಈ ಅಭ್ಯಾಸವನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.